Farmers Protest: ಆಮರಣ ಉಪವಾಸ ಅಂತ್ಯಗೊಳಿಸಿದ 121 ರೈತರು

Farmers Protest: ದಲ್ಲೇವಾಲ್‌ ಅವರು ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಮತ್ತು ಅವರ ಬೇಡಿಕೆಗಳಿಗೆ ಸರ್ಕಾರ ಒಪ್ಪದ ಕಾರಣ, 112 ರೈತರ ಗುಂಪು ಜನವರಿ 15 ರಂದು ದಲ್ಲೇವಾಲ್ ಅವರ ಆಮರಣಾಂತ ಉಪವಾಸಕ್ಕೆ ಜತೆಯಾಗಿದ್ದರು.;

Update: 2025-01-19 10:46 GMT
ರೈತರ ಪ್ರತಿಭಟನೆ

ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ಬೆಂಬಲ ಸೂಚಿಸಿ ಖನೌರಿ ಪ್ರತಿಭಟನಾ ಸ್ಥಳದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 121 ರೈತರು ಭಾನುವಾರ ತಮ್ಮ ನಿರಶನ ಅಂತ್ಯಗೊಳಿಸಿದೆ.

ನವೆಂಬರ್ 26ರಂದು ದಲ್ಲೇವಾಲ್‌ ಆಮರಣಾಂತ ಉಪವಾಸ ಕುಳಿತಿದ್ದರು. ಅಲ್ಲಿಂದ ಯಾವುದೇ ನೆರವು ನಿರಾಕರಿಸಿದ್ದರು. ರೈತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಫೆಬ್ರವರಿ 14 ರಂದು ಮಾತುಕತೆಗೆ ಕೇಂದ್ರ ಸರ್ಕಾರ ಆಹ್ವಾನದ ನೀಡಿದ ನಂತರ 70 ವರ್ಷದ ದಲ್ಲೇವಾಲ್‌ ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರೈತರ ಗುಂಪು ಕೂಡ ಪ್ರತಿಭಟನೆ ನಿಲ್ಲಿಸಿದೆ.

ದಲ್ಲೇವಾಲ್‌ ಅವರು ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಮತ್ತು ಅವರ ಬೇಡಿಕೆಗಳಿಗೆ ಸರ್ಕಾರ ಒಪ್ಪದ ಕಾರಣ, 111 ರೈತರ ಗುಂಪು ಜನವರಿ 15 ರಂದು ದಲ್ಲೇವಾಲ್ ಅವರ ಆಮರಣಾಂತ ಉಪವಾಸಕ್ಕೆ ಜತೆಯಾಗಿದ್ದರು. ಖನೌರಿ ಬಳಿಯ ಗಡಿಯ ಹರಿಯಾಣ ಭಾಗದಲ್ಲಿ ನಿರಶನ ರಾಂಬಿಸಿದ್ದರು. ಜನವರಿ 17ರಂದು, ಹರಿಯಾಣದ ಇನ್ನೂ 10 ರೈತರು ಅವರೊಂದಿಗೆ ಸೇರಿಕೊಂಡಿದ್ದರು.

ಇದೀಗ ಉಪ ಪೊಲೀಸ್ ಮಹಾನಿರ್ದೇಶಕ ಮಂದೀಪ್ ಸಿಂಗ್ ಸಿಧು ಮತ್ತು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಅವರ ಸಮ್ಮುಖದಲ್ಲಿ 121 ರೈತರು ಹಣ್ಣಿನ ರಸ ಕುಡಿಯುವ ಮೂಲಕ ಉಪವಾಸ ಕೊನೆಗೊಳಿಸಿದ್ದಾರೆ.

ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಉನ್ನತ ಮಟ್ಟದ ಕೇಂದ್ರ ನಿಯೋಗವು ಶನಿವಾರ ರೈತ ಮುಖಂಡ ದಲ್ಲೆವಾಲ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳನ್ನು ಭೇಟಿ ಮಾಡಿ ಫೆಬ್ರವರಿ 14 ರಂದು ಚಂಡೀಗಢದಲ್ಲಿ ಮಾತುಕತೆಗೆ ಆಹ್ವಾನಿಸಿದೆ.

ಸಭೆಯ ಘೋಷಣೆಯ ನಂತರ, ದಲ್ಲೆವಾಲ್ ವೈದ್ಯಕೀಯ ನೆರವು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರು. ಬಳಿಕ ದಲ್ಲೆವಾಲ್ ಅವರಿಗೆ ಡ್ರಿಪ್‌ ಮೂಲಕ ವೈದ್ಯಕೀಯ ಸಹಾಯ ನೀಡಲಾಗುತ್ತಿದೆ. . ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವವರೆಗೂ ದಲ್ಲೆವಾಲ್ ತಮ್ಮ ಅನಿರ್ದಿಷ್ಟ ಉಪವಾಸವನ್ನು ಕೊನೆಗೊಳಿಸುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.  

Tags:    

Similar News