Paris Olympics 2024| ಲಕ್ಷ್ಯ ಸೇನ್ ಪ್ರಿ ಕ್ವಾರ್ಟರ್‌ಫೈನಲ್‌ಗೆ

ಲಕ್ಷ್ಯ ಸೇನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಎಚ್‌.ಎಸ್. ಪ್ರಣಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ರಣಯ್ ಬುಧವಾರ ವಿಯಟ್ನಾಂನ ಲೆ ಡಕ್ ಫಟ್ ಅವರನ್ನು ಎದುರಿಸಲಿದ್ದಾರೆ.;

Update: 2024-07-31 12:42 GMT

ಪ್ಯಾರಿಸ್, ಜು.3- ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಇಂಡೋನೇಷ್ಯಾದ ವಿಶ್ವದ 4ನೇ ಶ್ರೇಯಾಂಕಿತ ಆಟಗಾರ ಜೊನಾಟನ್ ಕ್ರಿಸ್ಟಿ ವಿರುದ್ಧ ನೇರ ಗೇಮ್‌ಗಳಿಂದ ಜಯಗಳಿಸಿ, ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.

2021 ರ ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಅಲ್ಮೋರಾದ ಲಕ್ಷ್ಯ(22), ಆಲ್ ಇಂಗ್ಲೆಂಡ್ ಮತ್ತು ಏಷ್ಯನ್ ಚಾಂಪಿಯನ್ ಕ್ರಿಸ್ಟಿ ಅವರನ್ನು 21-18 21-12 ರಿಂದ ಸೋಲಿಸಲು ಪ್ರಬುದ್ಧ ಮತ್ತು ಕುಶಾಗ್ರಮತಿ ಆಟವನ್ನು ಪ್ರದರ್ಶಿಸಿದರು. 

ʻಇದು ನಿಜವಾಗಿಯೂ ಕಠಿಣ ಪಂದ್ಯವಾಗಿತ್ತು. ನಾನು ಆಡಿದ ರೀತಿಯಿಂದ ಸಂತೋಷವಾಗಿದೆ. ಮೊದಲ ಸೆಟ್‌ನಲ್ಲಿ ಮುನ್ನಡೆಯನ್ನು ಮುಂದುವರಿಸುವುದು ಮತ್ತು ಲಯವನ್ನು ತ್ವರಿತವಾಗಿ ಕಂಡುಕೊಳ್ಳುವುದು ನಿರ್ಣಾಯಕವಾಗಿತ್ತು. ಬಳಿಕ ಉಳಿದಿದ್ದು ಕೆಲವು ಅಂಕಗಳ ವಿಷಯ,ʼ ಎಂದು ಪಂದ್ಯದ ನಂತರ ವಿಶ್ವದ 22 ನೇ ಶ್ರೇಯಾಂಕದ ಸೇನ್ ಹೇಳಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಸೇನ್ ಅವರು ಎಚ್‌.ಎಸ್. ಪ್ರಣಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ರಣಯ್ ಇಂದು ವಿಯಟ್ನಾಂನ ಲೆ ಡಕ್ ಫಟ್ ಅವರನ್ನು ಎದುರಿಸಲಿದ್ದಾರೆ.

ಭಾನುವಾರದ ಆರಂಭಿಕ ಎಲ್‌ ಗುಂಪಿನ ಪಂದ್ಯದಲ್ಲಿ ಸೇನ್, ಟೋಕಿಯೊ ಒಲಿಂಪಿಕ್ಸ್ ಸೆಮಿಫೈನಲಿಸ್ಟ್ ಕೆವಿನ್ ಕಾರ್ಡನ್ ಅವರನ್ನು ಸೋಲಿಸಿದ್ದರು. 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಸೇನ್, ಕ್ರಿಸ್ಟಿ ಅವರನ್ನು ಎದುರಿಸುವ ಮೊದಲು ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು ಸೋಲಿಸಿದರು. 

ʻಚಿನ್ನದ ಪದಕ ಈಗ ನಿಮ್ಮ ಕಣ್ಣಿಗೆ ಬಿದ್ದಿದೆಯೇ?ʼ ಎಂಬ ಪ್ರಶ್ನೆಗೆ, ʻಹೌದು, ಖಂಡಿತವಾಗಿಯೂ. ಕಳೆದ ಕೆಲವು ತಿಂಗಳುಗಳಲ್ಲಿ ನನ್ನ ಫಾರ್ಮ್ ನಿಜವಾಗಿಯೂ ಉತ್ತಮವಾಗಿದೆ ಎಂದುಕೊಂಡಿದ್ದೇನೆ. ಏರಿಳಿತಗಳಿವೆ. ಆದರೆ, ಒಟ್ಟಾರೆಯಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಉತ್ತಮ ಫಾರ್ಮ್‌ ನಲ್ಲಿ ಇದ್ದೇನೆ,ʼ ಎಂದು ಹೇಳಿದರು. ನಾಲ್ಕು ವರ್ಷಗಳ ಹಿಂದೆ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಸೇನ್ ಅವರು ಕ್ರಿಸ್ಟಿಯನ್ನು ಸೋಲಿಸಿದ್ದರು.

ಆದರೆ, ಸೇನ್ ಬುಧವಾರ ಸಂದರ್ಭಕ್ಕೆ ಅನುಗುಣವಾಗಿ ಆಟವಾಡಿದರು; ಹೆಚ್ಚಿನ ಪ್ರಬುದ್ಧತೆಯನ್ನು ತೋರಿಸಿದರು.

Tags:    

Similar News