ಮಣಿಪುರ: ಪರಿಶಿಷ್ಟ ವರ್ಗ ಸ್ಥಾನಮಾನದ ರಾಜಕಾರಣ
ಮಣಿಪುರದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ.
ಮಣಿಪುರ: ಪರಿಶಿಷ್ಟ ವರ್ಗ ಸ್ಥಾನಮಾನದ ರಾಜಕಾರಣ
-ತೊಂಗ್‌ಖೋಲಾಲ್ ಹಾಕಿಪ್
…
ಮಣಿಪುರದಲ್ಲಿ ಹಿಂಸಾಚಾರದ ವಿರುದ್ಧ ಮೈತಿ ಸಮುದಾಯದ ವಿದ್ಯಾರ್ಥಿಗಳು ಮತ್ತು ನಾಗರಿಕರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಫೈಲ್ ಫೋಟೋ: ಪಿಟಿಐ
…
ಕಳೆದ ಎರಡು ದಶಕಗಳಲ್ಲಿ ದೇಶದ ವಿವಿಧ ಪ್ರಾಂತ್ಯಗಳ ಸಮುದಾಯಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನ್ಯತೆಗಾಗಿ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನಕ್ಕೆ ಬೇಡಿಕೆ ಸಲ್ಲಿಸಿವೆ. ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ ಆದಿವಾಸಿಗಳು ಮತ್ತು ಮಣಿಪುರದಲ್ಲಿ 2012 ರಿಂದ ಪರಿಶಿಷ್ಟ ಪಂಗಡದ ಬೇಡಿಕೆ ಸಮಿತಿ (ಎಸ್ಟಿಡಿಸಿಎಂ) ಎಸ್‌ಟಿ ಸ್ಥಾನಮಾನ ನೀಡಬೇಕೆಂದು ಆಗ್ರಹಿಸುತ್ತಿವೆ.
ಎಸ್ಟಿಡಿಸಿಎಂ ವಿನಂತಿಯನ್ನು ಜುಲೈ 2013 ರಲ್ಲಿ ಪ್ರಧಾನ ಮಂತ್ರಿ ಪರಿಶೀಲಿಸಿದರು. ಮಣಿಪುರ ರಾಜ್ಯಪಾಲ ವರ್ನರ್ ಐ.ರೆಂಗ್‌ಭಾಂಗ್ ಬಾಮ್ ಅವರು ಫೆ.25, 2014 ರಂದು ವಿಧಾನಸಭೆಯಲ್ಲಿ ವಿಷಯವನ್ನು ಮಂಡಿಸಿದರು. ಉಪಮುಖ್ಯಮಂತ್ರಿ ಗೈಖಂಗಮ್ ಗ್ಯಾಂಗ್ ಮೇಯ್, ಸಮಸ್ಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಇದು ಮಣಿಪುರದಲ್ಲಿ ಗುಡ್ಡಗಾಡು- ಬುಡಕಟ್ಟು ಜನಾಂಗದವರ ಸರಣಿ ಪ್ರತಿಭಟನೆಗೆ ಕಾರಣವಾಯಿತು.
ಹೆಚ್ಚಿನ ಜನಸಂಖ್ಯೆ ಮಂಗೋಲರ ಮುಖಚರ್ಯೆ, ಅನಿಮಿಸಂ (ಸರ್ವಚೇತನ ವಾದ, ಸನಾಮಾಹಿ ನಂಬಿಕೆ) ಮತ್ತು ಭಾಗಶಃ ಹಿಂದೂವೀಕರಣಗೊಂಡಿದ್ದು, ಇಂಫಾಲ್ ಕಣಿವೆಯ ಮೊದಲ ವಸಾಹತುಗಾರರಾಗಿರುವುದು ಎಸ್ಟಿ ಸೇರ್ಪಡೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಸಮಿತಿ ವಾದಿಸಿತು ( ಸಂಗೈ ಎಕ್ಸ್‌ಪ್ರೆಸ್, 2013). ಗುಡ್ಡಗಾಡುವಾಸಿಗಳು ಮತ್ತು ಕಣಿವೆಯ ಜನರ ನಡುವಿನ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಕಾರಣ ಎಂದು ದೂಷಿಸಿತು.
21 ಸೆಪ್ಟೆಂಬರ್ 1949ರಂದು ಮಣಿಪುರವನ್ನು ಭಾರತದಲ್ಲಿ ವಿಲೀನಗೊಂಡಿತು(ಇಂಫಾಲ್ ಫ್ರೀ ಪ್ರೆಸ್, 2013). ಸಂವಿಧಾನದ 342 (1) ನೇ ವಿಧಿಯಡಿ ಎಸ್ಟಿ ಪಟ್ಟಿಯಲ್ಲಿ ಸೇರಿಸಿ, ಅಳಿವಿನಂಚಿನಲ್ಲಿರುವ ಸಂಸ್ಕೃತಿ ಮತ್ತು ಗುರುತನ್ನು ರಕ್ಷಿಸುವ ಅಗತ್ಯವನ್ನು ಸಮಿತಿ ಒತ್ತಿ ಹೇಳಿತು.
ಗುಡ್ಡಗಾಡಿನವರ ದೃಷ್ಟಿಕೋನ
ಮಣಿಪುರದ ಬೆಟ್ಟಗಳಲ್ಲಿರುವ ಬುಡಕಟ್ಟು ಜನಾಂಗದವರಿಗೆ ಎಸ್ಟಿ ಸ್ಥಾನಮಾನಕ್ಕೆ ಬೇಡಿಕೆ ಸಲ್ಲಿಸಲು ಕಾರಣವೆಂದರೆ, ಉದ್ಯೋಗದಲ್ಲಿ ಮೀಸಲು ಅವಕಾಶ(ಹುಯೆಯೆನ್ ಲ್ಯಾನ್‌ಪಾವೊ 2013). ಆದರೆ, ಸೆಕ್ಮಾಯಿ, ಫಾಯೆಂಗ್, ಖುರ್ಖುಲ್, ಕೌತ್ರುಕ್, ಲೈಮಾರಂ, ಕ್ವಾಥಾ, ಲೈಮಾರಂ ಖುನೌ ಮತ್ತು ಆಂಡ್ರೊ ಮತ್ತಿತರ ಸ್ಥಳಗಳಲ್ಲಿರುವ ಮೈತಿಗಳು ಮತ್ತು ಇತರ ದುರ್ಬಲ ವರ್ಗಗಳಿಗೆ ಈಗಾಗಲೇ ಎಸ್‌ಸಿ ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ಸ್ಥಾನಮಾನ ನೀಡಲಾಗಿದೆ.
ಉಳಿದ ಮೈತಿಗಳಿಗೆ ಮತ್ತಷ್ಟು ಮೀಸಲು ಅಗತ್ಯವಿದ್ದರೆ, ಅವರನ್ನು ಎಸ್ಸಿ ಅಥವಾ ಒಬಿಸಿ ವರ್ಗಕ್ಕೆ ಸೇರ್ಪಡೆ ಮಾಡಬಹುದು. ಬೆಟ್ಟಗಳು-ಮೈದಾನ ಪ್ರದೇಶದ ವಿಭಜನೆ ಎಷ್ಟು ಆಳವಾಗಿದೆಯೆಂದರೆ, ಮಣಿಪುರದಲ್ಲಿ ಶಾಂತಿಯುತ ಸಹಬಾಳ್ವೆ ಮತ್ತು ಸ್ಥಿರತೆ ಈಗ ಮರೀಚಿಕೆಯಾಗಿ ದೆ ಮತ್ತು ರಾಜ್ಯವನ್ನು ವಿಘಟಿಸುವ ಸಾಧ್ಯತೆಯಿದೆ.
ಎಸ್‌ಟಿಡಿಸಿಎಂ ಪ್ರಕಾರ, ಮೈತಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಿದರೆ ಬೆಟ್ಟಗಳು ಮತ್ತು ಬಯಲು ನಡುವಿನ ಅಂತರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಮತ್ತು ರಾಜ್ಯದ ಸಮಗ್ರತೆಯನ್ನು ಕಾಪಾಡಬಹುದು. ಹೆಚ್ಚಿನ ಮೈತಿಗಳು ಆನಿಮಿಸ್ಟ್‌ಗಳು ಎಂಬುದು ತಪ್ಪು ದಾರಿಗೆ ಎಳೆಯುವಂಥದ್ದು. ಜನಗಣತಿ ಪ್ರಕಾರ, ಮೈತಿಗಳಲ್ಲಿ ಶೇ.80ರಷ್ಟು ಮಂದಿ ಹಿಂದುಗಳಿದ್ದು, ಶೇ. 19 ರಷ್ಟು ಮಂದಿ ಮುಸ್ಲಿಮರು ಅಥವಾ ಇನ್ನಿತರರು ಇದ್ದಾರೆ. ದಶಕಗಳಿಂದ ಮೈತಿಗಳು ಸರ್ಕಾರ ಮತ್ತು ಕೆಲವು ಕಾನೂನುಗಳಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿನ ಭೂಮಿಯನ್ನು ಹಿಡಿತಕ್ಕೆ ತೆಗೆದುಕೊಂಡಿದ್ದು, ತಮ್ಮ ಮೇಲೆ ವಿಧಿಸಿದ ನಿರ್ಬಂಧಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ; ಆದರೆ, ಅವು ಹೆಚ್ಚು ಯಶಸ್ವಿಯಾಗಿಲ್ಲ.
ಅಕ್ಟೋಬರ್ 22, 2011 ರಂದು ಮಣಿಪುರದ ಇಂಫಾಲ್‌ನಲ್ಲಿ ಮಣಿಪುರ ಭೂಕಂದಾಯ ಮತ್ತು ಭೂ ಸುಧಾರಣಾ ಕಾಯಿದೆ (ಎಂಎಲಾರ್ ಆಂಡ್ ಎಲ್ ಆರ್ ಕಾಯಿದೆ, 1960) ಕುರಿತು ಸಾರ್ವಜನಿಕ ಸಭೆ ನಡೆಸಲಾಯಿತು. ಮಣಿಪುರದ ಬೆಟ್ಟ ಮತ್ತು ಕಣಿವೆ ಪ್ರದೇಶಗಳಲ್ಲಿ ಕಾಯಿ ದೆಯನ್ನು ಏಕರೂಪವಾಗಿ ಜಾರಿಗೊಳಿಸದಿದ್ದರೆ, ಆಂತರಿಕ ಸಂಘರ್ಷ ಉಂಟಾಗಬಹುದು ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಹೇಳಿ ದರು.
ಉಳಿದಿರುವ ದಾರಿ
ಸಮಕಾಲೀನ ಮಣಿಪುರವು ಬೇಡಿಕೆ- ಪ್ರತಿ ಬೇಡಿಕೆ, ಪ್ರತಿಭಟನೆ -ವಿರೋಧ ಪ್ರತಿಭಟನೆ, ಸಂಘರ್ಷಗಳು- ಪ್ರತಿ ಘರ್ಷಣೆಗಳಿಂದ ತುಂಬಿದೆ. ಮೂರು ಸಮುದಾಯಗಳು ವಿವಿಧ ವಿಷಯಗಳಲ್ಲಿ ವಿಭಜನೆಗೊಂಡಿವೆ. ಇತ್ತೀಚೆಗೆ ಬೆಟ್ಟ ಮತ್ತು ಕಣಿವೆ ನಡುವಿನ ಉದ್ವಿಗ್ನತೆ ಉಲ್ಬಣ ಗೊಂಡಿದೆ ಮತ್ತು ಗುಡ್ಡಗಾಡು ಜನರ ಪ್ರತ್ಯೇಕ ಆಡಳಿತದ ಬೇಡಿಕೆಯು ರಾಜ್ಯದ ಸ್ಥಿರತೆಗೆ ಸವಾಲು ಒಡ್ಡಿದೆ.
ಮೈತಿಗಳ ಬೇಡಿಕೆಯು 'ಸಾಮಾಜಿಕ' ಅಥವಾ 'ಮಾನವಶಾಸ್ತ್ರʼದ ಬದಲು 'ರಾಜಕೀಯ' ಆಗಿದೆ. ಮೈತಿಗಳ ಆತಂಕಗಳು ಮತ್ತು ತಪ್ಪುಗ್ರಹಿಕೆ ಗಳು ಮತ್ತು ಅವುಗಳನ್ನು ಹೇಗೆ ಪರಿಹರಿಸುವುದು ಎಂಬ ಬಗ್ಗೆ ಆಲೋಚಿಸಬೇಕಿದೆ. ರಾಜ್ಯ ಸರ್ಕಾರ ಈ ದೊಡ್ಡ ಸಮಸ್ಯೆಯನ್ನು ಎಚ್ಚರಿಕೆ ಯಿಂದ ನಿಭಾಯಿಸಬೇಕು. ಸವಾಲುಗಳನ್ನು ಮತ್ತು ಜನರಲ್ಲಿ ಹೆಚ್ಚುತ್ತಿರುವ ತಪ್ಪು ಕಲ್ಪನೆಗಳನ್ನು ಗಂಭೀರವಾಗಿ ಮತ್ತು ಎಚ್ಚರಿಕೆಯಿಂದ ನಿಭಾಯಿಸುವುದು ಉತ್ತಮ ನೈತಿಕ ಅಭ್ಯಾಸ.
(ಸೇಜ್ ಪಬ್ಲಿಕೇಷನ್ಸ್ ಕೃಪೆ)