ಮೆಟ್ರೋ ಟಿಕೆಟ್ ದರ ಹೆಚ್ಚಳ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

ಮೆಟ್ರೋ ಆಡಳಿತ ಮಂಡಳಿಗೆ ದರ ಏರಿಕೆ ಅಧಿಕಾರವಿದೆ. ತಜ್ಞರು ಕೈಗೊಳ್ಳುವ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಾಧ್ಯವಿಲ್ಲ. ದರ ನಿಗದಿ ಸಮಿತಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.;

Update: 2025-04-02 07:08 GMT

ನಮ್ಮ ಮೆಟ್ರೋ 

ನಮ್ಮ ಮೆಟ್ರೋ  ಟಿಕೆಟ್​ ದರ  ಏರಿಕೆ ಪ್ರಶ್ನಿಸಿ ಸನತ್ ಕುಮಾರ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

“ಮೆಟ್ರೋ ಆಡಳಿತ ಮಂಡಳಿಗೆ ದರ ಏರಿಕೆ ಅಧಿಕಾರವಿದೆ. ತಜ್ಞರು ಕೈಗೊಳ್ಳುವ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಾಧ್ಯವಿಲ್ಲ. ದರ ನಿಗದಿ ಸಮಿತಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ. ಅಂಜಾರಿಯಾ, ನ್ಯಾ. ಕೆ.ವಿ.ಅರವಿಂದ್​​ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ʻʻಪ್ರಯಾಣ ದರ ನಿಗದಿಯು ಒಂದು ತಜ್ಞರ ಪ್ರಕ್ರಿಯೆಯಾಗಿದ್ದು, ಇದರಲ್ಲಿ ತಾಂತ್ರಿಕ ಮತ್ತು ಆರ್ಥಿಕ ಪರಿಗಣನೆಗಳನ್ನು ಅನ್ವಯಿಸಲಾಗುತ್ತದೆ. ದರ ನಿಗದಿ ಸಮಿತಿಯು ಪರಿಗಣಿಸುವ ಅಂಶಗಳನ್ನು ಪರಿಶೀಲಿಸುವುದು ನ್ಯಾಯಾಲಯದ ಕೆಲಸವಲ್ಲ. ಶಾಸನಬದ್ಧ ಉಲ್ಲಂಘನೆಯನ್ನು ಸೂಚಿಸದ ಹೊರತು ನ್ಯಾಯಾಲಯವು ಅಂತಹ ನಿರ್ಧಾರಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಲು ಯಾವುದೇ ಪ್ರಕರಣವನ್ನು ರಚಿಸಲಾಗುವುದಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತದೆʼʼ ಎಂದು ನ್ಯಾಯಪೀಠ ಹೇಳಿದೆ. 

ನಮ್ಮ ಮೆಟ್ರೋ ಫೆ.9ರಂದು ದರ ಏರಿಕೆ  ಮಾಡಿತ್ತು. ಒಂದೇ ಸಮನೆ ಕೆಲವೆಡೆ ಶೇ.100ರಷ್ಟು ಏರಿಕೆ ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಫೆಬ್ರವರಿ 10 ರಂದು ಸೋಮವಾರ ಹಿಂದಿನ ವಾರಕ್ಕೆ ಹೋಲಿಸಿದರೆ 8.29 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಸಂಖ್ಯೆಯಲ್ಲಿ 4ರಷ್ಟು ಕುಸಿತ ಕಂಡುಬಂದಿತ್ತು. 

Tags:    

Similar News