New Year Celebrations | ಹೊಸ ವರ್ಷಾಚರಣೆ ಪ್ಲಾನ್‌ ಮುನ್ನ ಗಮನಿಸಿ ಈ ಹೊಸ ನಿಯಮ

Update: 2024-12-22 08:33 GMT

ಹೊಸ ವರ್ಷ ಇನ್ನೇನು ಕೆಲವೇ ದಿನ ಬಾಕಿ. ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಸ್ವಾಗತಿಸಲು ನೀವೇನಾದರೂ ಭರ್ಜರಿ ಆಚರಣೆಗಳಿಗೆ ಪ್ಲಾನ್ ಮಾಡಿದ್ದರೆ ಖಂಡಿತವಾಗಿಯೂ ಈ ಸುದ್ದಿ ನಿಮಗಾಗಿಯೇ.

ಹೊಸ ವರ್ಷಾಚರಣೆಗಾಗಿ ಭರ್ಜರಿ ಪಟಾಕಿ ಖರೀದಿಸುವ ಯೋಚನೆ ಇದ್ದರೆ, ಭಾರೀ ಲೌಡ್ ಸ್ಪೀಕರ್ ಹಾಕುವ ಯೋಜನೆಯಲ್ಲಿದ್ದರೆ, ಅಂತಹ ಯೋಜನೆಯನ್ನು ಕೈಬಿಡಿ ಎನ್ನುತ್ತಿದೆ ಬೆಂಗಳೂರು ಪೊಲೀಸ್ ಮತ್ತು ಬಿಬಿಎಂಪಿಯ ಹೊಸ ನಿಯಮ!

ಹೊಸ ವರ್ಷಾಚರಣೆಗಾಗಿ ಬೆಂಗಳೂರು ವಾಸಿಗಳು ಸಜ್ಜಾಗುತ್ತಿರುವ ಹೊತ್ತಿಗೇ, ವರ್ಷಾಚರಣೆಯ ಯಡವಟ್ಟುಗಳಿಗೆ, ಅವಘಡಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರು, ಅದಕ್ಕಾಗಿಯೇ ಹಲವು ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ಹೊಸ ನಿಯಮಗಳನ್ನು ಘೋಷಿಸಿದ್ದಾರೆ.

ಹೊಸ ವರ್ಷಾಚರಣೆಯ ಡಿಸೆಂಬರ್ 31ರ ರಾತ್ರಿ ಪ್ರತಿವರ್ಷ ಸಂಭವಿಸುವ ಅವಘಡಗಳು ಮತ್ತು ಅಪರಾಧ ಕೃತ್ಯಗಳನ್ನು ತಡೆಯಲು ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರು ಜಂಟಿ ಸಭೆ ನಡೆಸಿದ್ದು, ಸಭೆಯಲ್ಲಿ ಕೆಲವು ಕ್ರಮಗಳನ್ನು ಅಂತಿಮಗೊಳಿಸಿದ್ದಾರೆ.

ಹೊಸ ವರ್ಷಾಚರಣೆಯ ಸಂಭ್ರಮಾಚರಣೆಗೆ ಹೆಸರಾಗಿರುವ ಬೆಂಗಳೂರಿನ ಬ್ರಿಗೇಡ್ ರಸ್ತೆ, ಎಂ ಜಿ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರ ಭಾಗದಲ್ಲಿ ಈ ಬಾರಿ ಹಲವು ಮುಂಜಾಗ್ರತಾ ಕ್ರಮಗಳು ಮತ್ತು ಹೊಸ ನಿಯಮಗಳನ್ನು ಜಾರಿಗೆ ತರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹಾಗಾದರೆ, ಈ ವರ್ಷದ ಹೊಸ ವರ್ಷಾಚರಣೆಗಾಗಿ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರು ಜಾರಿಗೆ ತರುತ್ತಿರುವ ಹೊಸ ಕ್ರಮಗಳು, ಹೊಸ ನಿಯಮಗಳೇನು ಎಂದರೆ, ಈ ವಿವರ ಗಮನಿಸಿ;

  • ನಗರದ ವಿವಿಧ ಭಾಗಗಳಲ್ಲಿ ಹೊಸ ವರ್ಷ ಆಚರಣೆಗೆ ಅನುಮತಿ ಕಡ್ಡಾಯ
  • ನಗರಾದ್ಯಂತ ಹೊಸ ವರ್ಷಾಚರಣೆಗೆ ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ
  • ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ
  • ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್
  • ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು
  • ಬಾರ್, ಪಬ್ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ಗೆ ಸೂಚನೆ
  • ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್ಗಳು ಬಂದ್ ಆಗಲಿವೆ
  • ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ
  • ಪೊಲೀಸರು ಬ್ಯಾರಿಕೇಡ್ ಹಾಕಿ ನಿಗದಿಪಡಿಸಿದ ಜಾಗದಲ್ಲೇ ಕಸ ವಿಲೇವಾರಿ ಮಾಡಬೇಕು
Tags:    

Similar News