ಕೊಲಂಬೊ ಬಂದರು ಯೋಜನೆಗೆ ಅಮೆರಿಕದ ಆರ್ಥಿಕ ನೆರವು ಹಿಂಪಡೆದ ಅದಾನಿ ಗ್ರೂಪ್
ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ಯಿಂದ 2023ರ ಹಣಕಾಸು ಮನವಿ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಶ್ರೀಲಂಕಾದ ಬಂದರು ಯೋಜನೆಗೆ ಅಮೆರಿಕದಲ್ಲಿ ಮಾಡಲಾಗಿದ್ದ ಹಣಕಾಸು ನೆರವು ಮನವಿಯನ್ನು ವಾಪಸ್ ಪಡೆಯಲಾಗುವುದು ಹಾಗೂ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸುವುದಾಗಿ ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಮೂಹ ಮಂಗಳವಾರ ಹೇಳಿದೆ.
ಅದಾನಿ ಪೋರ್ಟ್ಸ್ ಮತ್ತು ಎಸ್ಇಝಡ್ ಲಿಮಿಟೆಡ್ ಮಂಗಳವಾರ ತಡರಾತ್ರಿ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ, ಈ ಯೋಜನೆಯು ಮುಂದಿನ ವರ್ಷದ ಆರಂಭದಲ್ಲಿ ಕಾರ್ಯಾರಂಭ ಮಾಡುವ ಹಾದಿಯಲ್ಲಿದೆ. ಕಂಪನಿಯು ತನ್ನ ಬಂಡವಾಳ ನಿರ್ವಹಣಾ ಕಾರ್ಯತಂತ್ರದೊಂದಿಗೆ ಹೊಂದಿಕೆಯಾಗುವ ಆಂತರಿಕ ನಿಧಿ ಸಂಗ್ರಹಣೆ ಮೂಲಕ ಯೋಜನೆಗೆ ಧನಸಹಾಯ ನೀಡಲಿದೆ ಎಂದು ಹೇಳಿದೆ.
ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ಯಿಂದ 2023ರ ಹಣಕಾಸು ಮನವಿ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಶ್ರೀಲಂಕಾದ ಕೊಲಂಬೊ ಬಂದರಿನಲ್ಲಿ ಕೊಲಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್ (ಸಿಡಬ್ಲ್ಯೂಐಟಿ) ಎಂದು ಕರೆಯಲ್ಪಡುವ ಆಳ ನೀರಿನ ಕಂಟೇನರ್ ಟರ್ಮಿನಲ್ ಅಭಿವೃದ್ಧಿ, ನಿರ್ಮಾಣಕ್ಕೆ ಯುಎಸ್ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಬಳಿಯಿಂದ ನವೆಂಬರ್ನಲ್ಲಿ 553 ಮಿಲಿಯನ್ ಡಾಲರ್ ಸಾಲಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಒಪ್ಪಿಗೆ ಸಿಕ್ಕಿತ್ತು.
ಸಿಡಬ್ಲ್ಯುಟಿಸಿ ಅದಾನಿ ಪೋರ್ಟ್ಸ್, ಶ್ರೀಲಂಕಾದ ಜಾನ್ ಕೀಲ್ಸ್ ಹೋಲ್ಡಿಂಗ್ಸ್ ಪಿಎಲ್ಸಿ ಮತ್ತು ಶ್ರೀಲಂಕಾ ಬಂದರು ಪ್ರಾಧಿಕಾರ (ಎಸ್ಎಲ್ಪಿಎ) ಒಕ್ಕೂಟ ಅಭಿವೃದ್ಧಿಪಡಿಸುತ್ತಿದೆ.
ಅಮೆರಿಕದಲ್ಲಿ ಲಂಚದ ಆರೋಪ
ಅದಾನಿ ಗ್ರೂಪ್ ಕಾರ್ಯನಿರ್ವಾಹಕರ ವಿರುದ್ಧದ ಲಂಚದ ಆರೋಪಗಳ ಪರಿಣಾಮಗಳನ್ನು ಸಕ್ರಿಯವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಯುಎಸ್ ಏಜೆನ್ಸಿ ಇತ್ತೀಚೆಗೆ ಹೇಳಿದೆ. ಇದು ಇಲ್ಲಿಯವರೆಗೆ ಬಂದರುಗಳಿಂದ ಇಂಧನ ಸಂಸ್ಥೆಗೆ ಯಾವುದೇ ಹಣವನ್ನು ವಿತರಿಸಿಲ್ಲ.
ಕಳೆದ ತಿಂಗಳು, ಅದಾನಿ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಏಳು ಜನರ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಬಂಧನಕ್ಕೆ ವಾರಂಟ್ ಜಾರಿ ಮಾಡಲಾಗಿತ್ತು. ಸೌರ ವಿದ್ಯುತ್ ಸರಬರಾಜು ಒಪ್ಪಂದಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಲಂಚ ನೀಡಿದ ಆರೋಪ ಹೊರಿಸಲಾಗಿತ್ತು.
ಕೊಲಂಬೊ ಬಂದರು ಹಿಂದೂ ಮಹಾಸಾಗರದ ಅತಿದೊಡ್ಡ ಮತ್ತು ನಿಬಿಡ ಬಂದರು. ಇದು 2021ರಿಂದ ಶೇಕಡಾ 90ಕ್ಕಿಂತ ಹೆಚ್ಚುಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶ್ರೀಲಂಕಾದಲ್ಲಿ ಭೌಗೋಳಿಕವಾಗಿ ಸೂಕ್ಷ್ಮ ಬಂದರು ಯೋಜನೆಯು ದ್ವೀಪ ರಾಷ್ಟ್ರದಲ್ಲಿ ಚೀನಾದ ಪ್ರಭಾವ ಎದುರಿಸಲು ಅಮೆರಿಕದ ಕ್ರಮವಾಗಿದೆ.
ಯೋಜನೆಯ ಮೊದಲ ಹಂತವು 2025 ರ ಮೊದಲ ತ್ರೈಮಾಸಿಕದ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಹೊಸ ಟರ್ಮಿನಲ್ ಬಂಗಾಳ ಕೊಲ್ಲಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆಗೆ ಪೂರಕವಾಗಿದೆ.
ಕೊಲಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್ (ಸಿಡಬ್ಲ್ಯೂಐಟಿ) ಯೋಜನೆಯನ್ನು ಸೆಪ್ಟೆಂಬರ್ 2021 ರಲ್ಲಿ ಅದಾನಿ ಪೋರ್ಟ್ಸ್ ಶ್ರೀಲಂಕಾ ಬಂದರು ಪ್ರಾಧಿಕಾರ ಮತ್ತು ಶ್ರೀಲಂಕಾದ ಜಾನ್ ಕೀಲ್ಸ್ ಹೋಲ್ಡಿಂಗ್ಸ್ನೊಂದಿಗೆ ಕೈಗೆತ್ತಿಕೊಂಡಿದೆ.
ಸಿಡಬ್ಲ್ಯೂಐಟಿ ಶ್ರೀಲಂಕಾದ ಅತಿದೊಡ್ಡ ಮತ್ತು ಆಳ ಕಂಟೇನರ್ ಟರ್ಮಿನಲ್. 1,400 ಮೀಟರ್ ಉದ್ದ ಮತ್ತು 20 ಮೀಟರ್ ಆಳ ಹೊಂದಿದೆ. ಪೂರ್ಣಗೊಂಡಾಗ, ಟರ್ಮಿನಲ್ 24,000 ಟಿಇ ಸಾಮರ್ಥ್ಯದೊಂದಿಗೆ ಅಲ್ಟ್ರಾ ಲಾರ್ಜ್ ಕಂಟೇನರ್ ಹಡಗುಗಳನ್ನು (ಯುಎಲ್ಸಿವಿ) ನಿರ್ವಹಿಸಲು ಸಾಧ್ಯವಾಗುತ್ತದೆ. ವಾರ್ಷಿಕ 32 ಲಕ್ಷ ಹಡಗುಗಳ ನಿರ್ವಹಣಾ ಸಾಮರ್ಥ್ಯ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸೆಪ್ಟೆಂಬರ್ 30, 2024 ರ ಹೊತ್ತಿಗೆ, ಅದಾನಿ ಪೋರ್ಟ್ಸ್ ಸರಿಸುಮಾರು 1.1 ಬಿಲಿಯನ್ ಡಾಲರ್ (8,893 ಕೋಟಿ ರೂ.) ನಗದು ಮೀಸಲುಗಳನ್ನು ಹೊಂದಿತ್ತು. ಕಳೆದ 12 ತಿಂಗಳಲ್ಲಿ 2.3 ಬಿಲಿಯನ್ ಡಾಲರ್ (18,846 ಕೋಟಿ ರೂ.) ಕಾರ್ಯಾಚರಣೆ ಲಾಭವನ್ನು ಗಳಿಸಿದೆ.