ಶಿವಮೊಗ್ಗದಲ್ಲಿ ರೌಡಿಗಳ ಅಟ್ಟಹಾಸ; ದೇವಸ್ಥಾನದಲ್ಲಿ ಮಚ್ಚು ಪೂಜೆ, ರೌಡಿಯಿಂದ ಫೈರಿಂಗ್

ಭದ್ರಾವತಿಯ ನಗರದ ದೇವಸ್ಥಾನ ಒಂದರಲ್ಲಿ ರೌಡಿಶೀಟರ್ ವಿಶ್ವ ದೇವಸ್ಥಾನದಲ್ಲಿ ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿದ್ದ. ಈ ಮೂಲಕ ರೌಡಿ ಗಾಂಧಿ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಿದ್ದ.;

Update: 2025-05-05 05:13 GMT

ಮಚ್ಚಿಗೆ ಪೂಜೆ ಮಾಡಿಸುತ್ತಿರುವ ರೌಡಿ ವಿಶ್ವ

ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ. ದೇವಸ್ಥಾನವೊಂದರಲ್ಲಿ ಮಚ್ಚಿಗೆ ಪೂಜೆ ಮಾಡಿಸಿರುವುದಲ್ಲದೆ ಬಡಾವಣೆಯೊಂದರಲ್ಲಿ ರೌಡಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿರುವುದು ಹಾಗೂ  ಮಚ್ಚು, ಲಾಂಗ್​​ ಹಿಡಿದು ರೌಡಿಯನ್ನು ಹಾಡುಹಗಲೇ ಕೊಲೆ ಮಾಡಲು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. 

ಈ ಮೂರು ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಶಿವಮೊಗ್ಗದ ಟಿಪ್ಪು ನಗರದ ಬಡಾವಣೆಯಲ್ಲಿ ಮಹ್ಮದ್ ಇರ್ಫಾನ್​ ಎಂಬ ರೌಡಿಶೀಟರ್ ರಾತ್ರಿ ಹೊತ್ತಿಲ್ಲಿನಲ್ಲಿ ಗನ್​ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಜನರಲ್ಲಿ ಆತಂಕ ಮೂಡಿಸಿದ್ದ. ಆದರೆ ರೌಡಿಶೀಟರ್ ಕೈಗೆ ಗನ್ ಬಂದಿದ್ದು ಹೇಗೆ ಎನ್ನುವುದು ಮಾತ್ರ ನಿಗೂಢ. ಈ ಬಗ್ಗೆ ತುಂಗಾ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಫೈರಿಂಗ್​ ಆಗಿರುವುದು ಏರ್‌ ಗನ್‌​ನಿಂದ ಎಂದು ದೂರು ದಾಖಲಿಕೊಂಡು, ರೌಡಿಶೀಟರ್‌ನನ್ನ ಪೊಲೀಸರು ಬಂಧಿಸಿದ್ದಾರೆ. 

ಕೂದಳೆಲೆಯ ಅಂತರದಲ್ಲಿ ಪಾರಾದ ರೌಡಿ 

ಭದ್ರಾವತಿಯ ಮುಖ್ಯ ರಸ್ತೆಯಲ್ಲಿ ಪ್ರಮೋದ್ ಅಲಿಯಾಸ್ ಗಾಂಧಿ ರೌಡಿ ಗ್ಯಾಂಗ್, ರೌಡಿ ಶೀಟರ್ ವಿಶ್ವ ಅಲಿಯಾಸ್ ಮುದ್ದೆಯನ್ನು ಅಟ್ಟಾಡಿಸಿಕೊಂಡು ಮಚ್ಚು, ಲಾಂಗ್​​ನಿಂದ ದಾಳಿ ನಡೆಸಿತ್ತು.  ಆದರೆ ಈ ದಾಳಿಯಲ್ಲಿ ವಿಶ್ವ ಕೂದಳೆಲೆ ಅಂತರದಲ್ಲಿ ಬಚಾವಾಗಿದ್ದ.

ಪ್ರಮೋದ್ ಅಲಿಯಾಸ್ ಗಾಂಧಿ ಎನ್ನುವ ರೌಡಿಶೀಟರ್ ಮೇಲೆ ರೌಡಿ ವಿಶ್ವ, ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿದ್ದ.  ಸೇಡು ತೀರಿಸಿಕೊಳ್ಳಲು ಪ್ರಮೋದ್ ಹಾಡುಹಗಲೇ ಮಚ್ಚಿನಿಂದ ವಿಶ್ವನ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಭದ್ರಾವತಿಯ ನಗರದ ದೇವಸ್ಥಾನ ಒಂದರಲ್ಲಿ ರೌಡಿಶೀಟರ್ ವಿಶ್ವ,  ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿದ್ದ. ಈ ಮೂಲಕ ರೌಡಿ ಗಾಂಧಿ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಿದ್ದ ಎಂದು ಹೇಳಲಾಗಿದೆ. 

Tags:    

Similar News