ವಿಶ್ವ ಕಪ್ ಅಂತಿಮ ಪಂದ್ಯದ ವೀಕ್ಷಕರ ಸಂಖ್ಯೆ 30 ಕೋಟಿ: ಡಿಸ್ನಿ ಸ್ಟಾರ್
ಬಿಎಆರ್‌ಸಿ ದತ್ತಾಂಶದ ಪ್ರಕಾರ, ಪಂದ್ಯಾವಳಿಯು 518 ಮಿಲಿಯನ್ ಟಿವಿ ವೀಕ್ಷಕರೊಂದಿಗೆ ದಾಖಲೆಯನ್ನು ನಿರ್ಮಿಸಿದೆ. ʼಫೈನಲ್ ಪಂದ್ಯವನ್ನು 30 ಕೋಟಿಗೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದಾರೆ. ಇದು ಈವರೆಗೆ ಅತಿ ಹೆಚ್ಚು ವೀಕ್ಷಿಸಿದ ಪಂದ್ಯವಾಗಿದೆ.;
ನವದೆಹಲಿ: ಡಿಸ್ನಿ ಸ್ಟಾರ್ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವಕಪ್ 2023 ಫೈನಲ್ ಇದುವರೆಗೆ ಅತಿ ಹೆಚ್ಚು ವೀಕ್ಷಿಸಿದ ಪಂದ್ಯವಾಗಿದೆ. 30 ಕೋಟಿಗೂ ಹೆಚ್ಚು ವೀಕ್ಷಕರು ನೇರ ಪ್ರಸಾರವನ್ನು ವೀಕ್ಷಿಸಿದ್ದಾರೆ.
ಬಿಎಆರ್‌ಸಿ ದತ್ತಾಂಶದ ಪ್ರಕಾರ, ಪಂದ್ಯಾವಳಿಯು 518 ಮಿಲಿಯನ್ ಟಿವಿ ವೀಕ್ಷಕರೊಂದಿಗೆ ದಾಖಲೆಯನ್ನು ನಿರ್ಮಿಸಿದೆ. ʼಫೈನಲ್ ಪಂದ್ಯವನ್ನು 30 ಕೋಟಿಗೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದಾರೆ. ಇದು ಈವರೆಗೆ ಅತಿ ಹೆಚ್ಚು ವೀಕ್ಷಿಸಿದ ಪಂದ್ಯವಾಗಿದೆ,ʼ ಎಂದು ಕಂಪನಿಯು ಹೇಳಿದೆ. ಭಾರತ-ಪಾಕಿಸ್ತಾನ ಪಂದ್ಯವನ್ನು 7.5 ಕೋಟಿ ಮತ್ತು ಭಾರತ -ನ್ಯೂಜಿಲೆಂಡ್ ಪಂದ್ಯವನ್ನು 8 ಕೋಟಿ ಮಂದಿ ನೋಡಿದ್ದಾರೆ.
ಕಂಪನಿ ಡಿಸ್ನಿ+ ಹಾಟ್‌ಸ್ಟಾರ್ ಮೂಲಕ ತನ್ನದೇ ದಾಖಲೆಯನ್ನು ಐದು ಬಾರಿ ಮುರಿದಿದ್ದು, ಫೈನಲ್‌ನ್ನು 5.9 ಕೋಟಿ ವೀಕ್ಷಕರು ನೋಡಿದ್ದಾರೆ. ಇದು ಮಾಧ್ಯಮಗಳ ಬೆಳವಣಿಗೆಗೆ ಉತ್ತೇಜನಕಾರಿಯಾಗಿದ್ದು, ಕ್ರಿಕೆಟ್‌ನ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಡಿಸ್ನಿ ಸ್ಟಾರ್ ಕಂಟ್ರಿ ಮ್ಯಾನೇಜರ್ ಮತ್ತು ಅಧ್ಯಕ್ಷ ಕೆ. ಮಾಧವನ್ ಹೇಳಿದ್ದಾರೆ. ಡಿಸ್ನಿ ಸ್ಟಾರ್ ಪಂದ್ಯಾವಳಿಗಳ ಪ್ರಸಾರ ಮತ್ತು ಮಾಧ್ಯಮ ಹಕ್ಕುಗಳನ್ನು ಹೊಂದಿದೆ.