Sonu NIgam: ಗೂಂಡಾ ಕನ್ನಡಿಗರು; ಸಮರ್ಥನೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಸೋನು ನಿಗಮ್
ಕನ್ನಡ, ಕನ್ನಡ ಎಂದು ಕೂಗುತ್ತಿರುವವರಿಗೆ ಸುಮ್ಮನಿರುವಂತೆ ಅಲ್ಲಿ ಅನೇಕರು ಅವರಿಗೆ ಮನವಿ ಮಾಡುತ್ತಿದ್ದರು. ಕಾರ್ಯಕ್ರಮದ ವಾತಾವರಣ ಹಾಳು ಮಾಡದಿರಿ ಎಂದು ಹೇಳುವುದು ಅನಿವಾರ್ಯವಾಗಿತ್ತು ಎಂದು ಸೋನು ನಿಗಮ್ ಹೇಳಿದ್ದಾರೆ.;
ಗೂಂಡಾ ಕನ್ನಡಿಗರು, ಅಂಥವರನ್ನು ಕಂಡರೆ ಆಗಲ್ಲ. ಇದು ಸೋನು ನಿಗಮ್ ನೀಡಿರುವ ಮತ್ತೊಂದು ಹೇಳಿಕೆ. ಇದು ತಾವು ಇತ್ತೀಚೆಗೆ ನೀಡಿರುವ ಹೇಳಿಕೆಯೊಂದನ್ನು ಸಮರ್ಥಿಸಲು ಮುಂದಾಗಿರುವ ಅವರು ಈ ರೀತಿಯ ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಬಗ್ಗೆ ಕಳಪೆ ಹೇಳಿಕೆ ನೀಡಿರುವ ಗಾಯಕ ಸೋನು ನಿಗಮ್ (Sonu Nigam) ಇದೀಗ ಮತ್ತೊಂದು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೇಳಿಕೆಗೆ ಸ್ಪಷ್ಟನೆ ನೀಡಲು ವಿಡಿಯೊವೊಂದನ್ನು ರಿಲೀಸ್ ಮಾಡಿರುವ ಸೋನು ನಿಗಮ್ ಮತ್ತೆ ಕನ್ನಡಿಗರನ್ನು ಕೆಣಕಿದ್ದಾರೆ. ಈ ವೇಳೆ ಅವರು ಕನ್ನಡಿಗರನ್ನು'ಗೂಂಡಾಗಳು' ಎಂದು ಕರೆದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸೋನು ನಿಗಮ್ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮ್ಮ ಹೇಳಿಕೆಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತಗೊಂಡ ಹಿನ್ನೆಲೆ ಸೋನು ನಿಗಮ್ ವಿಡಿಯೊವೊಂದನ್ನು ರಿಲೀಸ್ ಮಾಡಿದ್ದಾರೆ. ವಿಡಿಯೊದಲ್ಲಿ ಕನ್ನಡ... ಕನ್ನಡ... ಕೂಗುವಲ್ಲಿ ವ್ಯತ್ಯಾಸ ಇದೆ ಎಂದು ಎರಡೆರಡು ಬಾರಿ ಹೇಳಿದ್ದಾರೆ. ಕನ್ನಡ ಎಂದು ಜೋರಾಗಿ ಕೂಗುವುದು ಗೂಂಡಾಗಿರಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ನಾಲ್ಕೈದು ಜನ ಗೂಂಡಾ ರೀತಿಯಲ್ಲಿ ವರ್ತಿಸುತ್ತಾ ಅಲ್ಲಿ ಕನ್ನಡ ಕನ್ನಡ ಎಂದು ಕೂಗುತ್ತಿದ್ದರು. ಆ ರೀತಿ ಹೇಳಿದ್ದರಿಂದ ತಾನು ಕೆರಳಿದ್ದೆ ಎಂದು ಅವರು ಹೇಳಿದ್ದಾರೆ.
ಕನ್ನಡ, ಕನ್ನಡ ಎಂದು ಕೂಗುತ್ತಿರುವವರಿಗೆ ಸುಮ್ಮನಿರುವಂತೆ ಅಲ್ಲಿ ಅನೇಕರು ಅವರಿಗೆ ಮನವಿ ಮಾಡುತ್ತಿದ್ದರು. ಕಾರ್ಯಕ್ರಮದ ವಾತಾವರಣ ಹಾಳು ಮಾಡದಿರಿ ಎಂದು ಹೇಳುವುದು ಅನಿವಾರ್ಯವಾಗಿತ್ತು. ಪ್ರೇಕ್ಷಕರಿಗೆ ಬೆದರಿಕೆ ಹಾಕುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಉಗ್ರರು ಭಾಷೆ ಯಾವುದೆಂದು ಕೇಳಿರಲಿಲ್ಲ. ಹೀಗಾಗಿ ಅವರಿಗೆ ತಿಳಿ ಹೇಳುವುದು ಅನಿವಾರ್ಯವಾಗಿತ್ತು. ಹಾಗಂತ ಹೇಳಿ ಕನ್ನಡಿಗೆರೆಲ್ಲರೂ ಕೆಟ್ಟವರೆಂದಲ್ಲ. ಅಲ್ಲಿನ ಜನರು ಬಹಳ ಒಳ್ಳೆಯವರು. ದೇಶದ ಯಾವ ಭಾಗಕ್ಕೆ ಹೋದರೂ ಇಂತಹ ಕೆಲವೊಂದು ಜನರಿರುತ್ತಾರೆ. ಅಂತಹವರನ್ನು ಆ ಕ್ಷಣವೇ ತಡೆಯುವುದು ಅತ್ಯವಶ್ಯಕ. ಪ್ರೀತಿಯ ಭೂಮಿಯಲ್ಲಿ ದ್ವೇಷದ ಬೀಜ ಬಿತ್ತುವುದನ್ನು ತಡೆಯಲೇಬೇಕು. ಅಲ್ಲಿದ್ದ ನಾಲ್ಕೈದು ಜನ ಕನ್ನಡ ಹಾಡುವಂತೆ ಬೇಡಿಕೆ ಇಟ್ಟಿರಲಿಲ್ಲ. ಬದಲಾಗಿ ಅವರು ನನಗೆ ಬೆದರಿಕೆ ಹಾಕಿದ್ದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಸೋನು ನಿಗಮ್ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಲು ಮುಂದಾಗಿರುವ ವಿಡಿಯೊ ಕೂಡ ಈಗ ಮತ್ತೆ ವೈರಲ್ ಆಗಿದೆ. ಹೀಗಾಗಿ ಅವರ ಹೇಳಿಕೆಯು ಮತ್ತೊಂದು ಬಾರಿ ವಿವಾದ ಸೃಷ್ಟಿಸಿದೆ.