ಇಂದಿನಿಂದ SSLC ಪರೀಕ್ಷೆ: ಕೇಂದ್ರಗಳ ಸುತ್ತ ಬಂದೋಬಸ್ತ್
ಪರೀಕ್ಷೆ ಆರಂಭವಾದ 30 ನಿಮಿಷಗಳೊಳಗೆ ಬಂದರಷ್ಟೇ ಪರೀಕ್ಷಾ ಕೊಠಡಿಗೆ ಪ್ರವೇಶ ದೊರೆಯಲಿದ್ದು, ಎಲ್ಲಾ ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿ ಪರೀಕ್ಷೆ ಬರೆಯುವಂತೆ ಡೆಸ್ಕ್‌ಗಳನ್ನು ಅಳವಡಿಸಲಾಗಿದೆ.;
By : The Federal
Update: 2024-03-24 06:27 GMT
ಮಾ. ೨೫ ರಿಂದ (ಸೋಮವಾರ) ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ರಾಜ್ಯದ ಎಲ್ಲಾ 2750 ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರದಿಂದ ಪರೀಕ್ಷೆಗಳು ಆರಂಭವಾಗಿವೆ.
ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗಿದ್ದು, ಪ್ರತೀ ಕೇಂದ್ರಗಳ ಚಲನವಲನಗಳನ್ನು ಅಧಿಕಾರಿಗಳ ತಮ್ಮ ಕಚೇರಿಯಲ್ಲೇ ಕೂತು ವೀಕ್ಷಿಸಬಹುದಾಗಿದೆ.
ಪರೀಕ್ಷಾ ಕೇಂದ್ರಗಳ ಆಸುಪಾಸಿನ 200 ಮೀಟರ್ ಸುತ್ತಳತೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಪರೀಕ್ಷೆ ಆರಂಭವಾದ 30 ನಿಮಿಷಗಳೊಳಗೆ ಬಂದರಷ್ಟೇ ಪರೀಕ್ಷಾ ಕೊಠಡಿಗೆ ಪ್ರವೇಶ ದೊರೆಯಲಿದ್ದು, ಎಲ್ಲಾ ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿ ಪರೀಕ್ಷೆ ಬರೆಯುವಂತೆ ಡೆಸ್ಕ್‌ಗಳನ್ನು ಅಳವಡಿಸಲಾಗಿದೆ. ಎಪ್ರಿಲ್ 6 ಕ್ಕೆ ಪರೀಕ್ಷೆಗಳು ಮುಕ್ತಾಯವಾಗಲಿದೆ.