ದೇವಸ್ಥಾನದಲ್ಲಿ ಜಾರಿ ಬಿದ್ದ ರೇವಣ್ಣ : ಆಸ್ಪತ್ರೆ ಗೆ ದಾಖಲು

ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ದೇವಸ್ಥಾನದಲ್ಲಿ ಕಾಲು ಜಾರಿಬಿದ್ದಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.;

Update: 2024-07-17 13:38 GMT
ಮಾಜಿ ಸಚಿವ ಎಚ್‌ಡಿ ರೇವಣ್ಣ

ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ದೇವಸ್ಥಾನದಲ್ಲಿ ಕಾಲು ಜಾರಿಬಿದ್ದಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಇಂದು ಆಷಾಢಮಾಸ ಪೂಜೆಗೆಂದು ಹೊಳೆನರಸೀಪುರ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಮನೆ ದೇವರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ತೆರಳಿದ್ದಾಗ ಅಲ್ಲಿ ಜಾರಿ ಬಿದ್ದ ಪರಿಣಾಮ ಪಕ್ಕೆಲುಬು ಮುರಿದಿದೆ.

ರೇವಣ್ಣ ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣಿ ಹಾಕುತ್ತಿದ್ದರು. ಈ ವೇಳೆ ಮಳೆ ನೀರಿನಿಂದ ಮೆಟ್ಟಿಲು ಮತ್ತು ಹಜಾರ ತೊಯ್ದಿದ್ದರ ಪರಿಣಾಮ ಜಾರಿ ಬಿದ್ದಿದ್ದಾರೆ. ಬಳಿಕ ಸಹಾಯಕರ ನೆರವಿನೊಂದಿಗೆ ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ನಿಗಾ ಘಟಕದಲ್ಲಿ ವೈದ್ಯರುಗಳು ಸ್ಕ್ಯಾನಿಂಗ್ ಮಾಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರಿನಲ್ಲಿಯೇ ಬೆಂಗಳೂರಿಗೆ ತೆರಳಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ಬೆಲ್ಟ್ ಹಾಕಿ ದರು. ನಂತರ ಶಾಸಕರು ಕಾರಿನಲ್ಲಿಯೇ ಬೆಂಗಳೂರಿಗೆ ಕಳುಹಿಸಿದರು.

ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೇವಣ್ಣ ತಮ್ಮ ಪರಿಸ್ಥಿತಿ ನೆನೆದು ಕಾರಿನಲ್ಲಿ ಕೂತು ಕಣ್ಣೀರು ಹಾಕಿದರು. ರೇವಣ್ಣರನ್ನ ಕಾರು ಹತ್ತಿಸಿ ಅಭಿಮಾನಿಗಳು ಧೈರ್ಯ ತುಂಬಿ ರೇವಣ್ಣ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.

Tags:    

Similar News