ಮದ್ದೂರಿನಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು

ಅರುಣ್ ತನ್ನ ಸ್ವಗ್ರಾಮವಾದ ವಡ್ಡರದೊಡ್ಡಿಗೆ ಹಿಂತಿರುಗುತ್ತಿದ್ದ ವೇಳೆ, ಸೋಮನಹಳ್ಳಿ ಸಮೀಪದ ಸ್ಕಂದ ಲೇಔಟ್ ಬಳಿ ಕಾದು ಕುಳಿತಿದ್ದ ಎಂಟರಿಂದ ಹತ್ತು ಜನರಿದ್ದ ದುಷ್ಕರ್ಮಿಗಳ ತಂಡ, ಏಕಾಏಕಿ ಮಾರಕಾಸ್ತ್ರಗಳಿಂದ ಆತನ ಮೇಲೆ ದಾಳಿ ನಡೆಸಿದೆ.;

Update: 2025-08-09 06:13 GMT

 ವಡ್ಡರದೊಡ್ಡಿ ಗ್ರಾಮದ ನಿವಾಸಿ ಅರುಣ್ 

ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಬಳಿ ಶುಕ್ರವಾರ ತಡರಾತ್ರಿ ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ವಡ್ಡರದೊಡ್ಡಿ ಗ್ರಾಮದ ನಿವಾಸಿ ಅರುಣ್ ಹತ್ಯೆಗೀಡಾದ ವ್ಯಕ್ತಿ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ಶುಕ್ರವಾರ ರಾತ್ರಿ ಸುಮಾರು 9. 30ರ ಸಮಯದಲ್ಲಿ ಅರುಣ್ ಮತ್ತು ಆತನ ಸ್ನೇಹಿತರು ಸ್ಥಳೀಯ ಬಾರ್ ಒಂದರಲ್ಲಿ ಮದ್ಯ ಸೇವಿಸುತ್ತಿದ್ದಾಗ, ಹಳೆಯ ವಿಚಾರವೊಂದಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಾರ್ ಸಿಬ್ಬಂದಿ ಮಧ್ಯಪ್ರವೇಶಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ. ನಂತರ, ಅರುಣ್ ತನ್ನ ಸ್ವಗ್ರಾಮವಾದ ವಡ್ಡರದೊಡ್ಡಿಗೆ ಹಿಂತಿರುಗುತ್ತಿದ್ದ ವೇಳೆ, ಸೋಮನಹಳ್ಳಿ ಸಮೀಪದ ಸ್ಕಂದ ಲೇಔಟ್ ಬಳಿ ಕಾದು ಕುಳಿತಿದ್ದ ಎಂಟರಿಂದ ಹತ್ತು ಜನರಿದ್ದ ದುಷ್ಕರ್ಮಿಗಳ ತಂಡ, ಏಕಾಏಕಿ ಮಾರಕಾಸ್ತ್ರಗಳಿಂದ ಆತನ ಮೇಲೆ ದಾಳಿ ನಡೆಸಿದೆ.

ತೀವ್ರವಾಗಿ ಗಾಯಗೊಂಡ ಅರುಣ್, ವಿಪರೀತ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಸ್ತೂರು ಠಾಣೆಯ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Tags:    

Similar News