73 ಆಸ್ಪತ್ರೆ ಉದ್ಘಾಟಿಸಿದ ಒಡಿಶಾ ಸಿ.ಎಂ ನವೀನ್ ಪಟ್ನಾಯಕ್

ಒಡಿಶಾದ 15 ಜಿಲ್ಲೆಗಳಲ್ಲಿ 73 ಅಮಾ ಆಸ್ಪತ್ರೆ ಉದ್ಘಾಟನೆ;

Update: 2024-02-18 07:25 GMT
ನವೀನ್‌ ಪಟ್ನಾಯಕ್‌

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ 15 ಜಿಲ್ಲೆಗಳಲ್ಲಿ 73 ಅಮಾ (Ama) ಆಸ್ಪತ್ರೆಗಳನ್ನು ಉದ್ಘಾಟಿಸಿದರು. ಕಳೆದ ವರ್ಷ ಪ್ರಾರಂಭಿಸಲಾಗಿದ್ದ "ಅಮಾ ಆಸ್ಪತ್ರೆ" ಯೋಜನೆಯಡಿ, ಅಸ್ತಿತ್ವದಲ್ಲಿರುವ ಆಸ್ಪತ್ರೆಗಳನ್ನು ನವೀಕರಿಸಲಾಗಿದ್ದು ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಆಸ್ಪತ್ರೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿ.ಎಂ ನವೀನ್‌ ಪಟ್ನಾಯಕ್‌ ಅವರು, ರೋಗಿಗಳ ಅನುಕೂಲಕ್ಕೆ ಅನುಗುಣವಾಗಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐದು ಡಯಾಲಿಸಿಸ್ ಕೇಂದ್ರಗಳನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು. 

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪರಿವರ್ತನಾ ಅಭಿಯಾನದ ಮೂಲಕ 1,858 ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 3,300 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ. 

Tags:    

Similar News