ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ: ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆದ್ದ ಮನು ಭಾಕರ್
22 ವರ್ಷದ ಭಾಕರ್ ಫ್ರಾನ್ಸ್‌ನ ಚಟೌರೊಕ್ಸ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.;
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕ ಲಭಸಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ.
ಶೂಟರ್ ಮನು ಭಾಕರ್ ಭಾನುವಾರ (ಜುಲೈ 28) ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದು ಕೊಟ್ಟಿದ್ದಾರೆ.ಭಾಕರ್ 221.7 ಪಾಯಿಂಟ್‌ಗಳನ್ನು ಸಂಪಾದಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಚಿನ್ನ, ಬೆಳ್ಳಿ ಪಡೆದ ಕೊರಿಯನ್ನರು
ಕೊರಿಯಾದ ಶೂಟರ್ಗಳಾದ ಓಹ್ ಯೇ ಜಿನ್(243.2), ಕಿಮ್ ಯೆಜಿ(241.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ ಸಿಕ್ಕಿದ್ದು, 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು. ಇದಾದ ನಂತರ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ವಿಜಯ್ ಕುಮಾರ್ 25 ಮೀಟರ್ ರ್ಯಾಪಿಡ್ ಫೈರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈಗ ಮನು ಭಾಕರ್ ಇತಿಹಾಸ ಸೃಷ್ಟಿಸಿ ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎನಿಸಿಕೊಂಡಿದ್ದಾರೆ.
ಕಂಚು ಗೆದ್ದ ಭಾಕರ್ ಹೇಳಿದ್ದೇನು
"ನನಗೆ ತುಂಬಾ ಖುಷಿಯಾಗಿದೆ. ಇದು ಭಾರತಕ್ಕೆ ಬಹಳ ಹಿಂದಿನ ಪದಕವಾಗಿದೆ. ನಾನು ಅದನ್ನು ಗೆಲ್ಲುವ ಉತ್ಸಾಹದಲ್ಲಿದ್ದೆ. ಭಾರತವು ಹೆಚ್ಚು ಪದಕಗಳನ್ನು ಗೆಲ್ಲಲು ಅರ್ಹವಾಗಿದೆ. ನಾನು ಉತ್ತಮ ಕೆಲಸ ಮಾಡಿದ್ದೇನೆ. ಸಾಕಷ್ಟು ಪ್ರಯತ್ನದಲ್ಲಿ ಇದು ಕಂಚಿನ ಪದಕ ಬಂದಿದೆ. ಮುಂದಿನ ಬಾರಿ ಇನ್ನೂ ಉತ್ತಮವಾಗಿ ಮಾಡುತ್ತೇನೆ. ನಾನು ಬಹಳಷ್ಟು ಗೀತೆಗಳನ್ನು ಓದುತ್ತೇನೆ. ನಾನು ಮಾಡಬೇಕಾದುದನ್ನು ನಾನು ಮಾಡುತ್ತೇನೆ, ಅದೃಷ್ಟವನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ ... ಶ್ರೀಕೃಷ್ಣ ಹೇಳುವಂತೆ, ಕರ್ಮದ ಮೇಲೆ ಕೇಂದ್ರೀಕರಿಸಿ, ಕರ್ಮದ ಫಲಿತಾಂಶದ ಮೇಲೆ ಅಲ್ಲ. ನಾನು ಮಾಡಿದ್ದು ಅದನ್ನೇ. ನಿಮ್ಮ ಕೆಲಸವನ್ನು ಮಾಡಿ ಮತ್ತು ಎಲ್ಲವನ್ನೂ ಬಿಡಿ ನಾನು ಯೋಚಿಸಿದೆ ಎಂದು ಹೇಳಿದರು.
"ಟೋಕಿಯೋ (ಒಲಿಂಪಿಕ್ಸ್) ನಂತರ ನಾನು ತುಂಬಾ ನಿರಾಶೆಗೊಂಡೆ... ನಾನು ಬಲವಾಗಿ ಹಿಂತಿರುಗಿದೆ. ಭೂತಕಾಲವು ಭೂತಕಾಲದಲ್ಲಿ ಉಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಂಚು ಗೆದ್ದ ಮನು ಭಾಕರ್ ಅನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಅಭಿನವ್ ಬಿಂದ್ರಾ
ಐತಿಹಾಸಿಕ ಪದಕ ಗೆದ್ದಿರುವ ಭಾಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಸಾಧನೆಯನ್ನು "ಅದ್ಭುತ" ಎಂದು ಶ್ಲಾಂಘಿಸಿದ್ದಾರೆ. ಭಾರತಕ್ಕಾಗಿ ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿರುವುದರಿಂದ ಈ ಯಶಸ್ಸು ಇನ್ನಷ್ಟು ವಿಶೇಷವಾಗಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಭಾಕರ್ ಅವರನ್ನು ಅಭಿನಂದಿಸಿದರು ಮತ್ತು ಅವರ ನಿರಂತರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಉತ್ಸಾಹವು ಫಲ ನೀಡಿದೆ ಎಂದು ಹೇಳಿದರು.
"ಪ್ಯಾರಿಸ್ 2024 ರಲ್ಲಿ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಕ್ಕಾಗಿ ಮನು ಭಾಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಪಟ್ಟುಬಿಡದ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಉತ್ಸಾಹವು ನಿಜವಾಗಿಯೂ ಫಲ ನೀಡಿದೆ. ನಿಮ್ಮ ಕೌಶಲ್ಯ ಮತ್ತು ನಿರ್ಣಯವನ್ನು ವೀಕ್ಷಿಸಲು ಇದು ನಂಬಲಾಗದ ಸಂಗತಿಯಾಗಿದೆ. ಇದು ಭಾರತಕ್ಕೆ ಹೆಮ್ಮೆ ತಂದಿದೆ. ಈ ಸಾಧನೆಯು ನಿಮ್ಮ ಪರಿಶ್ರಮ ಮತ್ತು ದೃಢತೆಗೆ ಸಾಕ್ಷಿಯಾಗಿದೆ, ಮನು! ಎಂದು ಬಿಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.