Paris Olympics 2024| ದೀಪಿಕಾ ಕುಮಾರಿ ಸೋಲು; ಬಿಲ್ಲುಗಾರಿಕೆ ಅಭಿಯಾನ ಅಂತ್ಯ
ಪ್ಯಾರಿಸ್, ಆ.3 - ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಒತ್ತಡಕ್ಕೆ ಸಿಲುಕಿ, ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯಾದ ಸುಹ್ಯೆನ್ ನಾಮ್ ವಿರುದ್ಧ 4-6 ಅಂತರದಲ್ಲಿ ಸೋಲನುಭವಿಸಿದರು. ಇದರೊಟ್ಟಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಬಿಲ್ಲುಗಾರಿಕೆ ಅಭಿಯಾನಕ್ಕೆ ತೆರೆ ಬಿದ್ದಿತು.
ದೀಪಿಕಾ ಅವರು ಜರ್ಮನಿಯ ಮಿಚೆಲ್ ಕ್ರೊಪೆನ್ ಅವರನ್ನು 6-4 ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಏಪ್ರಿಲ್‌ನಲ್ಲಿ ನಡೆದ ಶಾಂಘೈ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದೀಪಿಕಾ ಅವರು ನಾಮ್(19) ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ, ಬೆಳ್ಳಿ ಪದಕ ಗಳಿಸಿದ್ದರು. ಆದರೆ, ಇಂದು ಆ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.
ನಾಲ್ಕು ಸೆಟ್‌ಗಳ ನಂತರ ಇಬ್ಬರು ಬಿಲ್ಲುಗಾರರ ಅಂಕ 4-4 ರಿಂದ ಸಮಬಲಗೊಂಡಿತ್ತು. ದೀಪಿಕಾ(30) ಮೊದಲ ಸೆಟ್‌ನಲ್ಲಿ 28-26 ರಿಂದ ಎರಡು ಪಾಯಿಂಟ್ ಗಳಿಸಿದರು. ನಾಮ್ ಎರಡನೇ ಸೆಟ್ ನ್ನು 28-25 ರಲ್ಲಿ ಗೆದ್ದರು.ದೀಪಿಕಾ 29-28 ರಿಂದ ಮೂರನೇ ಸೆಟ್ ಗೆಲುವು ಹಾಗೂ ನಾಲ್ಕನೇ ಸೆಟ್ ನ್ನು 27-29 ರಿಂದ ಕಳೆದುಕೊಂಡರು.ಆದರೆ, ಸ್ಥಿರ ಪ್ರದರ್ಶನ ನೀಡಿದ ನಾಮ್, ಐದನೇ ಸೆಟ್ ನಲ್ಲಿ 27-29 ರಿಂದ ಗೆಲುವು ಸಾಧಿಸಿದರು.