Paris Olympics 2024| ಸ್ಕೀಟ್ ಮಿಶ್ರ ತಂಡ: ಕಂಚಿನ ಪದಕ ಸುತ್ತಿಗೆ ಪ್ರವೇಶ
By : The Federal
Update: 2024-08-05 12:49 GMT
ಫ್ರಾನ್ಸ್ : ಒಲಿಂಪಿಕ್ಸ್‌ನ ಸ್ಕೀಟ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಾದ ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಅವರು ಕಂಚಿನ ಪದಕದ ಸುತ್ತು ಪ್ರವೇಶಿಸಿದ್ದಾರೆ.
ಭಾರತದ ಜೋಡಿ ಒಟ್ಟು 146 ಅಂಕ ಗಳಿಸಿದ್ದು, ಕಂಚಿನ ಪದಕಕ್ಕಾಗಿ ಚೀನಾದೊಂದಿಗೆ ಸೆಣಸಲಿದೆ.
ಮೊದಲ ಸುತ್ತಿನಲ್ಲಿ ಭಾರತದ ಜೋಡಿ 49 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿತು. ಆಸ್ಟ್ರೇಲಿಯ, ಕೊರಿಯಾ, ಫ್ರಾನ್ಸ್ ಮತ್ತು ಎರಡು ಇಟಾಲಿಯನ್ ತಂಡಗಳೊಂದಿಗೆ ಸ್ಥಾನ ಹಂಚಿಕೊಂಡಿತು. ಈ ಸುತ್ತಿನಲ್ಲಿ ಅನಂತ್ ಜೀತ್ ಸಿಂಗ್ ನರುಕಾ 25/25 ಹಾಗೂ ಮಹೇಶ್ವರಿ ಚೌಹಾಣ್ 24/25 ಅಂಕ ಗಳಿಸಿದರು. ಎರಡನೇ ಸುತ್ತಿನಲ್ಲಿ ಮಹೇಶ್ವರಿ ಪರಿಪೂರ್ಣ 25 ಅಂಕ ಗಳಿಸಿದರು. ಆದರೆ, ನರುಕಾ ಅವರು 2 ನೇ ಮತ್ತು 5 ನೇ ಸರಣಿಯಲ್ಲಿ ತಲಾ ಎರಡು ಹೊಡೆತ ಕಳೆದುಕೊಂಡರು. ಇದರಿಂದ ಅವರಿಗೆ 48 ಅಂಕ ಸಿಕ್ಕಿತು. ಮೂರನೇ ಸುತ್ತಿನಲ್ಲಿ ಮಹೇಶ್ವರಿ 25 ಮತ್ತು ನರುಕಾ 24 ಅಂಕ ಗಳಿಸಿದರು.