ಭಾರತಕ್ಕೆ 31 ಕೆಜಿಗೂ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡಿದ ರನ್ಯಾ ರಾವ್, ತರುಣ್ ರಾಜು; ಡಿಆರ್‌ಐ

31 ಕೆಜಿಗಿಂತ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡಿದ ಇಬ್ಬರೂ ʻಜಾಮೀನು ರಹಿತ ಅಪರಾಧ' ಎಂದು ಡಿಆರ್‌ಐ ನ್ಯಾಯಾಲಯಕ್ಕೆ ತಿಳಿಸಿದೆ.;

Update: 2025-04-10 06:04 GMT

ರನ್ಯಾ ರಾವ್‌ ಚಿನ್ನಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರನ್ಯಾ ಹಾಗೂ ತರುಣ್ ಕೊಂಡೂರು ರಾಜು  ಭಾರತಕ್ಕೆ 31 ಕೆ.ಜಿಗೂ ಹೆಚ್ಚು ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನ್ಯಾಯಾಲಯಕ್ಕೆ ತಿಳಿಸಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ಎರಡನೇ ಆರೋಪಿ ರಾಜು (36) ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆಯನ್ನು ಏಪ್ರಿಲ್ 7 ರಂದು ಸಿಸಿಎಚ್ -64 ಎಲ್‌ಎಕ್ಸ್‌ಐಐ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲದಲ್ಲಿ ನಡೆಯಿತು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶ ಐಪಿ ನಾಯಕ್ ಜಾಮೀನು ಅರ್ಜಿ ತಿರಸ್ಕರಿಸಿತು. 

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆ.ಜಿ ತೂಕದ ಮತ್ತು 12.56 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ನಟಿ ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಆರು ದಿನಗಳ ನಂತರ ಮಾರ್ಚ್ 9 ರಂದು ಡಿಆರ್‌ಐ ರಾಜು ಅವರನ್ನು ಬಂಧಿಸಿತ್ತು. 

ಡಿಆರ್‌ಐ ವಾದವೇನು? 

ʻʻರಾಜುಗೆ ಜಾಮೀನು ನೀಡುವುದನ್ನು ಆಕ್ಷೇಪಿಸಿದ್ದ ಡಿಆರ್‌ಐ ಪರೆ ವಕೀಲರು, ರನ್ಯಾ ಮತ್ತು ರಾಜು ಇಬ್ಬರೂ ಚಿನ್ನ ಕಳ್ಳಸಾಗಣೆಯಲ್ಲಿ ಮತ್ತು ಖರೀದಿಗೆ ಅಗತ್ಯ ಹಣ ಕಳುಹಿಸುವ ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿದ್ದಾರೆ. 31 ಕೆ.ಜಿಗಿಂತ ಹೆಚ್ಚು ಚಿನ್ನ ಕಳ್ಳಸಾಗಣೆ ಮಾಡಿದ ಇಬ್ಬರೂ ʻಜಾಮೀನು ರಹಿತ ಅಪರಾಧʼʼ  ಮಾಡಿದ್ದಾತೆ ಎಂದು  ವಾದಿಸಿದರು. 

ʻʻರಾಜು, ಅಮೆರಿಕ ಸಂಯುಕ್ತ ಸಂಸ್ಥಾನದ (ಯುಎಸ್ಎ) ಪ್ರಜೆಯಾಗಿದ್ದು, ಅವರು ಅದನ್ನು  ದುರುಪಯೋಗಪಡಿಸಿಕೊಂಡು ಪರಾರಿಯಾಗುವ ಸಾಧ್ಯತೆ ಹೆಚ್ಚಿಸಿದೆ. ಈ ಮೊದಲು ಕೂಡ ದೇಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದರುʼʼ ಎಂದು ಡಿಆರ್‌ಐ ನ್ಯಾಯಾಲದ ಗಮನಕ್ಕೆ ತಂದಿತು. 

"ಅರ್ಜಿದಾರರು (ರಾಜು) ಮತ್ತು ಆರೋಪಿ 1 (ರನ್ಯಾ) ಇಬ್ಬರೂ ಸ್ವಯಂಪ್ರೇರಿತ ಹೇಳಿಕೆಗಳನ್ನು ನೀಡಿ, ಮೂರನೇ ಆರೋಪಿ ಸಾಹಿಲ್ ಸಕಾರಿಯಾ ಜೈನ್‌ ಸಹಾಯದಿಂದ ಚಿನ್ನ ಕಳ್ಳಸಾಗಣೆ ಮತ್ತು ಅದನ್ನು ಭಾರತದಲ್ಲಿ ಆಭರಣ ರೂಪದಲ್ಲಿ ಮಾರಾಟ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಅವರು ಹವಾಲಾ ವ್ಯವಹಾರದಲ್ಲಿಯೂ ಭಾಗಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆʼʼ ಎಂದು ಡಿಆರ್‌ಐ ವಾದಿಸಿತು.

ರಾಜು ವಕೀಲರ ವಾದವೇನು? 

ರಾಜು ಪರ ವಾದ ಮಂಡಿಸಿದ ವಕೀಲರು, ʻʻಅವರು ಅಮೆರಿಕ ಪ್ರಜೆ ಮತ್ತು ಅವರ ವಿಧವೆ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಾಜು ತಾಯಿ ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ ಹಾಗಾಗಿ ಅವರು ದೇಶ ಬಿಟ್ಟು ಪರಾರಿಯಾಗುವುದಿಲ್ಲ. ಅವರಿಂದ  ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಹಾಗೂ ಅವರ ವಿರುದ್ಧ ಯಾವುದೇ ಅಕ್ರಮ ವಸ್ತುಗಳು ಇದ್ದ ಆರೋಪಗಳು ಇಲ್ಲ. ರಾಜು, ದುಬೈ ಮತ್ತು ಇತರ ದೇಶಗಳಲ್ಲಿ ಚಿನ್ನದ ವ್ಯವಹಾರ ಹೊಂದಿದ್ದರಿಂದ 1962 ರ ಕಸ್ಟಮ್ಸ್ ಕಾಯ್ದೆ ಅವರಿಗೆ ಅನ್ವಯಿಸುವುದಿಲ್ಲ. ಅರ್ಜಿದಾರರು (ರಾಜು) ದುಬೈನಲ್ಲಿರುವ ಆರೋಪಿ ರನ್ಯಾಗೆ  ಚಿನ್ನವನ್ನು ಮಾರಾಟ ಮಾಡಿದ್ದಾರೆ. ಆಕೆ ಅದನ್ನು ಭಾರತಕ್ಕೆ  ಕಳ್ಳಸಾಗಣೆ ಮಾಡಿದ್ದಾಳೆ ಎಂದು ಆವರಿಗೆ ತಿಳಿದಿರಲಿಲ್ಲʼʼ ಎಂದು ಅವರು ವಾದಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು  ʻʻಅರ್ಜಿದಾರರು (ರಾಜು) ಮತ್ತು ಆರೋಪಿ 1 (ರನ್ಯಾ) ಇಬ್ಬರೂ ಸ್ವಯಂಪ್ರೇರಿತ ಹೇಳಿಕೆಯ ಪ್ರಕಾರ, ಅವರು 20-25 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಮತ್ತು ಅದೇ ದಿನ ಭಾರತಕ್ಕೆ ಮರಳಿದ್ದಾರೆ. ಇದು ಅವರ ಕಾರ್ಯವೈಖರಿ ಬಹಿರಂಗಪಡಿಸಿದೆ. ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ತಪ್ಪಿಸಿಕೊಳ್ಳುವ ಅಪಾಯವಿದೆ ಮತ್ತು ಅದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸುವ ಮೂಲಕ, ಅರ್ಜಿದಾರು ಜಾಮೀನು ಪಡೆಯಲು  ಅರ್ಹರಲ್ಲ ಎಂದು ನಾನು ಅಭಿಪ್ರಾಯಪಡುತ್ತೇನೆ" ಎಂದು  ಅಭಿಪ್ರಾಯಪಟ್ಟು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Tags:    

Similar News