ವೈರಲ್‌ ವಿಡಿಯೋ | ಹುಲಿ ದಾಳಿಯಿಂದ ಮರಿಯಾನೆ ಸಾವು; ತಾಯಿ ಆನೆಯ ಆಕ್ರಂದನ

ಹುಲಿ ದಾಳಿಯಿಂದ ಮರಿ ಆನೆ ಸಾವಿಗೀಡಾದ ಘಟನೆ ಬಂಡೀಪುರ ಅರಣ್ಯದಲ್ಲಿ ನಡೆದಿದ್ದು, ತಾಯಿ ಆನೆಯು ಸಾವನ್ನಪ್ಪಿದ ಮರಿಯ ಶವ ಬಿಟ್ಟು ಕದಲದೇ ಮೂಕರೋದನೆಯ ಮನಕಲಕುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.;

Update: 2024-04-20 14:06 GMT
ಆನೆಯ ಶವ ಬಿಟ್ಟು ಕದಲದೇ ಕಾದು ಕುಳಿತ್ತಿದ್ದ ಮನಕಲಕುವ ಈ ದೃಶ್ಯ ಕಂಡುಬಂದಿತ್ತು.
Click the Play button to listen to article

ಚಾಮರಾಜನಗರ: ಹುಲಿ ದಾಳಿಯಿಂದ ಮರಿ ಆನೆ ಸಾವಿಗೀಡಾದ ಘಟನೆ ಬಂಡೀಪುರ ಅರಣ್ಯದಲ್ಲಿ ನಡೆದಿದ್ದು, ತಾಯಿ ಆನೆಯು ಸಾವನ್ನಪ್ಪಿದ ಮರಿ ಆನೆಯ ಶವ ಬಿಟ್ಟು ಕದಲದೇ ಮೂಕ ರೋಧನೆಯ ಮನಕಲಕುವ ವಿಡಿಯೋ ವೈರಲ್‌ ಆಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ದಾಳಿಯಿಂದ ಮರಿ ಆನೆ ಸಾವನ್ನಪ್ಪಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಮರಿಯಾನೆಯ ತಾಯಿ, ತನ್ನ ಮರಿಯ ಶವವನ್ನು ಬಿಟ್ಟು ಕದಲದೆ ಕಣ್ಣೀರು ಹಾಕುತ್ತಾ ರೋಧಿಸುತ್ತಿರುವ ಮನಕಲಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನು ಕಂಡ ಸಾವಿರಾರು ಪ್ರಯಾಣಿಕರು, ಅಲ್ಲಿ ನೆರೆದಿದ್ದ ಜನರು ಕೂಡ ಕಣ್ಣೀರಿಟ್ಟ ಘಟನೆ ನಡೆದಿದೆ. ಮತ್ತೊಂದೆಡೆ ರಸ್ತೆ ಪಕ್ಕದಲ್ಲೇ ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು- ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟರು.

Tags:    

Similar News