ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚನೆ: PPP-PML-N ಮಾತುಕತೆ ಸಫಲ

PML-N ಅಧ್ಯಕ್ಷ ಶೆಹಬಾಜ್ ಷರೀಫ್ ಪ್ರಧಾನಿ ಸ್ಥಾನ ವಹಿಸಲಿದ್ದಾರೆ. PPP ಸಹ-ಅಧ್ಯಕ್ಷ ಆಸಿಫ್ ಜರ್ದಾರಿ ಮತ್ತೆ ದೇಶದ ಅಧ್ಯಕ್ಷರನ್ನಾಗಿ ಆಯ್ಕೆ;

Update: 2024-02-21 08:09 GMT

ಇಸ್ಲಾಮಾಬಾದ್: ಅತಂತ್ರ ಸಂಸತ್ ಸೃಷ್ಟಿಯಾಗಿರುವ ಪಾಕಿಸ್ತಾನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಹಲವು ದಿನಗಳ ಸಂಧಾನ ಮಾತುಕತೆ ಬಳಿಕ ಹೊಸ ಸಮ್ಮಿಶ್ರ ಸರ್ಕಾರ ರಚಿಸಲು ಅಂತಿಮವಾಗಿ ಒಪ್ಪಂದಕ್ಕೆ ಬಂದಿವೆ ಎಂದು ಪಕ್ಷದ ಹಿರಿಯ ನಾಯಕರು ಘೋಷಿಸಿದ್ದಾರೆ.

ಮಂಗಳವಾರ ತಡರಾತ್ರಿ ಜಂಟಿ ಸುದ್ದಿಗೋಷ್ಠಿಯಲ್ಲಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರು, ʼʼಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರು ಪ್ರಧಾನಿ ಸ್ಥಾನ ವಹಿಸಲಿದ್ದಾರೆ ಎಂದು ಘೋಷಿಸಿದರು. ಮತ್ತೆ. ಅದೇ ಸಮಯದಲ್ಲಿ, PPP ಸಹ-ಅಧ್ಯಕ್ಷ ಆಸಿಫ್ ಜರ್ದಾರಿ ಮತ್ತೆ ದೇಶದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಪಿಪಿಪಿ ಮತ್ತು ಪಿಎಂಎಲ್-ಎನ್ ಅಗತ್ಯ ಸಂಖ್ಯೆಯನ್ನು ಹೊಂದಿವೆ ಹಾಗೂ ಇದೀಗ ನಾವು ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದೇವೆ" ಎಂದು ಭುಟ್ಟೊ-ಝರ್ದಾರಿ ಹೇಳಿದ್ದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷದಿಂದ ಬೆಂಬಲಿತ ಅಭ್ಯರ್ಥಿಗಳು ಮತ್ತು ಸುನ್ನಿ- ಇತ್ತಿಹಾದ್ ಕೌನ್ಸಿಲ್ ಮೈತ್ರಿಕೂಟ ಸರಳ ಬಹುಮತವನ್ನು ಪಡೆಯಲು ವಿಫಲವಾದ ಬಳಿಕ ಸಮ್ಮಿಶ್ರ ಸರ್ಕಾರ ರಚಿಸುವ ಒಪ್ಪಂದಕ್ಕೆ ಉಭಯ ಪಕ್ಷಗಳು ಬಂದಿವೆ. ಸಂಧಾನ ಮಾತುಕತೆ ಧನಾತ್ಮಕವಾಗಿ ಕೊನೆಗೊಳ್ಳಲು ಕಾರಣರಾದ ಉಭಯ ಪಕ್ಷಗಳ ಮುಖಂಡರನ್ನು ಶೆಹಬಾಝ್ ಷರೀಫ್ ಅಭಿನಂದಿಸಿದ್ದಾರೆ. ಉಭಯ ಪಕ್ಷಗಳ ಒಗ್ಗಟ್ಟಿನಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Tags:    

Similar News