ಬಾಲಸೋರ್ (ಒಡಿಶಾ) ಮೇ 1- ಒಡಿಶಾ ಕರಾವಳಿಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಸೂಪರ್‌ಸಾನಿಕ್ ಕ್ಷಿಪಣಿ ನೆರವಿನ ಬಿಡುಗಡೆ ಟಾರ್ಪೆಡೊ (ಸ್ಮಾರ್ಟ್) ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರೌಂಡ್ ಮೊಬೈಲ್ ಲಾಂಚರ್‌ನಿಂದ ಬೆಳಗ್ಗೆ 8.30 ರ ಸುಮಾರಿಗೆ ವ್ಯವಸ್ಥೆಯನ್ನು ಹಾರಿಬಿಡಲಾಯಿತು.
ಈ ಮೂಲಕ ಸಿಮೆಟ್ರಿಕ್ ಬೇರ್ಪಡಿಕೆ, ಇಜೆಕ್ಷನ್ ಮತ್ತು ವೇಗ ನಿಯಂತ್ರಣದಂತಹ ಹಲವಾರು ಅತ್ಯಾಧುನಿಕ ಕಾರ್ಯವಿಧಾನಗಳ ಮೌಲ್ಯಮಾಪನ ಮಾಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಸ್ಮಾರ್ಟ್ ಮುಂದಿನ ಪೀಳಿಗೆಯ ಕ್ಷಿಪಣಿ ಆಧಾರಿತ ಹಗುರ ತೂಕದ ಟಾರ್ಪೆಡೊ ವಿತರಣೆ ವ್ಯವಸ್ಥೆಯಾಗಿದ್ದು,ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ದೇಶದ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ರೂಪುಗೊಂಡಿದೆ ಎಂದು ವಿವರಿಸಿದರು.