ಹೆಣ್ಣುಕುಲದ ಅವಮಾನ, ಅತ್ಯಾಚಾರ ಮಾಡುವವರ ಮನೆತನ ಸರ್ವನಾಶ ಆಗುತ್ತದೆ - ಜಗ್ಗೇಶ್
ಹೆಣ್ಣು ದೇವರ ಪ್ರತಿರೂಪ ತನ್ನ ಸೃಷ್ಠಿಯ ಕಾರ್ಯ ಭೂಲೋಕದಲ್ಲಿ ಹೆಣ್ಣಿಂದ ಮಾಡಿಸುತ್ತಾನೆ.;
ನಟ ಜಗ್ಗೇಶ್ ಅವರು ಹೆಣ್ಣಿನ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಹೌದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಂದು ಕೆಲ ಸಾಲು ಬರೆದುಕೊಂಡಿದ್ದಾರೆ. ಸಾಲು ನೋಡಿದರೆ ಆ ಸಾಲು, ಪ್ರಜ್ವಲ್ ರೇವಣ್ಣ ಅವರನ್ನೇ ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ ಎಂದು ಯಾರಾದರೂ ಊಹಿಸಬಹುದು. ಎಲ್ಲರೂ ಹಾಗೇ ಅಂದುಕೊಂಡಿದ್ದಾರೆ ಕೂಡ.
ಹೆಣ್ಣು ದೇವರ ಪ್ರತಿರೂಪ ತನ್ನ ಸೃಷ್ಠಿಯ ಕಾರ್ಯ ಭೂಲೋಕದಲ್ಲಿ ಹೆಣ್ಣಿಂದ ಮಾಡಿಸುತ್ತಾನೆ. ಹಾಗಾಗಿ ಹೆಣ್ಣುಕುಲಕ್ಕೆ ವಿಶೇಷ ಶಕ್ತಿ ಬ್ರಹ್ಮಾಂಡದಲ್ಲಿ...ಹೆಣ್ಣು ಮಗಳು ಮಡದಿ ತಾಯಿ ರೂಪ ಹೊಂದಿ ಮನುಕುಲದ ಉದ್ಧಾರಕ್ಕೆ ಜನಿಸಿದ ಮಾತೃ ಸ್ವರೂಪಿಣಿ ಅರ್ಥಾತ್ ದೈವ ಸ್ವರೂಪ. ಇಂಥ ಹೆಣ್ಣುಕುಲವ ಶೋಷಣೆ ಯಾ ದುಃಖ ಯಾ ಅಪಮಾನ ಯಾ ಮಾನಭಂಗ ಮಾಡುವ ಯಾವ ನರನು ಉದ್ಧಾರವಾದ ಇತಿಹಾಸವಿಲ್ಲ ಎಂದಿರುವ ಜಗ್ಗೇಶ್ ಯಾರು ಯಾವ ಮನೆಯಲ್ಲಿ ಹೆಣ್ಣುಕುಲಕ್ಕೆ ಅಕ್ಕ-ತಂಗಿ ತಾಯಿ-ಮಡದಿ ಮಗಳ ರೂಪದಲ್ಲಿ ಗೌರವಿಸುತ್ತಾನೋ, ಆ ಮನುಷ್ಯನ ಜೇವನ ಮನೆತನ ಸಂಕಷ್ಟವಿಲ್ಲದೆ ನಂದಗೋಕುಲ ಆಗುತ್ತದೆ ಹಾಗು ಆ ಮನೆತನದಲ್ಲಿ ಆ ಲಕ್ಕ್ಷ್ಮೀ ಲಕ್ಷ್ಮೀಯಾಗಿ ಪರಿವರ್ತನೆ ಆಗುತ್ತಾಳೆ ಎಂದಿದ್ದಾರೆ.
ಮುಂದುವರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಜಗ್ಗೇಶ್, ಯಾರು ಇಂಥ ಶ್ರೇಷ್ಠ ಹೆಣ್ಣುಕುಲ ಅಪಮಾನ ಅವಮಾನ ಅತ್ಯಾಚಾರ ಮಾಡುತ್ತಾನೆ ಆ ಮನೆತನ ಸರ್ವನಾಶ ಆಗುತ್ತದೆ ಎಂದಿದ್ದಾರೆ. ಇಷ್ಟೇ ಅಲ್ಲ ಹೆಣ್ಣುಕುಲ ಗೌರವಿಸುವ ಶ್ರೇಷ್ಠ ದೇಶ ನಮ್ಮದು. ದೇಶಕ್ಕೂ ಮಾತೆ ಸ್ಥಾನ ನೀಡಿದವರು ನಮ್ಮ ಸನಾತನರು. ಇಂಥ ದೇಶವಾಸಿಗಳು ಹೆಣ್ಣುಕುಲ ಗೌರವಿಸಿ. ಸರ್ವಸ್ತ್ರೀಯರಲ್ಲೂ ತಾಯಿ ಕಾಣಿರಿ ಎಂದು ಕೂಡ ಅಕ್ಷರದ ಮೂಲಕ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಜಗ್ಗೇಶ್ ಅವರ ಈ ಅಭಿಪ್ರಾಯಕ್ಕೆ ಅನೇಕರು ಅವರ ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜಗ್ಗೇಶ್ ಅವರ ಕಮೆಂಟ್ ಸೆಕ್ಷನ್‌ನಲ್ಲಿ ಚರ್ಚೆಯನ್ನ ಮಾಡ್ತಿದ್ದಾರೆ.
ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಪೆನ್ ಡ್ರೈವ್ ಬಗ್ಗೆ ಎಲ್ಲರೂ ಆಕ್ರೋಶವನ್ನ ವ್ಯಕ್ತಪಡಿಸುವ ಈ ಸಮಯದಲ್ಲಿ ಜಗ್ಗೇಶ್ ಮಾಡಿರುವ ಈ ಪೋಸ್ಟ್ ಈಗ ಚರ್ಚಿತ ವಿಷಯವಾಗಿದೆ.