ಕೃತಕ ಬುದ್ದಿಮತ್ತೆ; ಎಐಎಂ 2025 ರ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆಗೆ 9ನೇ ಸ್ಥಾನ

ಎಐಎಂ (AIM) 2025 ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅವರು 9ನೇ ಸ್ಥಾನ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿಜ್ಞಾನಿಗಳು, ಸಂಶೋಧಕರು, ನವೋದ್ಯಮ ಸಂಸ್ಥಾಪಕರು ಮತ್ತು ನೀತಿ ನಿರೂಪಕರು ಸೇರಿದಂತೆ ಹಲವು ಪ್ರಭಾವಶಾಲಿ ವ್ಯಕ್ತಿಗಳು ಸೇರಿದ್ದಾರೆ.;

Update: 2025-08-12 13:14 GMT

ಪ್ರಿಯಾಂಕ್‌ ಖರ್ಗೆ

ಭಾರತದಲ್ಲಿ ಕೃತಕ ಬುದ್ಧಿಮತ್ತೆಯ (AI) ಭವಿಷ್ಯ ರೂಪಿಸುವ ದೇಶದ 100 ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು 9ನೇ ಸ್ಥಾನ ಪಡೆದಿದ್ದಾರೆ.   

ಅಟಲ್ ಇನ್ನೋವೇಶನ್ ಮಿಷನ್ (AIM) -2025 ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿಜ್ಞಾನಿಗಳು, ಸಂಶೋಧಕರು, ನವೋದ್ಯಮ ಸಂಸ್ಥಾಪಕರು ಮತ್ತು ನೀತಿ ನಿರೂಪಕರು ಸೇರಿದಂತೆ ಹಲವು ಪ್ರಭಾವಶಾಲಿ ವ್ಯಕ್ತಿಗಳಿದ್ದು, ಪ್ರಿಯಾಂಕ್‌ ಖರ್ಗೆ ಕೂಡ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕೃತಕ ಬುದ್ದಿಮತ್ತೆ ಕುರಿತಾದ ಕಾಳಜಿ, ಪ್ರಗತಿಯೇ ಈ ಸಾಧನೆ ಕಾರಣ ಎಂದು ಬಣ್ಣಿಸಲಾಗಿದೆ.    

ಸಚಿವ ಪ್ರಿಯಾಂಕ್ ಖರ್ಗೆ ನಾಯಕತ್ವದಲ್ಲಿ ಕರ್ನಾಟಕವು AI ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ದೇಶದ ಪ್ರಮುಖ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಎಐ ತಂತ್ರಜ್ಞಾನವನ್ನು ಕೇವಲ ಆರ್ಥಿಕ ಅಭಿವೃದ್ಧಿಗೆ ಮಾತ್ರವಲ್ಲದೆ, ಆಡಳಿತ, ಸಾರ್ವಜನಿಕ ಕಲ್ಯಾಣ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಬಳಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ. ಜೊತೆಗೆ, ರಾಜ್ಯದಲ್ಲಿ ತಂತ್ರಜ್ಞಾನದ ಬೆಳವಣಿಗೆಯನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ, ಇತರ ನಗರಗಳಿಗೂ ವಿಸ್ತರಿಸಲು ʻಬೆಂಗಳೂರು ಮೀರಿʼ ಎಂಬ ಮಹತ್ವದ ಯೋಜನೆ ಪ್ರಾರಂಭಿಸಿದ್ದಾರೆ. ಈ ಪ್ರಯೋಗವು ರಾಜ್ಯದಾದ್ಯಂತ ತಂತ್ರಜ್ಞಾನ ಅವಕಾಶಗಳು ಮತ್ತು ಪ್ರತಿಭೆಗಳನ್ನು ಬೆಳೆಸುವುದರ ಜೊತೆಗೆ ಸಮಗ್ರ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ಪ್ರಿಯಾಂಕ್‌ ಖರ್ಗೆ ಮಾರ್ಗದರ್ಶನದಲ್ಲಿ ಭಾರತದ ಮೊದಲ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ. ಇದು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ರಾಜ್ಯವನ್ನು ರಾಷ್ಟ್ರೀಯ ನಾಯಕನನ್ನಾಗಿ ಬಲಪಡಿಸಿದೆ. ಖರ್ಗೆ ಅವರ ಯುವ-ಕೇಂದ್ರಿತ ಮತ್ತು ಅಂತರ್ಗತ ವಿಧಾನವು ಕರ್ನಾಟಕವನ್ನು ಜಾಗತಿಕ AI ತಂತ್ರಜ್ಞಾನದ ಕೇಂದ್ರವಾಗಿ ಮತ್ತು ದೇಶೀಯ ನವೋದ್ಯಮಗಳಿಗೆ ಉತ್ತಮ ವೇದಿಕೆಯಾಗಿ ಮಾರ್ಪಡಿಸಿದೆ. 

ಮೊದಲ 9 ಸ್ಥಾನಗಳಲ್ಲಿ ಯಾರ್ಯಾರು ಇದ್ದಾರೆ?

ಪ್ರಿಯಾಂಕ್‌ ಖರ್ಗೆಗೂ ಮೊದಲ ಒಂಬತ್ತು ಸ್ಥಾನಗಳಲ್ಲಿ ಪೀರ್‌ಚೆಕ್‌ನ ಸಹ-ಸಂಸ್ಥಾಪಕ, ಇಂಡಿಯಾ ಎಐ ಮಿಷನ್‌ನಲ್ಲಿ ಸಲಹೆಗಾರ ಆಕೃತ ವೈಶ್ ಮೊದಲ ಸ್ಥಾನದಲ್ಲಿದ್ದಾರೆ. ಇಂಡಿಯಾ ಎಐ ಮಿಷನ್‌ ಸಿಇಒ, ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರದ ಡಿಜಿ ಅಭಿಷೇಕ್ ಸಿಂಗ್ ಎರಡನೇ ಸ್ಥಾನ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಮೂರನೇ ಸ್ಥಾನ, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ನಾಲ್ಕನೇ ಸ್ಥಾನ, ನೀತಿ ಆಯೋಗದಲ್ಲಿ ಫೆಲೋ, NASSCOM ನ ಮಾಜಿ ಅಧ್ಯಕ್ಷೆ ದೇಬ್ಜಾನಿ ಘೋಷ್ ಐದನೇ ಸ್ಥಾನ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ಸಿಇಒ ದಿಲೀಪ್ ಅಸ್ಬೆ ಆರನೇ ಸ್ಥಾನ, ತೆಲಂಗಾಣ ಸರ್ಕಾರದ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವ ದುಡ್ಡಿಲ್ಲಾ ಶ್ರೀಧರ್ ಬಾಬು ಏಳನೇ ಸ್ಥಾನ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಎಂಟನೇ ಸ್ಥಾನದಲ್ಲಿ ಇದ್ದಾರೆ.

ಏನಿದು ಎಐಎಂ? 

ಎಐಎಂ (AIM) ಎಂದರೆ ಅಟಲ್ ಇನ್ನೋವೇಶನ್ ಮಿಷನ್. ಇದು ಭಾರತ ಸರ್ಕಾರವು ದೇಶದಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಸಂಸ್ಕೃತಿ ಉತ್ತೇಜಿಸಲು ಆರಂಭಿಸಿದ ಪ್ರಮುಖ ಯೋಜನೆಯಾಗಿದೆ. 6ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಬೆಳೆಸಲು ಶಾಲೆಗಳಲ್ಲಿ ಈ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು 3ಡಿ ಮುದ್ರಣ, ರೊಬೊಟಿಕ್ಸ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡಬಹುದು.

Tags:    

Similar News