Paris Olympics 2024| ಸ್ವಪ್ನಿಲ್ ಕುಸಾಲೆಗೆ ಕಂಚು

ಸ್ವಪ್ನಿಲ್‌ ಕುಸಾಲೆ ಅವರು ಒಲಿಂಪಿಕ್ಸ್‌ನಲ್ಲಿ 50 ಮೀಟರ್ ರೈಫಲ್ (3 ಭಂಗಿಗಳ) ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ.

Update: 2024-08-01 09:04 GMT

ಶೂಟರ್ ಸ್ವಪ್ನಿಲ್ ಕುಸಾಲೆ ಅವರು 50 ಮೀಟರ್ ರೈಫಲ್ (3 ಭಂಗಿಗಳು)ನಲ್ಲಿ ಗುರುವಾರ(ಆಗಸ್ಟ್ 1) ಕಂಚಿನ ಪದಕ ಗೆದ್ದರು.

ಭಾರತಕ್ಕೆ ಈವರೆಗೆ ಮೂರು ಕಂಚಿನ ಪದಕಗಳು ಬಂದಿದ್ದು, ಎಲ್ಲವೂ ಶೂಟಿಂಗ್‌ನಿಂದ ಬಂದಿವೆ. 

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಮನು ಭಾಕರ್‌, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸರಬ್ಜೋತ್ ಸಿಂಗ್-ಮನು ಭಾಕರ್‌ ಹಾಗೂ ಕುಸಾಲೆ(28) ಮೂರನೇ ಕಂಚಿನ ಪದಕ ಪಡೆದಿದ್ದಾರೆ. ಕುಸಾಲೆ ಅವರು ಒಲಿಂಪಿಕ್ಸ್‌ನಲ್ಲಿ 50 ಮೀಟರ್ ರೈಫಲ್ (3 ಭಂಗಿಗಳು) ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯರು.

ಚೀನಾದ ಲಿಯು ಯುಕುನ್ (463.6) ಚಿನ್ನ, ಹಾಗೂ ಉಕ್ರೇನ್‌ನ ಸೆರ್ಹಿ ಕುಲಿಶ್ (461.3) ಬೆಳ್ಳಿ ಪದಕ ಪಡೆದರು. ಫೈನಲ್‌ನಲ್ಲಿ ಕುಸಾಲೆ ಅವರು ಒಟ್ಟು 451.4 ಅಂಕ ಗಳಿಸಿದರು. 

ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 50 ಮೀಟರ್ ರೈಫಲ್ (3 ಭಂಗಿಗಳು) ಪಂದ್ಯದಲ್ಲಿ ಕುಸಾಲೆ, ಐಶ್ವರಿ ತೋಮರ್ ಮತ್ತು ಅಖಿಲ್ ಶೆರಾನ್, ಚಿನ್ನದ ಪದಕ ಗೆದ್ದಿದ್ದರು. ಕೊಲ್ಹಾಪುರದಲ್ಲಿ ತೇಜಸ್ವಿನಿ ಸಾವಂತ್ ಅವರ ಬಳಿ ತರಬೇತಿ ಪಡೆಯುತ್ತಿರುವ ಕುಸಾಲೆ, ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 50 ಮೀಟರ್ ರೈಫಲ್ (3 ಭಂಗಿಗಳು) ನಾಲ್ಕನೇ ಸ್ಥಾನ ಗಳಿಸಿದ್ದರು. 

2012 ರಲ್ಲಿ ಲಂಡನ್‌ನಲ್ಲಿ ಜೋಯ್‌ದೀಪ್ ಕರ್ಮಾಕರ್ 50 ಮೀ ರೈಫಲ್ ಪ್ರೋನ್ ಈವೆಂಟ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಆನಂತರ ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ತೆಗೆದು ಹಾಕಲಾಗಿತ್ತು.

ಕುಸಾಲೆ ಅವರು ವೃತ್ತಿಯಲ್ಲಿ ರೈಲ್ವೆ ಟಿಕೆಟ್ ಕಲೆಕ್ಟರ್ ; ಕ್ರಿಕೆಟ್ ಆಟಗಾರ ಎಂ.ಎಸ್. ಧೋನಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ.

Tags:    

Similar News