ಜಮ್ಮು ಮತ್ತು ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮ್ನ ಬೈಸರನ್ ಮೈದಾನದಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿ ನಂತರ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ನೌಕಾಪಡೆಯು ಅರಬ್ಬಿಸಮುದ್ರದಲ್ಲಿ ಸಮರಾಭ್ಯಾಸ ಆರಂಭಿಸಿದ್ದು, ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಶ್ಮೀರದ ಕುಪ್ವಾರದಲ್ಲಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ಆರು ಭಯೋತ್ಪಾದಕರು ಅಥವಾ ಅವರ ಸಹಾಯಕರ ಮನೆಗಳನ್ನು ಧ್ವಂಸಗೊಳಿಸಲಾಗಿದ್ದು, ಒಳಸಂಚು ಮಾಡುತ್ತಿದ್ದ ನೂರಾರು ಬೆಂಬಲಿಗರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.Authorities in #Kashmir have launched a massive crackdown on #terrorists and their sympathisers after the #PahalgamTerrorAttack, razing homes and #detaining hundreds for questioning.https://t.co/1U9Eyko98l— The Federal (@TheFederal_News) April 27, 2025 ಪಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ವ್ಯಾಪಕ ಕಾರ್ಯಾಚರಣೆ ಆರಂಭಿಸಿವೆ. ಕಾರ್ಯಾಚರಣೆಯು ದಕ್ಷಿಣ ಕಾಶ್ಮೀರದ ಅನಂತನಾಗ, ಪುಲ್ವಾಮಾ, ಶೋಪಿಯಾನ್, ಕುಪ್ವಾರ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ನಡೆದಿದೆ. ಆದಿಲ್ ಠೋಕರ್, ಅಸಿಫ್ ಶೇಖ್, ಶಾಹಿದ್ ಅಹ್ಮದ್ ಕುಟ್ಟೆ, ಅದ್ನಾನ್ ಶಫಿ, ಫಾರೂಕ್ ಅಹ್ಮದ್ ತೆಡ್ವಾ ಮತ್ತು ಮಿಸ್ಕೀನ್ ಅಹ್ಮದ್ ತೆಡ್ವಾ, ಝಾಕಿರ್ ಅಹ್ಮದ್ ಗಾನಿಯೆ ಎಂಬ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗಿದೆ. ಮನೆಗಳು ಧ್ವಂಸ ಉಗ್ರರು ಹಾಗೂ ಅವರ ಬೆಂಬಲಿಗರ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ಸ್ಫೋಟಕಗಳನ್ನು ಬಳಸಿ ಅಥವಾ ಬುಲ್ಡೋಜರ್ಗಳ ಮೂಲಕ ನಡೆಸಲಾಗಿದೆ. ಶನಿವಾರ ಶ್ರೀನಗರದ ಸಫಾಕದಲ್, ಸೌರಾ, ಪಾಂಡಚ್ ಬೆಮಿನಾ, ಶಾಲ್ಟೆಂಗ್, ಲಾಲ್ ಬಜಾರ್ ಮತ್ತು ಝಾಡಿಬಾಲ್ ಪ್ರದೇಶಗಳ ಸೇರಿದಂತೆ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯು ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳು ಮತ್ತು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ನಡೆದಿದೆ. ಶಸ್ತ್ರಾಸ್ತ್ರಗಳು, ದಾಖಲೆಗಳು ಮತ್ತು ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ಈ ಶೋಧವನ್ನು ನಡೆಸಲಾಗಿದೆ.ಅನಂತನಾಗ ಜಿಲ್ಲೆಯಲ್ಲಿ, ಭದ್ರತಾ ಪಡೆಗಳು ಕಾವಲು ಹೆಚ್ಚಿಸಿದ್ದು, ಉಗ್ರರ ಚಲನೆಗಳನ್ನು ಪರಿಶೀಲಿಸಲು ಮೊಬೈಲ್ ವಾಹನ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಾಶ್ಮೀರ ಕಣಿವೆಯಾದ್ಯಂತ ಭಯೋತ್ಪಾದಕರ ಸಹಾಯಕರನ್ನು ಗುರುತಿಸಿ, ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ.ಒಳಸಂಚು ಕಾರ್ಯಕರ್ತರ ವಶ ಅನಂತನಾಗ ಜಿಲ್ಲೆಯಲ್ಲಿ 175 ಒಳಸಂಚು ಕಾರ್ಯಕರ್ತರನ್ನು (OGWs) ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು ನೂರಾರು OGWs ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂದಿಪೊರ ಜಿಲ್ಲೆಯ ಕುಲ್ನಾರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯೊಂದರಲ್ಲಿ ಒಬ್ಬ OGW ಆಗಿದ್ದ ಅಲ್ತಾಫ್ ಲಾಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.