Govt. Employees | ಸಂಬಳ ಪ್ಯಾಕೇಜ್ ಖಾತೆ ಕಡ್ಡಾಯ: ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆ ಸೂಚನೆ
ಈ ಪ್ಯಾಕೇಜ್ ಖಾತೆದಾರರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಕಡಿಮೆ ಮೊತ್ತಕ್ಕೆ ಟರ್ಮ್ ಇನ್ಸುರೆನ್ಸ್ ಲಭ್ಯವಿರುತ್ತದೆ. ₹456ಕ್ಕೆ ₹2 ಲಕ್ಷ ಮೊತ್ತದ ಅಪಘಾತ ವಿಮೆ ದೊರೆಯುತ್ತದೆ.;
ರ್ಕಾರಿ ನೌಕರರಿಗೆ ಪ್ಯಾಕೇಜ್ ಖಾತೆ ಕಡ್ಡಾಯ:
ರಾಜ್ಯ ಸರ್ಕಾರದ ಎಲ್ಲ ನೌಕರರು ಮತ್ತು ಅಧಿಕಾರಿಗಳು ತಮ್ಮ ವೇತನಕ್ಕಾಗಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ 'ಸಂಬಳ ಪ್ಯಾಕೇಜ್' ಖಾತೆ ತೆರೆಯುವುದು ಕಡ್ಡಾಯವಾಗಿರುತ್ತದೆ ಎಂದು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರ ಈ ಹಿಂದೆಯೇ ಸಂಬಳ ಪ್ಯಾಕೇಜ್ ಖಾತೆ ತೆರೆಯುವಂತೆ ಸಿಬ್ಬಂದಿ ವರ್ಗಕ್ಕೆ ತಿಳಿವಳಿಕೆ ನೀಡಿದ್ದರೂ ಇದುವರೆಗೆ ಹಲವರು ಖಾತೆ ತೆರೆಯದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅದೇ ರೀತಿ, ಈ ಪ್ಯಾಕೇಜ್ ಖಾತೆದಾರರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಕಡಿಮೆ ಮೊತ್ತಕ್ಕೆ ಟರ್ಮ್ ಇನ್ಸುರೆನ್ಸ್ ಲಭ್ಯವಿರುತ್ತದೆ. ₹456ಕ್ಕೆ ₹2 ಲಕ್ಷ ಮೊತ್ತದ ಅಪಘಾತ ವಿಮೆ ಒದಗಿಸುತ್ತಿದೆ. ಇನ್ನಷ್ಟು ಅನುಕೂಲಗಳು ಈ ಖಾತೆಗಳಿಗೆ ಲಭ್ಯವಿದೆ. ಹೀಗಾಗಿ ಎಲ್ಲ ನೌಕರರು ಮೂರು ತಿಂಗಳ ಒಳಗೆ ಸಂಬಳ ಪ್ಯಾಕೇಜ್ ಖಾತೆ ತೆರೆಯಬೇಕು ಎಂದು ಸೂಚಿಸಿದೆ. ಇನ್ನೂ ಅನೇಕ ಆರ್ಥಿಕ ಸೌಲಭ್ಯಗಳು ಈ ಖಾತೆ ಹೊಂದಿರುವವರಿಗೆ ಲಭ್ಯವಿರುತ್ತವೆ.
ಎಲ್ಲಾ ನೌಕರರು ಮೂರು ತಿಂಗಳೊಳಗೆ 'ಸಂಬಳ ಪ್ಯಾಕೇಜ್' ಖಾತೆ ತೆರೆಯಬೇಕೆಂದು ಇಲಾಖೆಯು ಸೂಚನೆ ನೀಡಿದೆ. ನೌಕರರು ಮತ್ತು ಅಧಿಕಾರಿಗಳು ಈ ಸಂಬಳ ಪ್ಯಾಕೇಜ್ ಖಾತೆ ತೆರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂಬಂಧಿತ ಇಲಾಖೆಗಳ ಮುಖ್ಯಸ್ಥರಿಗೆ ವಹಿಸಲಾಗಿದೆ. ಹಾಗಾಗಿ ಅವರೇ ಅದಕ್ಕೆ ಹೊಣೆಯಾಗಿರುತ್ತಾರೆ. ನೌಕರರನ್ನು ಖಾತೆ ತೆರೆಯಲು ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆರ್ಥಿಕ ಇಲಾಖೆ ಆದೇಶಿಸಿದೆ.
ಈ ಪ್ಯಾಕೇಜ್ ಖಾತೆಯಲ್ಲಿದ್ದವರಿಗೆ ಬ್ಯಾಂಕ್‌ಗಳು ವಿಶೇಷ ಸೌಲಭ್ಯಗಳನ್ನು ನೀಡುತ್ತವೆ.
ವಿಶೇಷ ಪ್ಯಾಕೇಜ್‌ಗಳು
- ಕಡಿಮೆ ಬಡ್ಡಿ ದರದಲ್ಲಿ ವಸತಿ ಸಾಲ
- ಉಚಿತ ರುಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್
- ಉಚಿತ ಡಿಮ್ಯಾಂಡ್ ಡ್ರಾಫ್ಟ್
- ರಿಯಾಯತಿ ದರದಲ್ಲಿ ಲಾಕರ್ ಸೇವೆ
ಸರ್ಕಾರಿ ನೌಕರರು ಈ ಸೌಲಭ್ಯಗಳನ್ನು ಪಡೆಯಲು ಈ ಖಾತೆ ತೆರೆಯುವುದು ಅಗತ್ಯವಾಗಿದೆ.