ಪ್ಯಾರಿಸ್, ಆಗಸ್ಟ್ 1- ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ (50 ಕೆಜಿ), ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವು ಯು ವಿರುದ್ಧ 0-5 ಅಂತರದಿಂದ ಸೋಲುಂಡರು. ಭಾರತದ ಪಾಲಿಗೆ ಇದು ದೊಡ್ಡ ನಷ್ಟವಾಗಿದೆ.
ಬಾಕ್ಸಿಂಗ್ ಸ್ಪರ್ಧೆಯನ್ನು ನಡೆಸುತ್ತಿರುವ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ), ವಿಶ್ವ ಚಾಂಪಿಯನ್‌ಶಿಪ್ ನ್ನು ನಡೆಸುವ ಅಂತಾ ರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಐಬಿಎ) ಅನ್ನು ಅಂಗೀಕರಿಸದ ಕಾರಣ, ನಿಖತ್ ಅವರು ಶ್ರೇಯಾಂಕರಹಿತರಾಗಿ ಕಣದಲ್ಲಿದ್ದರು.
ಭಾರತದ ಪ್ರಬಲ ಪದಕ ಸ್ಪರ್ಧಿಗಳಲ್ಲಿ ಒಬ್ಬರಾದ ನಿಖತ್ ಅವರು ಆರಂಭಿಕ ಸುತ್ತಿನಲ್ಲೇ ಅಗ್ರ ಶ್ರೇಯಾಂಕದ ಫ್ಲೈವೇಟ್ (52 ಕೆಜಿ) ವಿಶ್ವ ಚಾಂಪಿಯನ್ ಅವರಿಂದ ಒತ್ತಡಕ್ಕೆ ಒಳಗಾಗಿದ್ದರು. ಯು ಕ್ಷಿಪ್ರವಾಗಿ ತಡೆಗಳನ್ನು ಬಿಡಿಸಿಕೊಂಡರು. ನಿಖತ್ ಪ್ರತಿದಾಳಿ ಮಾಡಲು ಪ್ರಯತ್ನಿಸಿದರೂ, ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಯು ಅವರ ಅದ್ಭುತ ಕಾಲ್ಚಳಕದಿಂದ ಹೊಡೆತಗಳನ್ನು ತಪ್ಪಿಸಿಕೊಂಡರು. ಮೊದಲ ಸುತ್ತಿನಲ್ಲಿ ನಿಖತ್ 1-4 ಹಿನ್ನಡೆ ನಂತರ ಎರಡನೇ ಸುತ್ತಿನಲ್ಲಿ ಸ್ವಲ್ಪ ಹೆಚ್ಚು ಯಶಸ್ಸನ್ನು ಕಂಡುಕೊಂಡರು. ಆದರೆ, ವು ಯು ಅವರು ನಿಖತ್ ಮುಖದ ಮೇಲೆ ಕೆಲವು ಹುಕ್ ಬಾರಿಸಿದರು. ಮೂರನೇ ಸುತ್ತಿನಲ್ಲಿ ಕೂಡ ಯು ಅವರ ಚುರುಕಿನ ಚಲನೆಯಿಂದಾಗಿ ನಿಕತ್ ವಿಫಲರಾದರು.
ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಕಂಚು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದಾದನಂತರ 2 ಚಿನ್ನದ ಪದಕ ಹಾಗೂ 2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ನಿಖತ್, ಅತ್ಯಂತ ಸ್ಥಿರ ಸಾಧನೆ ಮಾಡಿರುವ ಭಾರತೀಯ ಬಾಕ್ಸರ್‌ಗಳಲ್ಲಿ ಒಬ್ಬರಾಗಿದ್ದಾರೆ.