Paris Olympics 2024| ಮನು ಭಾಕರ್‌ಗೆ ತಪ್ಪಿದ ಪದಕ

3 ನೇ ಪದಕದ ನಿರೀಕ್ಷೆಯಲ್ಲಿದ್ದ ಮನು ಭಾಕರ್‌ ಅವರು ಹಂಗೇರಿಯ ವೆರೋನಿಕಾ ಮೇಜರ್ ಅವರ ವಿರುದ್ಧ ಸೋತರು;

Update: 2024-08-03 10:07 GMT

ಭಾರತದ ಶೂಟರ್ ಮನು ಭಾಕರ್ ಅವರು ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ದಾಖಲೆಯ ಮೂರನೇ ಪದಕವನ್ನು ತಪ್ಪಿಸಿಕೊಂಡರು.

ಅವರು ಹಂಗೇರಿಯ ಕಂಚಿನ ಪದಕ ವಿಜೇತೆ ವೆರೋನಿಕಾ ಮೇಜರ್ ವಿರುದ್ಧ ಸೋತರು. ಉತ್ತಮ ಗುಣಮಟ್ಟದ ಫೈನಲ್‌ನಲ್ಲಿ ಭಾಕರ್ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿದರು. ಸ್ವಲ್ಪ ಕಾಲ ಎಂಟು ಶೂಟರ್‌ಗಳಲ್ಲಿ ನಂ.1 ಸ್ಥಾನದಲ್ಲಿದ್ದರು. ಆದರೆ, ಅವರು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾದರು. 

ಐದು ಶಾಟ್‌ಗಳ ಎಂಟನೇ ಸರಣಿ ನಂತರ ವೆರೋನಿಕಾ ಅವರೊಟ್ಟಿಗೆ ಮೂರನೇ ಸ್ಥಾನಕ್ಕೆ ಸಮಬಲ ಸಾಧಿಸಿದರು. 28 ಅಂಕ ಗಳಿಸಿದರು. 5 ಹೊಡೆತಗಳಲ್ಲಿ ಎರಡನ್ನು ತಪ್ಪಿಸಿಕೊಂಡರು. ಆದರೆ, ವೆರೋನಿಕಾ 4 ಹೊಡೆತಗಳಿಂದ ಮೂರನೇ ಸ್ಥಾನ ಗಳಿಸಿದರು. 

ಅವರು ಶುಕ್ರವಾರ 600 ರಲ್ಲಿ ಒಟ್ಟು 590 (ನಿಖರ 294, ತೀವ್ರ 296) ಅಂಕ ಗಳಿಸಿದ್ದರು. ಈ ವಿಸ್ಮಯ-ಸ್ಫೂರ್ತಿದಾಯಕ ಆಟದಿಂದ ಹ್ಯಾಟ್ರಿಕ್ ಪದಕ ತರಬಹುದೆಂದು ಅವರ ಮೇಲೆ ಹೆಚ್ಚು ನಿರೀಕ್ಷೆ ಇದ್ದಿತ್ತು. ಫೈನಲ್‌ನ ಆರಂಭದಲ್ಲಿ ಆರನೇ ಸ್ಥಾನಕ್ಕೆ ಕುಸಿದ ನಂತರವೂ ಅವರು ಸವಾಲನ್ನು ಎದುರಿಸಿದರು.

ಭಾಕರ್ ಮೊದಲ ಸರಣಿಯಲ್ಲಿ ಐದು ಗುರಿಗಳಲ್ಲಿ ಮೂರರಲ್ಲಿ ತಪ್ಪಿಸಿಕೊಂಡರು.‌ ಎರಡನೇ ಮತ್ತು ಮೂರನೇ ಸರಣಿಯಲ್ಲಿ ಪುಟಿದೆದ್ದು, ಒಟ್ಟು 10 ಅಂಕ ತಲುಪಿದರು. ಅಂತಿಮ ಸುತ್ತು ಏಣಿಯಾಟದಂತೆ ಇದ್ದಿತ್ತು. ಏಳನೇ ಸರಣಿಯಲ್ಲಿ ಅಲ್ಪಾವಧಿಗೆ ಅಗ್ರ ಸ್ಥಾನವನ್ನು ಪಡೆದಿದ್ದರು. ಅಂತಿಮವಾಗಿ, ಭಾಕರ್ ಐದರಲ್ಲಿ ಮೂರು ಹಾಗೂ ವೆರೋನಿಕಾ ನಾಲ್ಕು ಗುಂಡು ಹೊಡೆದರು.

ಭಾಕರ್(22)‌ 10 ಮೀಟರ್ ಏರ್ ಪಿಸ್ತೂಲ್ ಮತ್ತು ಸರಬ್ಜೋತ್ ಸಿಂಗ್ ಜೊತೆಗೆ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲಿನಲ್ಲಿ ಕಂಚಿನ ಪದಕ ಗಳಿಸಿದ್ದು, ಸ್ವಾತಂತ್ರ್ಯಾನಂತರ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಬಹು ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಜೋಯ್ದೀಪ್ ಕರ್ಮಾಕರ್ (ಪುರುಷರ 50 ಮೀ ರೈಫಲ್ ಪ್ರೋನ್, 2012 ಲಂಡನ್), ಅಭಿನವ್ ಬಿಂದ್ರಾ (ಪುರುಷರ 10 ಮೀ ಏರ್ ರೈಫಲ್, 2016 ರಿಯೋ) ಮತ್ತು ಅರ್ಜುನ್ ಬಾಬುತಾ (10 ಮೀ ಏರ್ ರೈಫಲ್, 2024 ಪ್ಯಾರಿಸ್ ಒಲಿಂಪಿಕ್ಸ್) ಅವರಂತಹ ಆಟಗಾರರ ಗುಂಪನ್ನು ಸೇರಿದರು.

Tags:    

Similar News