Paris Olympics: ಹಾಕಿ- ಅರ್ಜೆಂಟೀನಾ ವಿರುದ್ಧ 1-1 ಡ್ರಾ
ಉಪನಾಯಕ ಹಾರ್ದಿಕ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್ ಮತ್ತಿತರರ ಕಳಪೆ ಪ್ರದರ್ಶನದಿಂದ ಭಾರತೀಯರು ಅವಕಾಶಗಳಿಂದ ವಂಚಿತರಾದರು. 10 ಪೆನಾಲ್ಟಿ ಕಾರ್ನರ್ ಗಳಲ್ಲಿ ಒಂದು ಮಾತ್ರ ಗೋಲ್ ಆಗಿ ಪರಿವರ್ತನೆ ಆಯಿತು.;
ಪ್ಯಾರಿಸ್, ಜು.29- ಅರ್ಜೆಂಟೀನಾ ವಿರುದ್ಧದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ 1-1 ಡ್ರಾ ಸಾಧಿಸಿದೆ. ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತೊಮ್ಮೆ ತಮ್ಮ ತಂಡವನ್ನು ರಕ್ಷಿಸಿದರು.
ಭಾರತದ 10ನೇ ಮತ್ತು ಕೊನೆಯ ಪೆನಾಲ್ಟಿ ಕಾರ್ನರ್ ಅನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸಿದರು. ಇದಕ್ಕೆ ಮೊದಲು 22 ನೇ ನಿಮಿಷದಲ್ಲಿ ಲ್ಯೂಕಾಸ್ ಮಾರ್ಟಿನೆಜ್ ಅವರು ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು.
ಶನಿವಾರ ನಡೆದ ಆರಂಭಿಕ ಪಂದ್ಯದಲ್ಲಿ ಭಾರತೀಯರು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದರು. ಕ್ರಿಕೆಟ್ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ವೀಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಪಂದ್ಯ ನಿಧಾನಗತಿಯಲ್ಲಿ ಪ್ರಾರಂಭವಾಯಿತು. ಉಪನಾಯಕ ಹಾರ್ದಿಕ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್ ಅವರ ಕಳಪೆ ಪ್ರದರ್ಶನದಿಂದ ಭಾರತೀಯರು ಅವಕಾಶಗಳಿಂದ ವಂಚಿತರಾದರು. 10 ಪೆನಾಲ್ಟಿ ಕಾರ್ನರ್ ಗಳಲ್ಲಿ ಒಂದನ್ನು ಮಾತ್ರ ಗೋಲ್ ಆಗಿ ಪರಿವರ್ತನೆ ಆಯಿತು.
ಭಾರತ ಐರ್ಲೆಂಡ್ ವಿರುದ್ಧ ಮಂಗಳವಾರ ಆಡಲಿದೆ. ಆನಂತರ ತನ್ನ ಅಂತಿಮ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಆಡಬೇಕಿದೆ. ಪ್ರತಿ ಗುಂಪಿನಿಂದ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯುತ್ತವೆ.