Namma Metro| ಭಾನುವಾರ ಬೆಳಗಿನ ಜಾವ 3.30ಕ್ಕೆ ನಮ್ಮ ಮೆಟ್ರೋ ಸಂಚಾರ ಆರಂಭ
ಏಪ್ರಿಲ್ 27ರಂದು ಬೆಳಗ್ಗೆ 6 ಗಂಟೆಗೆ ಕಬ್ಬನ್ ಪಾರ್ಕ್‌ನಿಂದ ವರ್ಲ್ಡ್ 10k ಮ್ಯಾರಥಾನ್ ಆರಂಭವಾಗಲಿದ್ದು, ಒಟ್ಟು ಹತ್ತು ಕಿ.ಮೀ ದೂರದ ಓಟದ ಸ್ಪರ್ಧೆ ಇದಾಗಿದೆ.;
ನಮ್ಮ ಮೆಟ್ರೋ
ಇದೇ ಏಪ್ರಿಲ್ 27ರಂದು ಬೆಂಗಳೂರಲ್ಲಿ ನಡೆಯಲಿರುವ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಬೆಳಗ್ಗೆ 6 ಗಂಟೆಗೆ ಬದಲಾಗಿ ಬೆಳಗಿನ ಜಾವ 3.30ಕ್ಕೆ ಆರಂಭವಾಗಲಿದೆ.
ಈ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು," ಟಿಸಿಎಸ್ ವರ್ಲ್ಡ್ 10ಕೆ - 2025 ಮ್ಯಾರಥಾನ್ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ಬಿಎಂಆರ್‌ಸಿಎಲ್ ಏಪ್ರಿಲ್ 27 ಭಾನುವಾರ ಬೆಳಿಗ್ಗೆ 3:30ಕ್ಕೆ ಮೆಟ್ರೋ ರೈಲು ಸೇವೆಯನ್ನು ಆರಂಭಿಸಲಿದೆ. ಸಾಮಾನ್ಯ ಸಮಯಕ್ಕಿಂತ ಮೂರುವರೆ ಗಂಟೆಗಳ ಮುಂಚೆಯೇ ಪ್ರಾರಂಭವಾಗುತ್ತದೆ " ಎಂದು ತಿಳಿಸಿದೆ.
ನಮ್ಮ ಮೆಟ್ರೋ ನಾಲ್ಕು ಟರ್ಮಿನಲ್‌ಗಳಿಂದಲೂ 3.30ಕ್ಕೆ ನಮ್ಮ ಮೆಟ್ರೋ ಸೇವೆ ಆರಂಭವಾಗಲಿದೆ. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ 27ರಂದು ಬೆಳಗ್ಗೆ 6 ಗಂಟೆಗೆ ಕಬ್ಬನ್ ಪಾರ್ಕ್‌ನಿಂದ ವರ್ಲ್ಡ್ 10k ಮ್ಯಾರಥಾನ್ ಆರಂಭವಾಗಲಿದ್ದು, ಒಟ್ಟು ಹತ್ತು ಕಿಮೀ ದೂರದ ಓಟದ ಸ್ಪರ್ಧೆ ಇದಾಗಿದೆ.
ಮೆಟ್ರೋದಲ್ಲಿ ಗುಟ್ಕಾ ಹಾಕಿದರೆ ಬೀಳುತ್ತದೆ ದಂಡ
ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಪ್ರಯಾಣಿಕನೊಬ್ಬ ಗುಟ್ಕಾ ಹಾಕಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣ ಹಾಗೂ ರೈಲುಗಳ ಒಳಗೆ ತಂಬಾಕು ಆಧರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸಲು ನಿರ್ಧರಿಸಿದೆ.
ಮೆಟ್ರೋ ನಿಲ್ದಾಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ, ಜನದಟ್ಟಣೆ ಸಮಯಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲು ʼನಮ್ಮ ಮೆಟ್ರೋʼ ನಿರ್ಧರಿಸಿದೆ. ಎಲ್ಲಾ ರೈಲುಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ. ತಪ್ಪಿದಲ್ಲಿ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ.