Pooja Hegde: 'ಅಜ್ಜಿ ಸೀರೆ ಉಟ್ಟು ರೆಟ್ರೊ ಲುಕ್‌ನಲ್ಲಿ ಮಿಂಚಿದ 'ರೆಟ್ರೊ ಸಿನಿಮಾದ ನಟಿ ಪೂಜಾ ಹೆಗ್ಡೆ
Pooja Hegde ಪೂಜಾ ಹೆಗ್ಡೆ ಹಸಿರು ಸೀರೆಯುಟ್ಟು, ದುಂಡು ಮಲ್ಲಿಗೆ ಹೂವು ಮುಡಿದು, ಮಧ್ಯ ಬೈತಲೆ ಹಾಕಿ ಕೂದಲು ಲೂಸ್ ಆಗಿ ಬಿಟ್ಟಿರುವ ಪೂಜಾ ಹೆಗ್ಡೆ ವಿಂಟೇಜ್ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.;
ವಿಂಟೇಲ್ ಲುಕ್ ನಲ್ಲಿ ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ ವಿಂಟೇಜ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇವರ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಸಿರು ಬಣ್ಣದ ಚೌಕಳಿ ಸೀರೆಯುಟ್ಟು, ಅದಕ್ಕೆ ನೀಲಿ ಬಣ್ಣದ ಬ್ಲೌಸ್ ಧರಿಸಿದ್ದಾರೆ. 70 ವರ್ಷ ಹಳೆಯದಾದ ತಮ್ಮ ಅಜ್ಜಿಯ ಸೀರೆ ಉಟ್ಟಿರುವುದಾಗಿ ಪೂಜಾ ಹೇಳಿದ್ದಾರೆ.
ನನ್ನ ಸುಂದರ ಅಜ್ಜಿ ಕಾಂಜೀವರಂ ಧರಿಸಿ ದಿನ ಕಳೆಯುತ್ತಿದ್ದ ದೃಶ್ಯಗಳು, ಮದುವೆಗೆ ಹೋಗಲು ಸಿದ್ಧವಾಗುವ ಮೊದಲು ಮನೆಯಲ್ಲಿದ್ದ ಮಂಗಳೂರು ಮಲ್ಲಿಗೆಯ ತಾಜಾ ಸುವಾಸನೆ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರು ಮಣ್ಣಿನ ಸುವಾಸನೆ ಓಹ್, ಸರಳವಾದ ವಸ್ತುಗಳಲ್ಲಿ ಸೌಂದರ್ಯ ಎಷ್ಟು? ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರಾಗಿದ್ದು, ತಾವು ಸ್ಟಾರ್ ಪಟ್ಟ ಪಡೆದರೂ ತಮ್ಮ ಮೂಲ ಮರೆತಿಲ್ಲ. ಮಂಗಳೂರಿನ ಬೀಚ್, ಮಂಗಳೂರು ಮಲ್ಲಿಗೆ, ಭೂತ ಕೋಲ, ನೀರು ದೋಸೆ, ಹಲಸಿನ ಹಣ್ಣು ಇವೆಲ್ಲವನ್ನೂ ಹೆಚ್ಚಾಗಿ ಪೂಜಾ ಹೆಗ್ಡೆ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಹಸಿರು ಸೀರೆಯುಟ್ಟು, ದುಂಡು ಮಲ್ಲಿಗೆ ಹೂವು ಮುಡಿದು, ಮಧ್ಯ ಬೈತಲೆ ಹಾಕಿ ಕೂದಲು ಲೂಸ್ ಆಗಿ ಬಿಟ್ಟಿರುವ ಪೂಜಾ ಹೆಗ್ಡೆ ವಿಂಟೇಜ್ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.
ಪೂಜಾ ಹೆಗ್ಡೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದು, ಇದೀಗ ಸೂರ್ಯ ಜೊತೆ ನಟಿಸಿರುವ ರೆಟ್ರೋ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೇ 1ರಂದು ಈ ಸಿನಿಮಾ ತೆರೆಕಾಣಲಿದೆ. ಸದ್ಯ ಪೂಜಾ ಹೆಗ್ಡೆ ಸಿನಿಮಾ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.