ದಕ್ಷಿಣ ಜರ್ಮನಿಯಲ್ಲಿ ಹಿಮಪಾತ: ವಿಮಾನ, ರೈಲು ಸಂಚಾರ ರದ್ದು
760 ವಿಮಾನಗಳ ಸಂಚಾರಕ್ಕೆ ತಡೆ
ಚಳಿಗಾಲದ ಚಂಡಮಾತದಿಂದಾಗಿ ದಕ್ಷಿಣ ಜರ್ಮನಿ ಮತ್ತು ಆಸ್ಟ್ರಿಯಾ, ಸ್ವಿಟ್ಜರ್ಲೆಂಡ್ ಮತ್ತು ಜೆಕ್ ರಿಪಬ್ಲಿಕ್‌ನ ಕೆಲವು ಭಾಗಗಳಲ್ಲಿ ಶನಿವಾರ (ಡಿ.2, 2023) ಭಾರೀ ಹಿಮಪಾತವಾಗಿದ್ದು, ಬವರಿಯನ್ ರಾಜಧಾನಿ ಮ್ಯೂನಿಚ್ ನಲ್ಲಿ ವಿಮಾನ ಮತ್ತು ರೈಲು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಈ ಭಾಗದಲ್ಲಿ ಚಳಿಗಾಲದ ಸಮಯದಲ್ಲಿ ಆಗಾಗ ಈ ರೀತಿಯ ಹಿಮಪಾತ ಸಂಭವಿಸುತ್ತಲೇ ಇರುತ್ತದೆ.
ಶನಿವಾರ (ಡಿ.2, 2023) ಮಧ್ಯಾಹ್ನದ ವರೆಗೆ ಮ್ಯೂನಿಚ್ ವಿಮಾನ ನಿಲ್ದಾಣವನ್ನು ಮುಚ್ಚಲು ನಿರ್ಧರಿಸಲಾಗಿತ್ತು, ಆದರೆ ಪರಿಸ್ಥಿತಿ ಅನುಕೂಲಕರವಾಗಿರದ ಹಿನ್ನೆಲೆಯಲ್ಲಿ ಭಾನುವಾರದವರೆಗೆ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ.
ಒಟ್ಟು 760 ವಿಮಾನಗಳ ಸಂಚಾರಕ್ಕೆ ತಡೆ ಉಂಟಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರ ಎಎಫ್‌ಬಿಗೆ ತಿಳಿಸಿದ್ದಾರೆ. ಶುಕ್ರವಾರದಿಂದ ಶನಿವಾರದವರೆಗೆ ಒಟ್ಟು 40 ಸೆಂಟಿ ಮೀಟರ್ ಹಿಮಪಾತವಾಗಿದೆ ಎಂದು ಹವಾಮಾನ ಸೇವಾ ವಿಭಾಗ ಪ್ರಕಟಿಸಿದೆ.
ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ನಾಗರಿಕರು ಮನೆಗಳಲ್ಲೇ ಉಳಿದುಕೊಳ್ಳುವಂತೆ ಅಧಿಕಾರಿಗಳು ಕೋರಿದ್ದಾರೆ. ಈ ಚಳಿಗಾಲದಲ್ಲಿ ರೈಲು ಸಂಚಾರ ಕೂಡಾ ವ್ಯತ್ಯಯವಾಗಿದ್ದು, ಮ್ಯೂನಿಚ್ ನ ಮುಖ್ಯ ನಿಲ್ದಾಣದಲ್ಲಿ ಸೇವೆ ನೀಡುವಂತಿಲ್ಲ ಎಂದು ರೈಲ್ವೆ ನಿರ್ವಾಹಕರು ಹೇಳಿದ್ದಾರೆ.
ಈ ಭಾಗದ ರೈಲುಗಳು ವಿಳಂಬವಾಗುವ ಮತ್ತು ರದ್ದಾಗುವ ಸಾಧ್ಯತೆಯನ್ನು ಪ್ರಯಾಣಿಕರು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಮ್ಯೂನಿಚ್ ನಲ್ಲಿ ಉಪನಗರ ರೈಲು ಸೇವೆ ಮತ್ತು ಬಹುತೇಕ ಬಸ್ ಸೇವೆ ಕೂಡಾ ಸ್ಥಗಿತಗೊಂಡಿದೆ.
ಹಿಮಪಾತದಿಂದಾಗಿ ದೂರದ ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಏಜೆನ್ಸಿ ಪ್ರಕಾರ, ರೈಲುಗಳು ಮ್ಯೂನಿಚ್‌ನ ಕೇಂದ್ರ ರೈಲು ನಿಲ್ದಾಣವನ್ನು ತಲುಪಲು ಸಾಧ್ಯವಾಗಲಿಲ್ಲ. ದಿನವಿಡೀ ಪರಿಸ್ಥಿತಿ ಹೀಗೆಯೇ ಇರಬಹುದೆಂದು ಹೇಳಲಾಗುತ್ತಿದೆ. ಮ್ಯೂನಿಚ್ ನಲ್ಲಿ ಉಪನಗರ ರೈಲು ಸೇವೆ ಮತ್ತು ಬಹುತೇಕ ಬಸ್ ಸೇವೆ ಕೂಡಾ ಸ್ಥಗಿತಗೊಂಡಿದೆ.
ಮ್ಯೂನಿಚ್‌ನ ಸೆಂಟ್ರಲ್ ಸ್ಟೇಷನ್‌ಗೆ ಹೋಗುವ ಮತ್ತು ಹೊರಡುವ ರೈಲುಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಜರ್ಮನಿಯ ರಾಷ್ಟ್ರೀಯ ರೈಲ್ವೆ ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ವಿಳಂಬಗೊಳಿಸಲು ಅಥವಾ ಬದಲಿಸಿಕೊಳ್ಳಲು ಸಲಹೆ ನೀಡಿದೆ. ಮ್ಯೂನಿಚ್ ಮತ್ತು ಹತ್ತಿರದ ನಗರವಾದ ಉಲ್ಮ್‌ನಲ್ಲಿರುವ ಕೆಲವು ಪ್ರಯಾಣಿಕರು ಶುಕ್ರವಾರ ರಾತ್ರಿ ರೈಲುಗಳಲ್ಲಿ ಕಳೆದರು ಎಂದು ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ.
ಮ್ಯೂನಿಚ್‌ನಲ್ಲಿ, ಶನಿವಾರ ಮಧ್ಯಾಹ್ನದವರೆಗೆ ಯಾವುದೇ ಬಸ್‌ಗಳು ಅಥವಾ ಟ್ರಾಮ್‌ಗಳು ಕಾರ್ಯನಿರ್ವಹಿಸಿಲ್ಲ ಎಂದು ಸ್ಥಳೀಯ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಕೆಲವು ಸುರಂಗಮಾರ್ಗ ಮತ್ತು ಪ್ರಾದೇಶಿಕ ರೈಲು ಮಾರ್ಗಗಳು ಸಹ ಹವಾಮಾನದಿಂದಾಗಿ ಸ್ಥಗಿತಗೊಳಿಸಲಾಗಿದೆ. ಬವೇರಿಯಾ ರಾಜ್ಯದಾದ್ಯಂತ ಮರಗಳು ಉರುಳಿಬಿದಿರುವುದರಿಂದ ವಿದ್ಯುತ್ ಸಂಪರ್ಕವೂ ಇಲ್ಲದಂತಾಗಿದೆ ಎಂದು ಯುಟಿಲಿಟಿ ಕಂಪನಿ ಬೇಯರ್ನ್‌ವರ್ಕ್ ಡಿಪಿಎಗೆ ತಿಳಿಸಿದೆ.
ಬಿಯರ್ನ್ ಮ್ಯೂನಿಚ್ ಮತ್ತು ಯೂನಿಯಲ್ ಬರ್ಲಿನ್ ನಡುವಿನ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯವನ್ನೂ ರದ್ದುಪಡಿಸಲಾಗಿದೆ.ಕಾರು ಅಪಘಾತ ಪ್ರಕರಣಗಳಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಹಲವು ದಿನಗಳಿಂದ ಮ್ಯೂನಿಚ್ ನಲ್ಲಿ ಹಿಮಪಾತ ಮತ್ತು ಮೈಕೊರೆಯುವ ಚಳಿಯ ವಾತಾವರಣ ಇದೆ.
ಪಿರ್ಪಾಂಜಲ್ ಪರ್ವತ ಶ್ರೇಣಿಯ ಎತ್ತರದ ಶಿಖರಗಳಲ್ಲಿಯೂ ಹಿಮಪಾತವು ಸಂಭವಿಸಿದೆ. ರಾಜೌರಿ ಮತ್ತು ಪೂಂಚ್ ಜಿಲ್ಲೆಗಳನ್ನು ಕಾಶ್ಮೀರದೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯನ್ನು ತೆರೆಯಲು ಹಿಮ ತೆಗೆಯುವ ಕೆಲಸ ನಡೆಯುತ್ತಿದೆ. ಶ್ರೀನಗರದ ಹವಾಮಾನ ಕೇಂದ್ರ ಪ್ರಕಾರ, ಡಿಸೆಂಬರ್ 10 ರವರೆಗೆ ಹವಾಮಾನ ಏರುಪೇರಾಗಲಿದೆ. ಮತ್ತೊಂದೆಡೆ, ಲೇಹ್‌ನಲ್ಲಿ ನಡುಗುವ ಚಳಿ ಇದೆ.