Pahalgam Terror Attack : ಕುಪ್ವಾರಾದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಸಾಮಾಜಿಕ ಕಾರ್ಯಕರ್ತ ಹತ್ಯೆ

ಗುಂಡಿನ ದಾಳಿಯಲ್ಲಿ ಮಗ್ರೆಯವರ ಹೊಟ್ಟೆ ಮತ್ತು ಎಡಗೈ ಮಣಿಕಟ್ಟಿಗೆ ಗುಂಡು ತಗುಲಿತ್ತು. ಗಾಯಗೊಂಡ ಕೂಡಲೇ ಅವರನ್ನು ಕುಪ್ವಾರಾದ ಹಂದವಾಡ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು.;

Update: 2025-04-27 05:46 GMT

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಂಡಿಖಾಸ್ ಪ್ರದೇಶದಲ್ಲಿ ಅಪರಿಚಿತರ ಗುಂಡಿಗೆ 45 ವರ್ಷದ ಸಾಮಾಜಿಕ ಕಾರ್ಯಕರ್ತ ಗುಲಾಮ್ ರಸೂಲ್ ಎಂಬುವರು ಮೃತಪಟ್ಟಿದ್ದಾರೆ. ಈ ಘಟನೆ ಶನಿವಾರ (ಏಪ್ರಿಲ್ 26ರಂದು- ರಾತ್ರಿ ನಡೆದಿದೆ.

ಗುಂಡಿನ ದಾಳಿಯಲ್ಲಿ ಮಗ್ರೆಯವರ ಹೊಟ್ಟೆ ಮತ್ತು ಎಡಗೈ ಮಣಿಕಟ್ಟಿಗೆ ಗುಂಡು ತಗುಲಿತ್ತು. ಗಾಯಗೊಂಡ ಕೂಡಲೇ ಅವರನ್ನು ಕುಪ್ವಾರಾದ ಹಂದವಾಡ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ಅಧಿಕಾರಿಗಳ ಪ್ರಕಾರ, ಗುಂಡುಧಾರಿಗಳು ಭಯೋತ್ಪಾದಕರೆಂದು ಶಂಕಿಸಲಾಗಿದೆ, ಆದರೆ ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ಭದ್ರತಾ ಪಡೆಗಳ ಕಾರ್ಯಾಚರಣೆ

ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ, ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತನಿಖೆಯನ್ನು ಆರಂಭಿಸಿವೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ (ಏಪ್ರಿಲ್ 22, 2025) ಹಿನ್ನೆಲೆಯಲ್ಲಿ ಈಗಾಗಲೇ ಉನ್ನತ ಭದ್ರತಾ ಎಚ್ಚರಿಕೆಯಲ್ಲಿರುವ ಕಾಶ್ಮೀರ ಕಣಿವೆಯಲ್ಲಿ ಈ ಘಟನೆ ಸಂಭವಿಸಿದೆ. ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು, ಇದು 2019 ರ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಘೋರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ.

ಗುಲಾಮ್ ರಸೂಲ್ ಮಗ್ರೆಯವರ ಹತ್ಯೆಯ ಹಿಂದಿನ ಕಾರಣವನ್ನು ತಿಳಿಯಲು ಭದ್ರತಾ ಪಡೆಗಳು ತೀವ್ರ ತನಿಖೆ ನಡೆಸುತ್ತಿವೆ. ಮಗ್ರೆಯವರ ಸಾಮಾಜಿಕ ಕಾರ್ಯಕ್ಷೇತ್ರದ ಕಾರಣದಿಂದಾಗಿಯೇ ಈ ದಾಳಿ ನಡೆದಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಪಹಲ್ಗಾಮ್ ದಾಳಿಯ ನಂತರ, ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರವು ಮುಂದಾಗಿದೆ. ಕುಪ್ವಾರಾದ ಕಲಾರೂಸ್ ಪ್ರದೇಶದಲ್ಲಿ ಫಾರೂಕ್ ಅಹ್ಮದ್ ಟೆಡ್ವಾ ಮತ್ತು ಮಿಸ್ಕೀನ್ ಅಹ್ಮದ್ ಟೆಡ್ವಾ ಎಂಬ ಇಬ್ಬರು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರ ಮನೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.

Tags:    

Similar News