ಶಿಮ್ಲಾದಲ್ಲಿ ಬೀದಿ ನಾಯಿಗಳ ನಿಗಾಕ್ಕೆ ರೇಡಿಯೋ ಕಾಲರ್‌ ಅಳವಡಿಕೆ

ಅರಣ್ಯ ಪ್ರದೇಶದಲ್ಲಿನ ಆನೆಗಳು ಹಾಗೂ ಹುಲಿಗಳ ಚಲನವಲನದ ಮೇಲೆ ನಿಗಾಕ್ಕೆ ರೇಡಿಯೋ ಕಾಲ‌ರ್ ಅಳವಡಿಸುವ ರೀತಿಯಲ್ಲಿಯೇ ಶಿಮ್ಲಾದಲ್ಲಿ ಬೀದಿ ನಾಯಿಗಳಿಗೆ ಕ್ಯುಆ‌ರ್ ಕೋಡ್ ಇರುವ ರೇಡಿಯೋ ಕಾಲರ್ ಅಳವಡಿಕೆಗೆ ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.;

Update: 2025-08-19 06:03 GMT
ಸಾಂದರ್ಭಿಕ ಚಿತ್ರ

ದೇಶದಾದ್ಯಂತ ಬೀದಿನಾಯಿಗಳ ಹಾವಳಿ ಕುರಿತು ತೀವ್ರ ಚರ್ಚೆಯಾಗುತ್ತಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಹಿಮಾಚಲ ಪ್ರದೇಶ ಸರ್ಕಾರ ಮಹತ್ತರ ಕ್ರಮ ಕೈಗೊಂಡಿದ್ದು, ನಾಯಿಗಳಿಗೆ ರೇಡಿಯೋ ಕಾಲರ್‌ ಅಳವಡಿಸಲು ಮುಂದಾಗಿದೆ.

ಅರಣ್ಯ ಪ್ರದೇಶದಲ್ಲಿನ ಆನೆಗಳು ಹಾಗೂ ಹುಲಿಗಳ ಚಲನವಲನದ ಮೇಲೆ ನಿಗಾಕ್ಕೆ ರೇಡಿಯೋ ಕಾಲ‌ರ್ ಅಳವಡಿಸುವ ರೀತಿಯಲ್ಲಿಯೇ ಶಿಮ್ಲಾದಲ್ಲಿ ಬೀದಿ ನಾಯಿಗಳಿಗೆ ಕ್ಯುಆ‌ರ್ ಕೋಡ್ ಹೊಂದಿರುವ ರೇಡಿಯೋ ಕಾಲರ್ ಅಳವಡಿಕೆಗೆ ನಿರ್ಧರಿಸಿದೆ. ಇದರಿಂದ ಬೀದಿನಾಯಿಗಳ ಮೇಲೆ ನಿಗಾ ಇಡಬಹುದಾಗಿದೆ.

ಸಾರ್ವಜನಿಕರು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಾಯಿಗಳ ಕುರಿತ ಮಾಹಿತಿ ಅರಿತುಕೊಳ್ಳಬಹುದು ಎಂದು ತಿಳಿಸಿದೆ.

ದೆಹಲಿಯಲ್ಲಿನ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳಿಗೆ ಆಶ್ರಯತಾಣ ಒದಗಿಸಬೇಕೆಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

ರಾಜ್ಯದಲ್ಲೂ ತಪ್ಪದ ಬೀದಿ ನಾಯಿಗಳ ಹಾವಳಿ

ಜುಲೈನಲ್ಲಿ ಬೆಂಗಳೂರಿನ ಕೊಡಿಗೆಹಳ್ಳಿಯ ಬಳಿ ಬೀದಿನಾಯಿಗಳ ದಾಳಿಯಿಂದ ವೃದ್ದ ಮೃತಪಟ್ಟಿದ್ದರು. ಮತ್ತೊಂದು ಪ್ರಕರಣದಲ್ಲಿ ಬೀದಿ ನಾಯಿಗಳ ದಾಳಿಗೆ ಶಾಲಾ ವಿದ್ಯಾರ್ಥಿನಿಯರು ಗಾಯಗೊಂಡಿದ್ದರು.

ಆ.16 ರಂದು ಕೊಪ್ಪಳದ ಕುಕನೂರಿನಲ್ಲಿ ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಪೈಕಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.


Tags:    

Similar News