ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆ ಇದೆ ಎಂದು ಘೋಷಿಸಿದ ಆಂಧ್ರ ಡಿಸಿಎಂ ಪುತ್ರಿ

ದೇವಸ್ಥಾನ ಪ್ರವೇಶಕ್ಕೂ ಮೊದಲು "ತಿರುಮಲ ವೆಂಕಟೇಶ್ವರನ ಮೇಲೆ ನಂಬಿಕೆ ಇದೆʼʼ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪುತ್ರಿ ಘೋಷಣೆ ಮಾಡಿದ್ದಾರೆ.;

Update: 2024-10-02 08:43 GMT
ಪವನ್‌ ಕಲ್ಯಾಣ್‌ ಪುತ್ರಿ ಪುತ್ರಿ ತಿರುಮಲ ವೆಂಕಟೇಶ್ವರನ ಮೇಲೆ ನಂಬಿಕೆ ಇದೆ ಎಂದು ಘೋಷಣೆ ಮಾಡಿದ್ದಾರೆ.
Click the Play button to listen to article

ʻದೇವಸ್ಥಾನದ ಪ್ರವೇಶಕ್ಕೂ ಮೊದಲು ʻತಿರುಮಲ ವೆಂಕಟೇಶ್ವರನ ಮೇಲೆ ನಂಬಿಕೆ ಇದೆʼ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪುತ್ರಿ ಬುಧವಾರ (ಅ.2) ಘೋಷಣೆ ಮಾಡಿದ್ದಾರೆ.

ತಿರುಪತಿ ತಿರುಮಲ ದೇವಸ್ಥಾನಕ್ಕೆ ಹಿಂದೂಯೇತರರು ಭೇಟಿ ನೀಡುವ ಮೊದಲು ದೇವರಲ್ಲಿ ತಮಗೆ ನಂಬಿಕೆ ಇದೆ ಎಂದು ಘೋಷಿಸಬೇಕು ಎಂಬ ನಿಯಮವನ್ನು ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (TTD) ಕಡ್ಡಾಯಗೊಳಿಸಿದೆ. ಆ ಹಿನ್ನೆಲೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

ಪವನ್ ಕಲ್ಯಾಣ್ ಅವರ ಕಿರಿಯ ಪುತ್ರಿ ಪಲೀನಾ ಅಂಜನಿ ಕೊನಿಡೆಲಾ ಅವರು ಹಿಂದೂಯೇತರ ಧರ್ಮದವರಾಗಿದ್ದು, ದಾಖಲೆಗಳಿಗೆ ಸಹಿ ಹಾಕುವ ಮೂಲಕ ತಮಗೆ ವೆಂಕಟೇಶ್ವರ ದೇವರ ಮೇಲೆ ನಂಬಿಕೆ ಇದೆ ಎಂದು ಘೋಷಿಸಿದ್ದಾರೆ. ಪಾಲಿನಾ ಅಂಜನಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಆಕೆಯ ತಂದೆ ಪವನ್ ಕಲ್ಯಾಣ್ ಕೂಡ ದಾಖಲೆಗಳನ್ನು ಅನುಮೋದಿಸಿದ್ದಾರೆ ಎಂದು ಜನಸೇನಾ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಪವನ್‌ ಕಲ್ಯಾಣ್‌ ಅವರು ತಿರುಮಲದಲ್ಲಿ ಹಿಂದಿನ YSRCP ಆಡಳಿತವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ಧೀಕ್ಷೆಯ ಭಾಗವಾಗಿ ದೇವಾಲಯಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ.

ಕ್ರಿಶ್ಚಿಯನ್ನರಾಗಿರುವ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಇದೇ ರೀತಿಯ ಘೋಷಣೆಯನ್ನು ಹೊರಡಿಸಬೇಕು ಎಂದು ಬಿಜೆಪಿ ನಾಯಕರು ಮತ್ತು ಹಲವಾರು ಹಿಂದೂ ಸಂಘಟನೆಗಳು ಇತ್ತೀಚೆಗೆ ಒತ್ತಾಯಿಸಿದ್ದರಿಂದ ಈ ಘೋಷಣೆ ಮಹತ್ವದ್ದಾಗಿದೆ.

Tags:    

Similar News