Rameshwaram cafe blast | ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಉಗ್ರರಿಗೆ ಐಸಿಸ್​ ನಂಟು

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಬೈಕ್​ಗಳ ಸ್ಪೋಟ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೃತ್ಯದ ಹಿಂದೆ ಈತನ ಕೈವಾಡವಿದೆ ಎಂದು ಎನ್‌ಐ ಎ ಸಲ್ಲಿಸಿರುವ ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿದೆ.;

Update: 2024-11-10 11:36 GMT
ರಾಮೇಶ್ವರ ಕೆಫೆ
Click the Play button to listen to article

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯದ ಹಿಂದೆ ಆರು ಉಗ್ರರ ಕೈವಾಡವಿದ್ದು, ಅವರು ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕದಲ್ಲಿ ಇದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಆರು ಜನರಿಗೂ ಐಸಿಸ್‌ ಸಂಘಟನೆ ಒಂದೊಂದು ಟಾಸ್ಕ್​ ನೀಡಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಕೂಡ ನ್ಯಾಯಾಲಯಕ್ಕೆ ಎನ್‌ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ ಬಹಿರಂಗಪಡಿಸಿದೆ. 

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮತೀನ್ ತಾಹ ಮೂಲತಃ ಶಿವಮೊಗ್ಗದವನಾಗಿದ್ದು, ಐಸಿಸ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. 2020ರಿಂದಲೂ ಐಸಿಸ್ ಜೊತೆ ಸಂಪರ್ಕದಲ್ಲಿದ್ದ ಆತ, ಸದ್ಯ ಎಲ್ಲ ಉಸ್ತುವಾರಿ ಜೊತೆಗೆ ಹಣಕಾಸು ವರ್ಗಾವಣೆ ಕೆಲಸ ಕೂಡ ನಿರ್ವಹಣೆ ಮಾಡುತ್ತಿದ್ದ. ಅಬ್ದುಲ್ ಮತೀನ್ ತಾಹ ಟೆಕ್ನಿಕಲ್ ಆಗಿ ಪರಿಣಿತನಿದ್ದ ಕಾರಣಕ್ಕೆ ಈತನಿಗೆ ಐಸಿಸ್ ಉಸ್ತುವಾರಿ ವಹಿಸಿತ್ತು. ರಾಮೇಶ್ವರಂ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಶಿವಮೊಗ್ಗ ಸರಣಿ ಬೈಕ್​ಗಳಿಗೆ ಬೆಂಕಿ ಹಚ್ಚಿದ ಹಿಂದಿನ ಕೈ ಇವನೇ ಎಂದು ತಿಳಿದುಬಂದಿರುವುದಾಗಿ ಹೇಳಲಾಗಿದೆ.

ಉಗ್ರ ಮಾಜ್ ಮುನೀರ್ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹ ಮೂಲಕ ಅಲ್ ಹಿಂದ್ ಟ್ರಸ್ಟ್​​ಗೆ 2018ರಲ್ಲಿ ಸೇರ್ಪಡೆಯಾಗಿದ್ದ. ಅಲ್‌ ಹಿಂದ್ ಟ್ರಸ್ಟ್ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಫ್ಲಾನ್ ಮಾಡುತ್ತಿದ್ದ. 2018ರಲ್ಲೇ ಅಲ್ ಹಿಂದ್ ಟ್ರಸ್ಟ್ ಮೇಲೆ ಕೇಸ್ ದಾಖಲಾಗಿತ್ತು. ಈತನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಸರಣಿ ಬೈಕ್​ಗಳಿಗೆ ಬೆಂಕಿ ಕೃತ್ಯದಲ್ಲಿ ಭಾಗಿಯಾಗಿದ್ದನು.

ಮುಜಾಮಿಲ್ ಶರೀಫ್ ಕೂಡ ಅಬ್ದುಲ್ ಮತೀನ್ ತಾಹ ಮೂಲಕವಾಗಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಐಸಿಸ್ ಈತನಿಗೂ ಭಯೋತ್ಪಾದಕ ಕೃತ್ಯದ ಟಾಸ್ಕ್ ನೀಡಿತ್ತು. ಮೆಜೆಸ್ಟಿಕ್ ಹಾಗೂ ಯಶವಂತಪುರದಲ್ಲಿ ಬಸ್​ ಸ್ಫೋಟಗೊಳಿಸುವಂತೆ ಟಾಸ್ಕ್ ನೀಡಲಾಗಿತ್ತು. ಆದರೆ, ಅದು ಫೇಲ್ ಆಗಿದ್ದು ಕೊನೆಗೆ ಶಾಂತಿನಗರದ ಟೈರ್ ಅಂಗಡಿಗೆ ಬೆಂಕಿ ಇಟ್ಟಿದ್ದರು. ಮೊಹಮದ್ ಶಾರೀಕ್​ ಕೂಡ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಬೈಕ್​ಗಳ ಸ್ಪೋಟ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೃತ್ಯದ ಹಿಂದೆ ಈತನ ಕೈವಾಡವಿದೆ ಎಂದು ಚಾರ್ಜಶೀಟ್​ನಲ್ಲಿ ಉಲ್ಲೇಖವಾಗಿದೆ.

ಮುಸಾವೀರ್ ಹುಸೇನ್ ಶಾಜೀಬ್ ಕೂಡ ಐಸಿಸ್ ಜೊತೆ ನಂಟು ಹೊಂದಿದ್ದನು. ಮುಸಾವೀರ್ ಹುಸೇನ್ ಶಾಜೀಬ್ ಶಾರಿಕ್ ಜೊತೆಗೂಡಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಮಂಗಳೂರು ಕುಕ್ಕರ್ ಬ್ಲಾಸ್ಟ್, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದನು. ಹಾಗೇ ಬಿಜೆಪಿ ಕಚೇರಿ ಬಳಿ ಬಾಂಬ್ ಇಟ್ಟಿದ್ದನು. ಆದರೆ, ಫೇಲ್ ಆಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿದುಬಂದಿದೆ. 

ಅರಾಫತ್ ಅಲಿ ಮೇಲಿನ ಐದೂ ಜನರಿಗೆ ಹಣಕಾಸು ಸಹಾಯ ಮಾಡುತ್ತಿದ್ದ. ತಾಹ ಹೇಳಿದಂತೆ ಹಣ ಸಹಾಯ ಮಾಡುವುದು ಈತನ ಕೆಲಸವಾಗಿತ್ತು. ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಟಾಸ್ಕ್ ಮುಗಿದ ಮೇಲೆ ಅದನ್ನು ವಿಡಿಯೋ ರೆಕಾರ್ಡ್​ ಮಾಡಿ ಅಂತ ಐಸಿಸ್​ ಸೂಚನೆ ನೀಡಿತ್ತು. ಅದರಂತೆ  ಉಗ್ರರೆಲ್ಲರು ವೀಡಿಯೋ ಮಾಡಿರುವ ಸಾಧ್ಯತೆಯೂ ಇದೆ. ಈ ಎಲ್ಲ ಅಂಶಗಳನ್ನು ಎನ್​ಐಎ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

Tags:    

Similar News