Paris Olympics 2024 | ಪುರುಷರ ಹಾಕಿ: ಐರ್ಲೆಂಡ್ ತಂಡವನ್ನು ಮಣಿಸಿದ ಭಾರತ

ಭಾರತ ಶುಕ್ರವಾರ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮುನ್ನ ಹಾಲಿ ಚಾಂಪಿಯನ್ ಬೆಲ್ಜಿಯಂನ್ನು ಎದುರಿಸಲಿದೆ.;

Update: 2024-07-30 13:49 GMT

ಪ್ಯಾರಿಸ್, ಜು.30- ಪುರುಷರ ಹಾಕಿ ಕಂಚಿನ ಪದಕ ವಿಜೇತ ಭಾರತ ತಂಡವು 2-0 ಗೋಲುಗಳಿಂದ ಐರ್ಲೆಂಡ್ ನ್ನು ಮಣಿಸಿದೆ.

ನಾಯಕ ಹರ್ಮನ್‌ಪ್ರೀತ್ ಸಿಂಗ್ (11, 19ನೇ ನಿಮಿಷ) ಪೆನಾಲ್ಟಿ ಸ್ಟ್ರೋಕ್ ಮತ್ತು ಆನಂತರ ಪೆನಾಲ್ಟಿ ಕಾರ್ನರ್ ಅನ್ನು ಗೋಲ್‌ ಆಗಿ ಪರಿವರ್ತಿಸಿ, ತಂಡಕ್ಕೆ ನಿರ್ಣಾಯಕ ಜಯ ತಂದುಕೊಟ್ಟರು. 

ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸುವ ಮೊದಲು ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 3-2 ರಿಂದ ಸೋಲಿಸಿತ್ತು. 

ಕಳೆದ ಎರಡು ಪಂದ್ಯಗಳಿಗಿಂತ ಭಿನ್ನವಾಗಿ, ಭಾರತವು ಐರ್ಲೆಂಡ್ ವಿರುದ್ಧ ಆಟವನ್ನು ಆಕ್ರಮಣಕಾರಿಯಾಗಿ ಪ್ರಾರಂಭಿಸಿತು. ಎರಡನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಆದರೆ, ಹರ್ಮನ್ಪ್ರೀತ್ ಗೋಲ್‌ ಆಗಿಸುವಲ್ಲಿ ವಿಫಲರಾದರು. ಆದರೆ, ಗುರ್ಜಂತ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಜೋಡಿ ಒಳವೃತ್ತವನ್ನು ಪ್ರವೇಶಿಸಿತು. ಐರಿಶ್ ರಕ್ಷಣಾ ತಂಡ ಫೌಲ್ ಮಾಡಿದ್ದರಿಂದ ಪೆನಾಲ್ಟಿ ಸಿಕ್ಕಿತು. 11ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದಾಗ, ಭಾರತ ಮುನ್ನಡೆ ಸಾಧಿಸಿತು. 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಪಡೆದುಕೊಂಡಿತು ಮತ್ತು ಹರ್ಮನ್‌ಪ್ರೀತ್ ಚೆಂಡು ಗುರಿ ಮುಟ್ಟಿದರು.

 ಭಾರತ ಶುಕ್ರವಾರ ಬಲಿಷ್ಠ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಮುನ್ನ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಎದುರಿಸಲಿದೆ.

Tags:    

Similar News