ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇಗುಲದಲ್ಲಿ ಸೇವಾ ಶುಲ್ಕ ಪರಿಷ್ಕರಣೆ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 'ಪುಷ್ಪಾರ್ಚನೆ' ಸೇವೆಯ ದರವನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ 120 ರೂ.ಗಳಿದ್ದ ಸೇವಾ ಶುಲ್ಕವನ್ನು ಇದೀಗ 220 ರೂ.ಗಳಿಗೆ ಹೆಚ್ಚಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯ
ಧಾರ್ಮಿಕ ದತ್ತಿ ಇಲಾಖೆಯು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲೂ ದರ ಪರಿಷ್ಕರಣೆಯಾಗಿದ್ದು, ವಿವಿಧ ಸೇವೆಗಳಿಗೆ ಹೊಸ ದರ ನಿಗದಿ ಮಾಡಲಾಗಿದೆ.
ಕಟೀಲು ದೇವಾಲಯದಲ್ಲಿ ಪರಿಷ್ಕೃತ ದರ ಎಷ್ಟು?
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 'ಪುಷ್ಪಾರ್ಚನೆ' ಸೇವೆಯ ದರವನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ 120 ರೂಪಾಯಿಗಳಿದ್ದ ಸೇವಾ ಶುಲ್ಕವನ್ನು ಇದೀಗ 220 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲೂ ಹೊಸ ದರ
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಪ್ರಮುಖ ಸೇವೆಗಳ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ, 'ಎ' ಶ್ರೇಣಿಯ ಈ ದೇವಾಲಯದಲ್ಲಿನ ಕೆಲ ಸೇವೆಗಳ ಪರಿಷ್ಕೃತ ದರಗಳು ಈ ಕೆಳಗಿನಂತಿವೆ.
ಈ ಹಿಂದೆ 400 ರೂ.ಗಳಿದ್ದ ಆಶ್ಲೇಷ ಬಲಿ ಪೂಜಾ ಸೇವೆಯ ಶುಲ್ಕವನ್ನು 500 ರೂ.ಗೆ ಹೆಚ್ಚಿಸಲಾಗಿದೆ. ನಾಗಪ್ರತಿಷ್ಠಾ ಸೇವೆಯ ದರವೂ 400 ರೂ.ಗಳಿಂದ 500 ರೂ.ಗಳಿಗೆ ಏರಿಕೆಯಾಗಿದೆ.
ಇಲಾಖೆಯ ಪ್ರಕಾರ, ಈ ದರ ಪರಿಷ್ಕರಣೆಯು ರಾಜ್ಯದ ಇತರ 'ಎ' ಶ್ರೇಣಿಯ ದೇವಾಲಯಗಳಿಗೂ ಅನ್ವಯವಾಗಲಿದೆ.