ಎಸ್‌ ಎಂ ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್‌ವುಡ್‌ ತಾರೆಯರು

ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಸಂತಾಪ ತಿಳಿಸಿದ್ದಾರೆ.;

Update: 2024-12-10 08:53 GMT
ಎಸ್​ಎಂ ಕೃಷ್ಣ ಅಂತಿಮ ದರ್ಶನ ಪಡೆದ ರಮ್ಯಾ, ಶಿವರಾಜ್‌ಕುಮಾರ್‌
Click the Play button to listen to article

ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ  ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಅನೇಕ ರಾಜಕೀಯ, ನಾಗರಿಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ ತಾರೆಯರು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸುತ್ತಿದ್ದಾರೆ. 

ಶಿಸ್ತು ಎಸ್.ಎಂ.ಕೃಷ್ಣ ಅವರ ಕೆಲಸದಲ್ಲಿತ್ತು

ಸ್ಯಾಂಡವುಡ್‌ ನಟ ಶಿವರಾಜ್‌ಕುಮಾರ್‌ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿ, ಅವರ ಮಾಡುವ ಕೆಲಸದಲ್ಲಿ ಶಿಸ್ತು ಇರುತ್ತಿತ್ತು. ಮುಖ್ಯವಾಗಿ ನಮ್ಮ ಕುಟುಂಬಕ್ಕೂ ಅವರಿಗೂ ತುಂಬಾ ಆತ್ಮೀಯತೆ ಇತ್ತು. ವೀರಪ್ಪನ್ ನಮ್ಮ ಅಪ್ಪಾಜಿಯನ್ನು ಅಪಹರಣ ಮಾಡಿದಾಗ ನಿರಂತರವಾಗಿ ನಮ್ಮ ಜತೆ ನಿಂತಿದ್ದರು. ಈಗ ತುಂಬಾ ದುಃಖ ಆಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳಿದ್ದಾರೆ. 

ಭಾವುಕರಾದ ನಟಿ ರಮ್ಯಾ

ಎಸ್‌.ಎಂ ಕೃಷ್ಣ ಅವರ ಅಂತಿಮ ದರ್ಶನ ಪಡದ ಸ್ಯಾಂಡಲ್‌ವುಡ್‌‌ ನಟಿ ರಮ್ಯಾ ಅವರು ಭಾವುಕರಾಗಿದ್ದಾರೆ. ನಟಿ ರಮ್ಯಾ ಅವರು ಸದಾಶಿವನಗರ ಆಗಮಿಸಿ ಎಸ್‌ಎಂ ಕೃಷ್ಣ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅವರ ಅಗಲಿಕೆ ನನಗೆ ಮಾನಸಿಕವಾಗಿ ನೋವು ತಂದಿದೆ. ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು  ಹೇಳಿ ಮಾಧ್ಯಮದವರೊಡೆನೆ ಹೆಚ್ಚು ಮಾತನಾಡದೆ ಅಲ್ಲಿಂದ ತೆರಳಿದ್ದಾರೆ. 

ನಗುಮುಖದ ಸಿಂಗಾರದ ಮನುಷ್ಯ

ನಿರ್ಮಾಪಕ ಚಿನ್ನೆಗೌಡ್ರು ಕೂಡ ಮಾಧ್ಯಮದ ಜತೆ ಮಾತನಾಡಿ, ಎಸ್​ ಎಂ ಕೃಷ್ಣ ರಾಜಕೀಯ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿದವರು. ಅವರು  ನಗುಮುಖದ ಸಿಂಗಾರದ ಮನುಷ್ಯ. ಎಲ್ಲದನ್ನೂ ನಗು ಮೊಗದಿಂದಲೇ ನಿಭಾಯಿಸುತ್ತಿದ್ದರು. ರಾಜ್ ಕುಮಾರ್ ಅವರನ್ನು ನರಹಂತಕ‌ ವೀರಪ್ಪ ಕಿಡ್ನಾಪ್ ಮಾಡಿದಾಗ ನಮ್ಮ ಅಕ್ಕನ ಮೇಲೆ ಅವರು ತೋರಿದ ಪ್ರೀತಿ ಮತ್ತು ಇತರ ನಿರ್ಧಾರಗಳೆಲ್ಲವೂ ಗಮನ ಸೆಳೆದಿತ್ತು. ಅವರು ತೋರಿದ ಸಹಾನುಭೂತಿ ನಿಜಕ್ಕೂ ಅಪಾರ.  ರಾಜ್ ಕುಮಾರ್ ಕುಟುಂಬ ಕೃಷ್ಣ ಅವರನ್ನು ನೆನಪು ಮಾಡಿಕೊಳ್ಳುತ್ತದೆ.  ಎಂದು ಅವರು ತಿಳಿಸಿದ್ದಾರೆ.  

Tags:    

Similar News