ವಿಶ್ವಕಪ್ ಫೈನಲ್ | ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಿದ್ದು ಏಕೆ?

ವಿಶ್ವಕಪ್‌ನ ಫೈನಲ್ ಪದ್ಯದಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿರುವ ಪ್ರಮುಖ ಕಾರಣವನ್ನು ಬಹಿರಂಗಪಡಿಸಿದೆ.;

Update: 2024-02-05 06:30 GMT

ಅಹಮದಾಬಾದ್‌ನಲ್ಲಿ ನಡೆದ 2023 ರ ವಿಶ್ವಕಪ್‌ನ ಫೈನಲ್ ಪದ್ಯದಲ್ಲಿ ಗೆದ್ದಿರುವ ಆಸ್ಟ್ರೇಲಿಯಾ

ತಂಡ ಭಾರತದ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿರುವ ಪ್ರಮುಖ

ಕಾರಣವನ್ನು ಬಹಿರಂಗಪಡಿಸಿದೆ.

ಭಾನುವಾರ (ನವೆಂಬರ್ 19) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್

ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ಅವರು ಟಾಸ್‌ ಗೆದ್ದು ಮೊದಲು

ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಅವರ ನಿರ್ಧಾರವು ಎಲ್ಲರಿಗೂ ಆಶ್ಚರ್ಯಗೊಳಿಸಿತು. ಟಾಸ್

ಗೆದ್ದಿದ್ದರೆ ಮೊದಲು ಬ್ಯಾಟಿಂಗ್ ಮಾಡುವುದಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ

ಹೇಳಿದ್ದರು. ಹಾಗಾಗಿ ಟಾಸ್‌ನಲ್ಲಿ ಇಬ್ಬರೂ ನಾಯಕರು ತಮಗೆ ಬೇಕಾದುದನ್ನು ಪಡೆದರು.

ಭಾರತ ನಿಧಾನಗತಿಯ ಪಿಚ್‌ನಲ್ಲಿ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಗತ್ತು. ಆಸ್ಟ್ರೇಲಿಯಾ

ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅಮೋಘ 137 ರನ್ ಗಳಿಸುವುದರೊಂದಿಗೆ ಆರು ವಿಕೆಟ್‌ಗಳಿಂದ

ಗೆದ್ದಿತು.

ವಿಶ್ವಕಪ್‌ ಟೂರ್ನಿಯಲ್ಲಿ ನಿರಂತರವಾಗಿ ಎಲ್ಲಾ 10 ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಕಂಡಿದ್ದರು

ಆದರೆ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಬಳಿಕ ಭಾರತೀಯ ಅಭಿಮಾನಿಗಳು, ಆಟಗಾರರು ಮತ್ತು

ದೇಶದ ಮಾಜಿ ಕ್ರಿಕೆಟಿಗರಿಗೆ ನಿರಾಸೆಯಾಗಿದೆ. ಈ ಸಂದರ್ಭದಲ್ಲಿ ರವಿಚಂದ್ರನ್ ಅಶ್ವಿನ್ ಅವರು

ಆಸ್ಟ್ರೇಲಿಯಾ ಏಕೆ ಫೈನಲ್ ಗೆದ್ದಿತು ಎಂದು ಅದ್ಭುತವಾಗಿ ವಿಶ್ಲೇಷಿಸಿದ್ದಾರೆ.

ವಿಶ್ವಕಪ್ 2023 ರ ಫೈನಲ್‌ನಲ್ಲಿ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಆಸ್ಟ್ರೇಲಿಯಾದ ಮುಖ್ಯ

ಆಯ್ಕೆಗಾರ ಜಾರ್ಜ್ ಬೈಲಿ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಅಶ್ವಿನ್ ಬಹಿರಂಗಪಡಿಸಿದ್ದಾರೆ.

ʼʼಆಸ್ಟ್ರೇಲಿಯವು ವಿಧಿ ಅಥವಾ ಅದೃಷ್ಟದ ಕಾರಣದಿಂದ ಗೆದ್ದಿಲ್ಲ . ಅವರು ಫೈನಲ್‌ನಲ್ಲಿ

ತಂತ್ರಗಾರಿಕೆಯಿಂದ ಗೆದ್ದಿದ್ದಾರೆʼʼ ಎಂದು ಅಶ್ವಿನ್ ಗುರುವಾರ (ನವೆಂಬರ್ 23) ತಮ್ಮ ಯೂಟ್ಯೂಬ್

ಚಾನೆಲ್‌ನಲ್ಲಿ ಹೇಳಿದ್ದಾರೆ.

ʼʼ ಟಾಸ್ ಗೆದ್ದರೆ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುತ್ತದೆ ಎಂದು ನಾನು ಭಾವಿಸಿದ್ದೆ, ಏಕೆಂದರೆ

ಅವರು ಯಾವುದೇ ಪಂದ್ಯದಲ್ಲಾಗಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡುತ್ತಾರೆ. ಫೈನಲ್‌

ಪಂದ್ಯದ ಕ್ರೀಡಾಂಗಣದಲ್ಲಿ ಬಳಸಲಾದ ಮಣ್ಣು ಅಹಮದಾಬಾದ್‌ನದ್ದಲ್ಲ, ಅದು ಅದು ಒಡಿಶಾದ್ದು.

ಇದು ಒದಲು ಬೌಲಿಂಗ್‌ ಮಾಡಿದ ಆಸ್ಟ್ರೇಲಿಯಾಗೆ ಹೆಚ್ಚು ಅನುಕೂಲಕರವಾಗಿತ್ತುʼʼ ಎಂದು ಅಶ್ವಿನ್‌

ಹೇಳಿದ್ದಾರೆ.

ʼʼಲಕ್ನೋದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ಪಿಚ್‌ಗೆ ಕೆಂಪು ಮಣ್ಣು ಬಳಸಲಾಗಿತ್ತು. ಕೆಂಪು

ಮಣ್ಣಿನ ಮೇಲ್ಮೈಯಲ್ಲಿ ಮೊದಲು ಬ್ಯಾಟ್ ಮಾಡುವುದು ಉತ್ತಮ, ಆದರೆ ಕಪ್ಪು ಮಣ್ಣಿನ ಮೇಲ್ಮೈಯಲ್ಲಿ

ಚೇಸ್ ಮಾಡುವುದು ಇನ್ನೂ ಉತ್ತಮ ಎಂದು ಆಸ್ಟ್ರೇಲಿಯಾಕ್ಕೆ ಅರಿವಾಗಿದೆʼʼ ಎಂದು ಅಶ್ವಿನ್‌

ಅಭಿಪ್ರಾಯ ಪಟ್ಟಿದ್ದಾರೆ.

ಒಂದೇ ಒಂದು ಪಂದ್ಯವನ್ನಾಡಿದ ಅಶ್ವಿನ್‌ಗೆ ನಿರಾಸೆಯಾಗಿದೆ. ಭಾರತವು ಶ್ರೇಷ್ಠ ವಿಶ್ವಕಪ್ ಗೆಲ್ಲುವ

ಮಹಾದಾಸೆಯನ್ನು ಹೊಂದಿತ್ತು. ಟೂರ್ನಿಯಲ್ಲಿ ತಂಡವು ಅತ್ಯುತ್ತಮವಾಗಿದೆ ಆಡಿದೆ ಆದರೆ

ಫೈನಲ್‌ನಲ್ಲಿ ಮಾತ್ರ ದೊಡ್ಡ ಹೊಡೆತ ಅನುಭವಿಸಿತು ಎಂದು ಅಶ್ವಿನ್ ಹೇಳಿದರು.

ʼʼಚೆನ್ನೈನಲ್ಲಿ ಒಂದು ಪಂದ್ಯವನ್ನು ಆಡಿದ ಬಳಿಕ ವಿಶ್ವಕಪ್‌ನಲ್ಲಿ ನನ್ನ ಓಟವು ಕೊನೆಗೊಳ್ಳುತ್ತದೆ ಎಂದು

ನಾನು ಎಂದಿಗೂ ಯೋಚಿಸಿರಲಿಲ್ಲ, ಏಕೆಂದರೆ ನಾನು ಉತ್ತಮ ಲಯದೊಂದಿಗೆ ಬೌಲಿಂಗ್

ಮಾಡುತ್ತಿದ್ದೆʼʼ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದರು. ವಿಶ್ವಕಪ್ ಫೈನಲ್ | ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಿದ್ದು ಏಕೆ?

ಮಾಡುತ್ತಿದ್ದೆʼʼ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದರು.

Tags:    

Similar News