ಗೀಳು ಒಂದು ಸಂಕೀರ್ಣ ಸಮಸ್ಯೆ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಗೀಳು(ಅಬ್ಸೆಸ್ಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌,ಒಸಿಡಿ) 10 ಮುಖ್ಯ ಕಾಯಿಲೆಗಳಲ್ಲಿ ಒಂದು. ಖಿನ್ನತೆ, ಮಾದಕ ವ್ಯಸನ ಮತ್ತು ಫೋಬಿಯಾ (ಸಂವಹನದ ಬಗ್ಗೆ ಆತಂಕ) ನಂತರದ ನಾಲ್ಕನೇ ಸಾಮಾನ್ಯ ಮಾನಸಿಕ ಅಸ್ವಸ್ಥತೆ ಎಂದು ಅದನ್ನು ಪರಿಗಣಿಸಲಾಗಿದೆ.

Update: 2024-02-05 06:30 GMT

ಗೀಳು ಒಂದು ಸಂಕೀರ್ಣ ಸಮಸ್ಯೆ

-ದ ಕಾನ್ವರ್ಸೇಷನ್ಸ್‌

.......................................................

ಮ್ಯಾಟ್‌ 12 ವರ್ಷ ವಯಸ್ಸಿನವನಾಗಿದ್ದಾಗ ಆತ್ಮಹತ್ಯೆಯ ಆಲೋಚನೆ ಬರಲಾರಂಭಿಸಿತು. ಚೂರಿಯನ್ನು ಕಂಡಾಗ ಅದು ಚುಚ್ಚುವುದೇ, ಎತ್ತರದ ಸ್ಥಳಕ್ಕೆ ಸಮೀಪದಲ್ಲಿದ್ದಾಗ ಜಿಗಿಯಬಹುದೇ ಎಂಬ ಪ್ರಶ್ನೆ ಹುಟ್ಟುತ್ತಿತ್ತು. ತಾನು ಸರಣಿ ಕೊಲೆಗಾರನಾಗಬಹುದೇ ಎಂದು ಆಯೋಚನೆ ಬರುತ್ತಿತ್ತು. ಆದರೆ, ಆತ ಬದುಕನ್ನು ನಿಜವಾಗಿಯೂ ಇಷ್ಟಪಡುತ್ತಿದ್ದ. ತನಗೆ ಸಹಾಯದ ಅಗತ್ಯವಿದೆ ಎಂದು ಗೊತ್ತಾದರೂ, ಯಾರೊಂದಿಗೆ ಮಾತನಾಡಬೇಕು ಎಂದು ಗೊತ್ತಿರಲಿಲ್ಲ. ಇದು ಗೀಳಿನ ಕಾಯಿದೆ(ಒಸಿಡಿ) ಎಂಬ ಅರಿವು ಕೂಡ ಅವನಿಗೆ ಇರಲಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಗೀಳು(ಅಬ್ಸೆಸ್ಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌,ಒಸಿಡಿ) 10 ಮುಖ್ಯ ಕಾಯಿಲೆಗಳಲ್ಲಿ ಒಂದು. ಖಿನ್ನತೆ, ಮಾದಕ ವ್ಯಸನ ಮತ್ತು ಫೋಬಿಯಾ (ಸಂವಹನದ ಬಗ್ಗೆ ಆತಂಕ) ನಂತರದ ನಾಲ್ಕನೇ ಸಾಮಾನ್ಯ ಮಾನಸಿಕ ಅಸ್ವಸ್ಥತೆ ಎಂದು ಅದನ್ನು ಪರಿಗಣಿಸಲಾಗಿದೆ. ಮ್ಯಾಟ್‌ಗೆ ಒಸಿಡಿ ಬಗ್ಗೆ ತಿಳಿವಳಿಕೆ ಟಾಕ್ ಶೋಗಳಿಂದ ಬಂದಿತು; ಅವುಗಳ ಪ್ರಕಾರ, ಒಸಿಡಿ ಎಂದರೆ ಪದೇಪದೇ ಕೈ ತೊಳೆಯುವುದು ಮತ್ತು ವಿಪರೀತ ನಡವಳಿಕೆ. ʻಟೇಕಿಂಗ್ ಕಂಟ್ರೋಲ್ ಆಫ್ ಒಸಿಡಿʼ ಪುಸ್ತಕ ಇಂಥದ್ದೇ ಅನುಭವಗಳ ಜಾನ್(ನಿಜವಾದ ಹೆಸರಲ್ಲ) ಎಂಬುವನ ಕಥೆಯನ್ನು ಹೇಳುತ್ತದೆ. ಸಹೋದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಜಾನ್‌ಗೆ ಅದೇ ರೀತಿ ಆಲೋಚನೆಗಳು ಬರಲಾರಂಭಿಸಿದವು. ರಸ್ತೆ ದಾಟುವಾಗ, ʻನಾನು ಇಲ್ಲೇ ನಿಂತು ಬಸ್‌ ಡಿಕ್ಕಿ ಹೊಡೆದರೆ ಏನಾಗುತ್ತದೆ?ʼ ಎಂಬ ಆಲೋಚನೆ ಬರುತ್ತಿತ್ತು. ಇಂಥ ಆಲೋಚನೆ ನಿಲ್ಲಲಿಲ್ಲ ಮತ್ತು ಈ ಬಗ್ಗೆ ಗೆಳತಿಗೆ ವಿವರಿಸಲು ಸಾಧ್ಯವಾಗಲಿಲ್ಲ. ಒಸಿಡಿ ಪುನರಾವರ್ತಿತ ಕ್ರಿಯೆಗಳು ಮತ್ತು ಅನಪೇಕ್ಷಿತ-ಅಹಿತಕರ ಆಲೋಚನೆಗಳು, ಹಾನಿ, ಲೈಂಗಿಕತೆ ಅಥವಾ ಧರ್ಮಕ್ಕೆ ಅಗೌರವವೆಂದು ಪರಿಗಣಿಸಿದ ವಿಷಯಗಳಿಗೆ ಸಂಬಂಧಿಸಿರುತ್ತದೆ.

ಯಾರೂ ಗೀಳಿನ ಆಲೋಚನೆಗಳನ್ನು ಒಸಿಡಿ ಎಂದುಕೊಳ್ಳುವುದಿಲ್ಲ; ಒಸಿಡಿಯ ರೋಗಲಕ್ಷಣಗಳೆಂದು ಗುರುತಿಸುವುದಿಲ್ಲ. ಇದರಿಂದ ಒಸಿಡಿ ಪೀಡಿತರು ಹೆಚ್ಚು ಕಾಲ ರೋಗನಿರ್ಣಯ ಆಗದೆ ಉಳಿಯುತ್ತಾರೆ. ಗೀಳುಪೀಡಿತರ ಕಾಳಜಿ ವಹಿಸುವವರಿಗೆ ಹಾನಿ ತಡೆ ಮತ್ತು ಅಪರಿಚಿತರೊಂದಿಗೆ ಹೇಗೆ ಸಂವಹನ ಮಾಡುವುದು ಎಂಬ ಕುರಿತು ಗೊಂದಲ ಇರುತ್ತದೆ. ಕ್ಲಿನಿಕಲ್ ಮಾರ್ಗಸೂಚಿಗಳ ಪ್ರಕಾರ, ಒಸಿಡಿ ಒತ್ತಾಯ ಮತ್ತು ಭ್ರಾಂತಿ ಎರಡೂ ಹೌದು. ಅದು ಒಂದು ಸಂಕೀರ್ಣ ಅಸ್ವಸ್ಥತೆ. ಮೊದಲಿಗೆ ಅಗೋಚರವಾಗಿರುತ್ತದೆ ಮತ್ತು ಹಿಂಸೆ ಕೊಡುತ್ತದೆ. ನಮ್ಮಲ್ಲಿ ಅನೇಕರು ವ್ಯಕ್ತಿ, ಭಿನ್ನಾಭಿಪ್ರಾಯ ಅಥವಾ ಆತಂಕವನ್ನುಂಟುಮಾಡುವ ಯಾವುದನ್ನಾದರೂ ಕುರಿತು ಚಿಂತಿಸುವುದನ್ನು ಅಥವಾ ಗೀಳನ್ನು ಅನುಭವಿಸಿರುತ್ತೇವೆ. ಗೀಳು ಪೀಡಿತರು ಕೇವಲ ʻಅತಿಯಾಗಿ ಯೋಚಿಸುವುದುʼ ಮಾತ್ರವಲ್ಲ; ಅಂಥ ಆಲೋಚನೆಗಳು ಮನಸ್ಸಿನಲ್ಲಿ ಜಿಗಿಯುತ್ತಿದ್ದಂತೆ, ಸಂಭಾಷಣೆಯನ್ನು ಅಡ್ಡಿಪಡಿಸುತ್ತದೆ. ಆಲೋಚನೆಗಳು ನಿಜವೆಂದು ಯೋಚಿಸಲು, ವಿಶ್ಲೇಷಿಸಲು ಮತ್ತು ಪುರಾವೆಗಳನ್ನು ಹುಡುಕಲು ಅನುಮತಿಸುತ್ತದೆ. ಗೀಳು ಜಗಳವನ್ನು ಹೋಲುತ್ತದೆ: ಆಲೋಚನೆಗಳನ್ನು ದೂರ ತಳ್ಳಲು ಪ್ರಯತ್ನಿಸುತ್ತೀರಿ; ಆದರೆ, ಅವು ಇನ್ನಷ್ಟು ಬಲವಾಗಿ ಹಿಂತಿರುಗುತ್ತವೆ. ತಪ್ಪಿಸಿಕೊಳ್ಳಲು ಪ್ರಯತ್ನಿ ಸಿದಷ್ಟೂ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ; ನಿಮ್ಮ ವಿಫಲ ಪ್ರಯತ್ನವನ್ನು ಕೀಟಲೆ ಮಾಡುತ್ತವೆ.

ಅನೇಕ ಜನರು ಪುನರಾವರ್ತಿತ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಏಕೆ ಕಷ್ಟಪಡುತ್ತಾರೆ ಎಂಬುದನ್ನು 1970 ರ ದಶಕದಲ್ಲಿ ಲಂಡನ್‌ನ ಪ್ರಮುಖ ಮನಶ್ಶಾಸ್ತ್ರಜ್ಞರ ಗುಂಪಿನ ಅಧ್ಯಯನದಿಂದ ಅರ್ಥಮಾಡಿ ಕೊಳ್ಳಬಹುದು. ಮಾನಸಿಕ ಕಾಯಿಲೆಗಳ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಿದಂತೆ, ಉಪಚಾರ ಮತ್ತು ರೋಗನಿರ್ಣಯ ವಿಧಾನ ಬದಲಾಗಿದೆ.

1970ಕ್ಕೆ ಮುನ್ನ ʻಗೀಳುಗಳುʼ ಮತ್ತು ʻಒತ್ತಾಯಗಳುʼ ಒಂದು ಗುಂಪಾಗಿ ಪರಿಗಣಿಸಲ್ಪಟ್ಟಿರಲಿಲ್ಲ. ಬದಲಾಗಿ, ಅವುಗಳನ್ನು ವಿವಿಧ ಮನೋವೈದ್ಯಕೀಯ ವರ್ಗೀಕರಣಗಳಲ್ಲಿ ಪ್ರತ್ಯೇಕವಾಗಿ ಪಟ್ಟಿಮಾಡಲಾಗಿತ್ತು. 1900ರ ಆರಂಭದಲ್ಲಿ ಜೇಮ್ಸ್ ಶಾ ಎಂಬ ಬ್ರಿಟಿಷ್ ವೈದ್ಯ, ʻಗೀಳುಗಳು ಒಂದು ರೀತಿಯ ಆಲೋಚನೆ. ಮೆದುಳು ನಿಯಂತ್ರಿಸಲು ಸಾಧ್ಯವಾಗದ ಸ್ಪಷ್ಟ ಅಥವಾ ಅಗೌರವದ ಆಲೋಚನೆಗಳಿಂದ ತುಂಬಿರುತ್ತದೆʼ ಎಂದು ವಿವರಿಸಿದರು. ಶಾ ಪ್ರಕಾರ, ಇಂಥ ಆಲೋಚನೆ ಹಿಸ್ಟೀರಿಯಾ, ನ್ಯೂರಾಸ್ತೇನಿಯಾ ಅಥವಾ ತಪ್ಪು ಕಲ್ಪನೆಗಳನ್ನು ಹೊಂದಲು ಪ್ರಾರಂಭಿಸುವ ಮೊದಲು ಸಂಭವಿಸಬಹುದು. ಅವರು ಚಿಕಿತ್ಸೆ ನೀಡಿದವರಲ್ಲಿ ಒಬ್ಬ ಮಹಿಳೆಗೆ ಅಬ್ಸೆಷನಲ್ ಮೆಲಾಂಕೋಲಿಯಾ ಇದ್ದು, ಇದಕ್ಕೆ ನರ ದೌರ್ಬಲ್ಯ ಕಾರಣ ಎಂದಿದ್ದರು. ಅಂದರೆ, ಆಗ ಗೀಳಿಗೆ ದುರ್ಬಲ ನರಮಂಡಲ ಕಾರಣ ಎಂದು ನಂಬಲಾಗಿತ್ತು.

ಜನಿಸುವಾಗಲೇ ಅಥವಾ ಹೆಚ್ಚು ಕೆಲಸ, ಮದ್ಯಪಾನ ಮಾಡುವುದರಿಂದ ಅಥವಾ ಅನೇಕ ಲೈಂಗಿಕ ಪಾಲುದಾರರನ್ನು ಹೊಂದಿರುವುದರಿಂದ ಆಗಿರಬಹುದು (ಡಿಜನರೇಶನ್ ಸಿದ್ಧಾಂತ). ಅದೇ ಸಮಯದಲ್ಲಿ ಆಸ್ಟ್ರಿಯನ್ ಮನಃಶ್ಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್, ʻಜ್ವಾಂಗ್‌ ನ್ಯೂರೋಸ್ʼ ಅಂದರೆ ʻಅಬ್ಸೆಷನಲ್ ನ್ಯೂರೋಸಿಸ್ʼ/ʻಕಂಪಲ್ಶನ್ ನ್ಯೂರೋಸಿಸ್ʼ ಎಂಬ ಪದ ಸೃಷ್ಟಿಸಿದ. ʻಜ್ವಾಂಗ್ʼ ಎಂದರೆ ಬಾಲ್ಯದ ಪ್ರಚೋದನೆಗಳು (ಪ್ರೀತಿ ಮತ್ತು ದ್ವೇಷ) ಮತ್ತು ನಮ್ಮ ವಿಮರ್ಶಾತ್ಮಕ ಚಿಂತನೆಯ ನಡುವಿನ ಗುಪ್ತ ಸಂಘರ್ಷದಿಂದ ಬರುವ ನಿರಂತರ ಕಲ್ಪನೆಗಳು. ಫ್ರಾಯ್ಡ್ ನ ಸುಪ್ರಸಿದ್ಧ ಪ್ರಕರಣ ಅಧ್ಯಯನ 1909ರಲ್ಲಿ ಪ್ರಕಟವಾಯಿತು. ಅಧ್ಯಯನವು ಸಂಕೀರ್ಣ ರೋಗಲಕ್ಷಣಗಳನ್ನು ಹೊಂದಿದ್ದ ಆಸ್ಟ್ರಿಯನ್ ಸೇನಾ ಅಧಿಕಾರಿಯನ್ನು ಕೇಂದ್ರೀಕರಿಸಿತ್ತು.

ಆ ಅಧಿಕಾರಿಯು ತನಗೆ ಇಲಿಗಳಿಂದ ಏನಾದರೂ ಆಪತ್ತು ಸಂಭವಿಸಬಹುದೆಂದು ಸದಾ ಕಾಲ ಚಿಂತಿತನಾಗಿದ್ದ. ʻಇಲಿ ಮನುಷ್ಯʼ ನ ನಡವಳಿಕೆಗಳು ಮತ್ತು ಒಸಿಡಿ ನಡುವೆ ಪ್ರಮುಖ ವ್ಯತ್ಯಾಸಗಳಿವೆ. ಇಲಿ ಮನುಷ್ಯ ಆಲೋಚನೆ ಮಾಡುತ್ತಾನೆ ಮತ್ತು ಅವನ ನಡವಳಿಕೆಗಳು ಸ್ಥಿರವಾಗಿರುವುದಿಲ್ಲ.

ʻಅಬ್ಸೆಷನಲ್ ನ್ಯೂರೋಸಿಸ್ʼ ಪದವನ್ನು ಮೊದಲ ವಿಶ್ವ ಸಮರದ ಸಮಯದಲ್ಲಿ ಬ್ರಿಟನ್‌ನಲ್ಲಿ ಬಳಸಲಾಯಿತು. 1950ಕ್ಕೆ ಮುನ್ನ ಮನೋವೈದ್ಯಕೀಯ ಬರವಣಿಗೆಗಳಲ್ಲಿ ʻಗೀಳುʼ ಮತ್ತು ʻಕಂಪಲ್ಶನ್ʼ ಪದಗಳನ್ನು ಪರಸ್ಪರ ಬದಲಿಯಾಗಿ ಬಳಸಲಾಗಿದೆ. ಎರಡನೆಯ ಮಹಾಯುದ್ಧದ ನಂತರ ಖ್ಯಾತ ಬ್ರಿಟಿಷ್ ಮನೋವೈದ್ಯಶಾಸ್ತ್ರಜ್ಞ ಆಬ್ರೆ ಲೆವಿಸ್, ʻಗೀಳಿನ ಕಾಯಿಲೆʼಗಳ ಅರ್ಥವನ್ನು ವಿವರಿಸಿದರು. ಪುನರಾವರ್ತಿತ ನಡವಳಿಕೆಗಳನ್ನು ಗೀಳಿನ ಸಂಕೇತವೆಂದು ಭಾವಿಸಬಾರದು. ಬಾಹ್ಯ ಕ್ರಿಯೆಗಳ ಆಧಾರದ ಮೇಲೆ ಗೀಳನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದವರು ಹೇಳಿದರು. 1970ರಲ್ಲಿ ಒಸಿಡಿಯನ್ನು ಮಾನಸಿಕ ಅಸ್ವಸ್ಥತೆ ಎಂದು ಕರೆಯಲಾಯಿತು.

ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್‌ 1980ರ ನಂತರ ಅದನ್ನು ಮನೋವೈದ್ಯಕೀಯ ಅಸ್ವಸ್ಥತೆ ಎಂದು ಗುರುತಿಸಿತು. 1970ರ ದಶಕದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಮತ್ತು ದಕ್ಷಿಣ ಲಂಡನ್ನಿನ ಮಾಡ್‌ಸ್ಲೇ ಆಸ್ಪತ್ರೆಯಲ್ಲಿ ನಡೆದ ಪ್ರಯೋಗಗಳು ಒಸಿಡಿಯ ಗೋಚರ ಮತ್ತು ಅಳೆಯಬಹು ದಾದ ನಡವಳಿಕೆಗಳನ್ನು ಕೇಂದ್ರೀಕರಿಸಿದ್ದವು. ದಕ್ಷಿಣ ಆಫ್ರಿಕಾದ ಮನಶ್ಶಾಸ್ತ್ರಜ್ಞ ಸ್ಟಾನ್ಲಿ ರಾಚ್‌ಮನ್, ಗೀಳಿನ ಕಾಯಿಲೆ ಮತ್ತು ಗೀಳಿನ ನರರೋಗದ ಲಕ್ಷಣಗಳನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದಾರೆ. ಮೊದಲ ವರ್ಗವು ಗೋಚರ ಕಂಪಲ್ಸಿವ್ ಆಚರಣೆಗಳನ್ನು ಒಳಗೊಂಡಿದೆ; ಆದರೆ, ಎರಡನೆಯ ವರ್ಗವು ಅದೃಶ್ಯ ಗೀಳಿನ ವದಂತಿಗಳನ್ನು ಒಳಗೊಂಡಿದೆ.

ರಾಚ್‌ಮನ್ ಮತ್ತು ಅವರ ಸಹೋದ್ಯೋಗಿಗಳು ಮೊದಲು ಪದೇಪದೇ ಕೈ ತೊಳೆಯುವ ಅಭ್ಯಾಸವಿರುವ 10 ರೋಗಿಗಳನ್ನು ಪರಿಶೀಲಿಸಿದರು. ಎರಡನೇ ಹಂತದಲ್ಲಿ ಬಾಗಿಲು ಲಾಕ್ ಆಗಿದೆಯೇ ಎಂದು ಪರಿಶೀಲಿಸುವ ಗೋಚರ ʻಪರಿಶೀಲನೆʼ ಕ್ರಿಯೆಗಳಿರುವ ರೋಗಿಗಳನ್ನು ಒಳಗೊಳ್ಳಲಾಯಿತು. ಕಂಪಲ್ಸಿವ್ ನಡವಳಿಕೆಗಳನ್ನು ಪರಿಹರಿಸುವುದು ಸುಲಭ. ಮನೋವೈದ್ಯರು (ಮಾನಸಿಕ ಆರೋಗ್ಯದ ಮೇಲೆ ಗಮನ ನೀಡುವ ವೈದ್ಯರು) ಮತ್ತು ಮನೋವಿಶ್ಲೇಷಕರು (ಫ್ರಾಯ್ಡನ ಸಿದ್ಧಾಂತಗಳನ್ನು ಬಳಸುವ ಚಿಕಿತ್ಸಕರು)ರಿಂದ ಪ್ರತ್ಯೇಕಿಸಿಕೊಳ್ಳಲು ʻಅನ್ವಯಿಕ ವಿಜ್ಞಾನಿಗಳು(ಕ್ಲಿನಿಕಲ್‌ ಮನಶಾಸ್ತ್ರಜ್ಞರು)ಎಂದು ಕರೆದುಕೊಂಡವರು ಪ್ರಾಯೋಗಿಕ ವಿಧಾನಗಳನ್ನು ಅಂದರೆ, ನೋಡಬಹುದಾದ, ಅಳೆಯಬಹುದಾದ ಮತ್ತು ಪ್ರಯೋಗಿಸಬಹುದಾದ ವಿಷಯಗಳನ್ನು ಕೇಂದ್ರೀಕರಿಸಿರುತ್ತಾರೆ.

ಒಸಿಡಿಯನ್ನು ಟಿವಿ ಮತ್ತು ಚಲನಚಿತ್ರದಲ್ಲಿ ತೋರಿಸುವ ರೀತಿಯನ್ನು ಡಾನಾ ಫೆನ್ನೆಲ್‌ನಂತಹ ತಜ್ಞರು ಟೀಕಿಸಿದ್ದಾರೆ. ಮಾಧ್ಯಮಗಳು ಫುಟ್‌ಬಾಲ್‌ ಆಟಗಾರ ಡೇವಿಡ್ ಬೆಕ್‌ಹ್ಯಾಮ್‌ಗೆ ನೀಡಿದ ಅತಿಯಾದ ಗಮನದಿಂದ ಜನ ಒಸಿಡಿ ಬಗ್ಗೆ ತಪ್ಪು ಅಭಿಪ್ರಾಯ ಹೊಂದುತ್ತಾರೆ ಎನ್ನುವುದು ಫೆನ್ನೆಲ್‌ ಅಭಿಪ್ರಾಯ. ಇಂಗ್ಲೆಂಡ್‌ನಲ್ಲಿ ಬಳಕೆಯಲ್ಲಿರುವ ಮಾನ್ಯತೆ ಮತ್ತು ಆಚರಣೆ ತಡೆಗಟ್ಟುವಿಕೆ (ಇಆರ್‌ಪಿ) ಅತಿ ಜನಪ್ರಿಯ ಚಿಕಿತ್ಸಾ ಪದ್ಧತಿ; ನಡವಳಿಕೆ ಮತ್ತು ಆಲೋಚನೆಗಳನ್ನು ಬದಲಿಸುವ ಮೂಲಕ ನೆರವಾಗುತ್ತದೆ. 1970ರ ದಶಕದಲ್ಲಿ ರಾಚ್‌ಮನ್ ಮತ್ತು ಅವರ ಸಹೋದ್ಯೋಗಿಗಳಿಂದ ಇಆರ್‌ಪಿ ಜನಪ್ರಿಯವಾಯಿತು.

ರೋಗಿಗಳ ಕೈತೊಳೆಯುವಿಕೆಯಲ್ಲಿನ ಇಳಿಕೆಯು ಇಆರ್‌ಪಿ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ತೋರಿಸುತ್ತದೆ. ಈ ಚಿಕಿತ್ಸೆಯನ್ನು ಮನೋವೈದ್ಯಕೀಯ ಮತ್ತು ಮನೋವಿಶ್ಲೇಷಣೆ ವಿಧಾನಗಳಿಗಿಂತ ಉತ್ತಮವೆಂದು ಪರಿಗಣಿಸಲಾಗಿದೆ. ಇದೇ ವಿಧಾನವನ್ನು ಅಬ್ಸೆಸಿವ್ ಆಲೋಚನೆಗಳಿಗೆ ಬಳಸಲಾಗುತ್ತದೆ. ಹೆಚ್ಚು ಚಿಂತೆಯುಂಟು ಮಾಡುವ ವಿಷಯವನ್ನು ಗುರುತಿಸಲು ಮತ್ತು ಅದರ ಬಗ್ಗೆ ಯೋಚಿಸುವಂತೆ ಅಥವಾ ಆ ಆಲೋಚನೆಗಳನ್ನು ಪುನರಾವರ್ತಿಸಲು ಹೇಳಲಾಗುತ್ತದೆ. ಈ ಚಿಕಿತ್ಸೆ ಒಸಿಡಿ ರೋಗಲಕ್ಷಣಗಳನ್ನು ಹೊಂದಿರುವವರಿಗೆ ನಿಜವಾಗಿಯೂ ಸಹಾಯಕ.

ʻವ್ಯಾಕ್ ಎ ಮೋಲ್ ತಂತ್ರʼ ಎಂದರೆ, ಒಂದು ರೋಗಲಕ್ಷಣ(ಗೀಳು ಅಥವಾ ಒತ್ತಾಯ)ವನ್ನು ತೊಡೆದುಹಾಕಿದಾಗ ಇನ್ನೊಂದು ಕಾಣಿಸಿಕೊಳ್ಳುತ್ತದೆ. ಗೀಳುಗಳು ಕೇವಲ ಆಲೋಚನೆಗಳು; ಅವುಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಮತ್ತು ನೀವು ಅವುಗಳನ್ನು ಹೊಂದಲು ಬಯಸುವುದಿಲ್ಲ ಎಂದು ಇಆರ್‌ಪಿ ವಿಧಾನ ಮನವರಿಕೆ ಮಾಡಿಕೊಡುತ್ತದೆ. ಸಂಜ್ಞಾನಾತ್ಮಕ ವರ್ತನೆ ಚಿಕಿತ್ಸೆ (ಸಿಬಿಟಿ, ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ) ಕೂಡ ಒಸಿಡಿಯ ನಿರ್ದಿಷ್ಟ ಆಲೋಚನೆಗಳನ್ನು ಮಹತ್ವದ್ದಾಗಿ ಪರಿಗಣಿಸುವುದಿಲ್ಲ. ಗೀಳು ವ್ಯಕ್ತಿಯ ಬಾಲ್ಯದಲ್ಲಿ ಬೇರೂರಿದೆ ಎಂದು ಮನೋವಿಶ್ಲೇಷಣೆ ನಂಬುತ್ತದೆ. ಒಸಿಡಿ ಅಂದರೆ ಪದೆಪದೇ ಕೈತೊಳೆಯುವುದಲ್ಲ ಎಂದು ಮನೋವಿಶ್ಲೇಷಣೆ ತೋರಿಸಿಕೊಟ್ಟಿದೆ. ಮನೋವಿಶ್ಲೇಷಣೆ ಎನ್ನುವುದು ಮನಸ್ಸಿನ ಅಧ್ಯಯನ ಮತ್ತು ಕಾಲ್ಪನಿಕ ಭಯವನ್ನು ನಿವಾರಿಸುವ ಸಾಮರ್ಥ್ಯ. ಇದು ಗೀಳಿನ ಆಂತರಿಕ ಅಂಶಗಳನ್ನು ಒತ್ತಿಹೇಳುತ್ತದೆ; ಮನುಷ್ಯರ ಅನುಭವಗಳು ಸಂಕೀರ್ಣವಾಗಿರುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಗುರುತಿಸುತ್ತದೆ ಮತ್ತು ಅಂಗೀಕರಿಸುತ್ತದೆ.

ಫ್ರಾಯ್ಡ್ ಪ್ರಕಾರ, ʻನಾಗರಿಕತೆ' ಎಂದೂ ಕರೆಯಲ್ಪಡುವ ಪ್ರಪಂಚವು ಜನರ ಮೇಲೆ ನಿರ್ವಹಿಸಲು ಕಷ್ಟಕರವಾದ ನಿರೀಕ್ಷೆಗಳನ್ನು ಇರಿಸುತ್ತದೆ. ʻಎ ಮೈಂಡ್ ಇನ್ ಫ್ಲೈಟ್ʼ ಎಂಬ ಪರಿಕಲ್ಪನೆ ಗೀಳುಗಳನ್ನು ಪ್ರತಿಬಿಂಬಿಸಲು ನೆರವಾಗುತ್ತದೆ. ನಾವು ವಾಸಿಸುವ ಜಗತ್ತಿನಲ್ಲಿ ನಿಶ್ಚಿತತೆ ಮತ್ತು ನಿಯಂತ್ರಣಕ್ಕಾಗಿ ನಿರಂತರ ಹೋರಾಟ ಮಾಡಬೇಕಿದೆ. ಆದರೆ, ಸಂಪೂರ್ಣ ನಿಶ್ಚಿತತೆ ಮತ್ತು ನಿಯಂತ್ರಣವನ್ನು ಸಾಧಿಸುವುದು ಅಸಾಧ್ಯವೆಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಮನೋವಿಶ್ಲೇಷಣೆ ಚಿಕಿತ್ಸೆಯ ಗುರಿ ರೋಗಲಕ್ಷಣಗಳನ್ನು ತೆಗೆದುಹಾಕುವುದಲ್ಲ; ಬದಲಾಗಿ, ಮನುಷ್ಯರ ಸಮಸ್ಯೆಗಳನ್ನು ಬಹಿರಂಗಪಡಿಸುವುದು ಮತ್ತು ಪರಿಹರಿಸು ವುದು.

ಇಂಗ್ಲೆಂಡಿನಲ್ಲಿ ಆರೋಗ್ಯ ಸೇವೆಯಲ್ಲಿ ಮನೋವಿಶ್ಲೇಷಣೆಯನ್ನು ಬಳಸುವುದಿಲ್ಲ. ಇದಕ್ಕೆ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು ಕಾರಣ. ಗೀಳು ಒಸಿಡಿಯ ಸಾಮಾನ್ಯ ಲಕ್ಷಣ ಎಂದು ಭಾವಿಸುತ್ತಾರೆ; ಆದರೆ, ಅದು ಉಂಟುಮಾಡುವ ಸಂಕಟವನ್ನು ಗುರುತಿಸುವುದಿಲ್ಲ ಅಥವಾ ಮಾತನಾಡುವುದಿಲ್ಲ. ಈ ಬಗ್ಗೆ ಮಾತನಾಡುವುದು ಮುಖ್ಯವಾಗುತ್ತದೆ. ಏಕೆಂದರೆ, ಗೀಳಿನ ಸಮಸ್ಯೆ ಇರುವವರು ನಾಚಿಕೆ ಪಡುತ್ತಾರೆ, ಗೊಂದಲಕ್ಕೊಳಗಾಗುತ್ತಾರೆ ಮತ್ತು ಅವರನ್ನು ಯಾರೂ ಅರ್ಥಮಾಡಿಕೊಳ್ಳು ವುದಿಲ್ಲ. ಒಸಿಡಿಯ ರೋಗನಿರ್ಣಯವೇ ಸಮಸ್ಯೆಯಾಗಿರುವುದರಿಂದ, ಇದು ಹೆಚ್ಚು ಮುಖ್ಯವಾಗುತ್ತದೆ.

ಮನೋವಿಜ್ಞಾನವು ವಸ್ತುನಿಷ್ಠತೆ, ಪ್ರಾಯೋಗಿಕತೆ ಮತ್ತು ಗೋಚರತೆಯನ್ನು ಪರಿಗಣಿಸುತ್ತದೆ. ಆದರೆ, ಕೆಲವೊಮ್ಮೆ ಗೋಚರಿಸುವ ರೋಗಲಕ್ಷಣಗಳ ಮೇಲೆ ಕೇಂದ್ರೀಕರಿಸುವುದು ಗೀಳಿನ ಆಲೋಚನೆಗಳನ್ನು ಹೊಂದಿರುವವರ ಸಂಕೀರ್ಣ ಅನುಭವವನ್ನು ಕಡೆಗಣಿಸುತ್ತದೆ. ಒಸಿಡಿ ಇರುವವರು ಏಕಾಂಗಿತನಕ್ಕೆ ಎಷ್ಟು ಒಗ್ಗಿಕೊಂಡಿರುತ್ತಾರೆಂದರೆ, ಅದು ಅವರಿಗೆ ಗೊತ್ತೇ ಇರುವುದಿಲ್ಲ. ಅದನ್ನು ತೊರೆದಾಗ ಅತ್ಯಂತ ಸಮಾಧಾನ ಆಗುತ್ತದೆ.

(ದ ಫೆಡರಲ್‌ ನಲ್ಲಿ ಡಿಸೆಂಬರ್‌ ೮,೨೦೨೩ರಂದು ಪ್ರಕಟಗೊಂಡಿದ್ದ ಲೇಖನ)

Similar News