ಭಾರತ ಉತ್ತಮ ವ್ಯಾಪಾರ ಪಾಲುದಾರನಲ್ಲ, 24 ಗಂಟೆಗಳಲ್ಲಿ ಸುಂಕ ಹೆಚ್ಚಿಸುತ್ತೇನೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನಾವು ಶೇಕಡ 25ರಷ್ಟು ಸುಂಕವನ್ನು ನಿಗದಿಪಡಿಸಿದ್ದೇವೆ, ಆದರೆ ಅವರು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದರಿಂದ, ಮುಂದಿನ 24 ಗಂಟೆಗಳಲ್ಲಿ ನಾನು ಆ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.;

Update: 2025-08-05 13:32 GMT

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತವು ಉತ್ತಮ ವ್ಯಾಪಾರ ಪಾಲುದಾರನಾಗಿಲ್ಲ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲಿನ ಸುಂಕಗಳನ್ನು "ಗಣನೀಯವಾಗಿ" ಹೆಚ್ಚಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಸಿಎನ್​ಬಿಸಿ (CNBC) ವಾಹಿನಿಯ 'ಸ್ಕ್ವಾಕ್ ಬಾಕ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತದ ಬಗ್ಗೆ ಜನರು ಹೇಳಲು ಇಷ್ಟಪಡದ ವಿಷಯವೆಂದರೆ, ಅದು ಜಗತ್ತಿನಲ್ಲಿಯೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ. ಅವರ ಸುಂಕಗಳು ತುಂಬಾ ಹೆಚ್ಚಾಗಿರುವುದರಿಂದ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯಾಪಾರ ಮಾಡುತ್ತೇವೆ," ಎಂದು ಹೇಳಿದರು.

"ಭಾರತವು ಉತ್ತಮ ವ್ಯಾಪಾರ ಪಾಲುದಾರನಾಗಿಲ್ಲ, ಏಕೆಂದರೆ ಅವರು ನಮ್ಮೊಂದಿಗೆ ಸಾಕಷ್ಟು ವ್ಯಾಪಾರ ಮಾಡುತ್ತಾರೆ, ಆದರೆ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ನಾವು ಶೇಕಡ 25ರಷ್ಟು ಸುಂಕವನ್ನು ನಿಗದಿಪಡಿಸಿದ್ದೇವೆ, ಆದರೆ ಅವರು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದರಿಂದ, ಮುಂದಿನ 24 ಗಂಟೆಗಳಲ್ಲಿ ನಾನು ಆ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ," ಎಂದು ಟ್ರಂಪ್ ತಮ್ಮ ನಿರ್ಧಾರಕ್ಕೆ ಕಾರಣವನ್ನು ಸ್ಪಷ್ಟಪಡಿಸಿದರು. 

Tags:    

Similar News