ಪ್ಯಾರಿಸ್ ಒಲಿಂಪಿಕ್ಸ್ ಫುಟ್ಬಾಲ್: ಅರ್ಜೆಂಟೀನಾಕ್ಕೆ ಅವಕಾಶ

Update: 2024-02-12 10:10 GMT

ಕ್ಯಾರಕಾಸ್ (ವೆನೆಜುವೆಲಾ), ಫೆಬ್ರವರಿ 12: ಅರ್ಜೆಂಟೀನಾ ತನ್ನ ಪ್ರಾದೇಶಿಕ ಎದುರಾಳಿ ಬ್ರೆಜಿಲ್‌ ವಿರುದ್ಧ 1-0 ಗೋಲುಗಳಿಂದ ಜನ ಸಾಧಿಸಿದೆ. ಬ್ರೆಜಿಲ್‌ ಈಮೂಲಕ ಒಲಿಂಪಿಕ್ ಪುರುಷರ ಕಾಲ್ಚೆಂಡು ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿದೆ.

ಕ್ಯಾರಕಾಸ್‌ನ ಬ್ರಿಗಿಡೊ ಇರಿಯಾರ್ಟೆ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಅಮೆರಿಕದ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಅರ್ಜೆಂಟೀನಾ ದ ಲುಸಿಯಾನೊ ಗೊಂಡೌ ಗೋಲು ಗಳಿಸಿದರು. ಮೊದಲರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ಬ್ರೆಜಿಲ್‌ನ ರಕ್ಷಣಾತ್ಮಕ ಆಟದಿಂದಾಗಿ, ಯಶಸ್ಸು ಸಾಧ್ಯವಾಗ ಲಿಲ್ಲ. ವಿಶ್ವಕಪ್ ವಿಜೇತ ಥಿಯಾಗೊ ಅಲ್ಮಾಡಾ 16ನೇ ನಿಮಿಷದಲ್ಲಿ ಹೊಡೆದ ಚಂಡು ಕಂಬಕ್ಕೆ ಬಡಿಯಿತು. 61ನೇ ನಿಮಿಷದಲ್ಲಿ ಬದಲಿ ಆಟಗಾರ ಗೇಬ್ರಿಯಲ್ ಪೆಕ್ ಹತ್ತಿರದಿಂದ ಬಲವಾಗಿ ಹೊಡೆದ ಚಂಡನ್ನು ಅರ್ಜೆಂಟೀನಾದ ಲಿಯಾಂಡ್ರೊ ಬ್ರೇ ಅತ್ಯುತ್ತಮವಾಗಿ ತಡೆದರು. ಬ್ರೆಜಿಲ್ ಒತ್ತಡವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಿಲ್ಲ. ಸ್ಟ್ರೈಕರ್ ಎಂಡ್ರಿಕ್ ಮತ್ತೊಮ್ಮೆ ಪೂರ್ಣ ಸಾಮರ್ಥ್ಯದಿಂದ ಆಡಲಿಲ್ಲ. ಆನಂತರ ಗೊಂಡೌ ಅವರ ಹೆಡರ್ ಪಂದ್ಯದ ದೆಸೆಯನ್ನು ಬದಲಿಸಿತು. 

ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯ ವೆನೆಜುವೆಲಾ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿದ ಪರಗ್ವೆ ಮೂರು ಪಂದ್ಯಗಳಲ್ಲಿ ಏಳು ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಯಾವುದೇ ಸ್ಟಾರ್ ಆಟಗಾರರು ಇಲ್ಲದ ಪರಗ್ವೆ ತಂಡವು ಬ್ರೆಜಿಲ್ ನ್ನು ಸೋಲಿಸಿ, ಒಲಿಂಪಿಕ್ಸ್‌ ಗೆ ಸ್ಥಾನ ಭದ್ರಪಡಿಸಿಕೊಂಡಿತು. ಅರ್ಜೆಂಟೀನಾ ಐದು ಅಂಕಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದೆ.

ʻನಾವು ಒಲಿಂಪಿಕ್ಸ್‌ ಗೆ ಅರ್ಹರು. ಅರ್ಹತಾ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಕಳೆದುಕೊಂಡಿಲ್ಲʼ ಎಂದು ನಾಲ್ಕು ಗೋಲು ಗಳಿಸಿದ ಗೊಂಡೌ ಹೇಳಿದರು. ಬ್ರೆಜಿಲ್‌ ರಿಯೊ ಡಿ ಜನೈರೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದೆ. ಅಥೆನ್ಸ್ 2004 ಮತ್ತು ಬೀಜಿಂಗ್ 2008 ರಲ್ಲಿ ಅರ್ಜೆಂಟೀನಾ ಪುರುಷರ ಸಾಕರ್‌ನಲ್ಲಿ ಚಿನ್ನವನ್ನು ಗೆದ್ದುಕೊಂಡಿದೆ. ಬೀಜಿಂಗ್‌ನಲ್ಲಿ ಲಿಯೋನೆಲ್ ಮೆಸ್ಸಿ ತಂಡವನ್ನು ಮುನ್ನಡೆಸಿದ್ದರು. 

Tags:    

Similar News