ನೀರಜ್ ಚೋಪ್ರಾ ಅವರು ಮನು ಭಾಕರ್ ಅವರನ್ನು ಮದುವೆಯಾಗುತ್ತಾರಾ?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದು, ನೀರಜ್ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗಳಿಸಿದ್ದಾರೆ.;
ನೀರಜ್ ಚೋಪ್ರಾ ಮತ್ತು ಮನು ಭಾಕರ್ ಸಂಭಾಷಣೆಯ ಒಂದು ವಿಡಿಯೋ ಕ್ಲಿಪ್ ಮತ್ತು ಅವರ ತಾಯಿ ಸುಮೇಧಾ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ಇನ್ನೊಂದು ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಸ್ಟಾರ್ ಅಥ್ಲೀಟ್‌ಗಳು ಡೇಟಿಂಗ್ ಮಾಡುತ್ತಿದ್ದಾರೆಯೇ ಅಥವಾ ಮದುವೆ ಆಗುತ್ತಿದ್ದಾರೆಯೇ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ತಂಡ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೆಕಾರ್ಡ್ ಆದ ಎರಡೂ ವಿಡಿಯೋಗಳು ಸೋಮವಾರ (ಆಗಸ್ಟ್ 12) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮನು ಅವರ ತಂದೆ ಹೇಳಿದ್ದೇನು?: ಮನು(22) ಅವರ ತಂದೆ ರಾಮ್ ಕಿಶನ್ ಭಾಕರ್ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಮಗಳು ಮದುವೆಯಾಗಲು ತುಂಬಾ ಚಿಕ್ಕವಳು ಎಂದು ಹೇಳಿದ್ದಾರೆ. ಸುಮೇಧಾ ಮತ್ತು ನೀರಜ್ ನಡುವಿನ ಸಂಭಾಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ʼಮನುವಿನ ತಾಯಿ ನೀರಜ್ ಅವರನ್ನು ತನ್ನ ಮಗನಂತೆ ಕಾಣುತ್ತಾರೆ,ʼ ಎಂದು ಹೇಳಿದರು.
ತಾಯಿ ಹೇಳಿದ್ದೇನು?: ಸುಮೇಧಾ ಮಾತನಾಡಿ,ʼ ಮಗನಂತಿರುವ ಅಗ್ರ ಜಾವೆಲಿನ್ ಎಸೆತಗಾರನನ್ನು ಭೇಟಿಯಾಗಲು ಸಂತೋಷವಾಗಿದೆ,ʼ ಎಂದು ಹೇಳಿದರು.
ʻನಾನು ಮಗಳ ಬಗ್ಗೆ ಬಹಳ ಸಂತೋಷಗೊಂಡಿದ್ದೇನೆ. ಆಟಗಾರರ ಬಗ್ಗೆಯೂ ನನಗೆ ಖುಷಿ. ಪ್ಯಾರಿಸ್‌ಗೆ ಹೋದಾಗ ಹಾಕಿ ತಂಡ, ಅಮನ್ ಸೆಹ್ರಾವತ್, ನೀರಜ್ ಚೋಪ್ರಾ ಅವರನ್ನು ಭೇಟಿಯಾಗಿದ್ದೆ.ಅವರೆಲ್ಲರಿಗೂ ತುಂಬಾ ಖುಷಿಯಾಯಿತು. ಈ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲುತ್ತಲೇ ಇರುತ್ತಾರೆ ಮತ್ತು ಈ ದೇಶದ ತಾಯಂದಿರು ಸಂತೋಷಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ,ʼ ಎಂದು ಹೇಳಿದರು.
ಸುಳ್ಳು ವದಂತಿ: ನೀರಜ್ ಚಿಕ್ಕಪ್ಪ- ನೀರಜ್(26) ಅವರ ಚಿಕ್ಕಪ್ಪ ಕೂಡ ವದಂತಿಗಳನ್ನು ತಳ್ಳಿ ಹಾಕಿದರು. ʻನೀರಜ್ ಪದಕ ತಂದಾಗ ಇಡೀ ದೇಶಕ್ಕೆ ಹೇಗೆ ಗೊತ್ತಾಯಿತೋ ಅದೇ ರೀತಿ ಅವನು ಮದುವೆಯಾದಾಗಲೂ ಎಲ್ಲರಿಗೂ ತಿಳಿಯುತ್ತದೆ,ʼ ಎಂದು ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದರೆ, ನೀರಜ್ ಜಾವೆಲಿನ್ ನಲ್ಲಿ ಬೆಳ್ಳಿ ಪದಕ ಗಳಿಸಿದರು.