ಹಾಲಿನ ದರ ಏರಿಕೆ ಪ್ರಸ್ತಾಪ | ಗ್ರಾಹಕರಿಗೆ ತಟ್ಟಲಿದೆ ಹಾಲಿನ ಬಿಸಿ

ಪ್ರತಿ ಲೀಟರ್‌ ಹಾಲಿನ ದರವನ್ನು 5 ರೂ. ಹೆಚ್ಚಿಸುವ ಪ್ರಸ್ತಾಪವನ್ನು ಹಾಲು ಒಕ್ಕೂಟಗಳು ಹಾಗೂ ಹಾಲು ಉತ್ಪಾದಕರು ಬೇಡಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹಾಲಿನ ದರ ಏರಿಸುವ ಪ್ರಸ್ತಾಪವನ್ನು ಕೆಂಎಂಎಫ್‌ ಸರ್ಕಾರದ ಮುಂದಿಟ್ಟಿದೆ.

Update: 2024-12-08 06:34 GMT

ಗ್ರಾಹಕರಿಗೆ ಮತ್ತೊಮ್ಮೆ ಹಾಲಿ ದರ ಏರಿಕೆಯ ಬಿಸಿ ತಟ್ಟಲಿದೆ. ಕಳೆದ ಜೂನ್‌ ತಿಂಗಳಲ್ಲಷ್ಟೇ ಲೀಟರ್‌ ಹಾಲಿನ ಪ್ರಮಾಣ 50 ಮಿಲಿ ಲೀಟರ್‌ ಹೆಚ್ಚಿಸಿ 2 ರೂ. ದರ ಏರಿಕೆ ಮಾಡಿತ್ತು. ಪ್ರಸ್ತುತ ಒಂದು ಲೀಟರ್‌ ಹಾಲಿನ ದರ 44 ರೂ. ಆಗಿದೆ. ಈಗ ಲೀಟರ್‌ ಹಾಲಿನ ದರವನ್ನು  5ರೂ. ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಹಾಗೂ ಹಾಲು ಉತ್ಪಾದಕರು ಬೇಡಿಕೆ ಸಲ್ಲಿಸಿರುವುದರಿಂದ ಗ್ರಾಹಕರಲ್ಲಿ ಬೆಲೆ ಏರಿಕೆಹೆ ಬಿಸಿ ತಟ್ಟಲಿದೆ.  

ಹಾಲಿನ ದರ ಏರಿಸುವ ಪ್ರಸ್ತಾಪವನ್ನು ಕೆಂಎಂಎಫ್‌ ಸರ್ಕಾರದ ಮುಂದಿಟ್ಟಿದೆ. ಪ್ರತಿ ಲೀಟರ್‌ ಹಾಲಿನ ದರವನ್ನು 5 ರೂ. ಹೆಚ್ಚಿಸುವ ಪ್ರಸ್ತಾಪವನ್ನು ಹಾಲು ಒಕ್ಕೂಟಗಳು ಹಾಗೂ ಹಾಲು ಉತ್ಪಾದಕರು ಬೇಡಿಕೆ ಸಲ್ಲಿಸಿದ್ದರು. ಅದರಂತೆ ಚಳಿಗಾಲದ ಅಧಿವೇಶನದ ಬಳಿಕ ದರ ಏರಿಕೆ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಜನವರಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದ್ದಾರೆ. ಆದರೆ, ಭೀಮಾನಾಯ್ಕ್‌ ಈ ಹಿಂದೆ ಹಾಲಿ ದರ ಏರಿಸುವ ಪ್ರಸ್ತಾವ ಇಲ್ಲ ಎಂದು ಹೇಳಿದ್ದರು. 

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಈಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ರೈತರ ಪ್ರತಿ ಲೀಟರ್‌ ಹಾಲಿನ ದರವನ್ನು 5ರೂ. ಹೆಚ್ಚಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಚರ್ಚಿಸಿ ಈ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು.

ಕಳೆದ ಜೂನ್‌ ತಿಂಗಳಲ್ಲಿ ಪ್ರತಿ ಲೀಟರ್ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್ ಹೆಚ್ಚಿಸಿ 2 ರೂಪಾಯಿ ಏರಿಕೆ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ, ಎರಡು ಬಾರಿ ರೈತರಿಂದ ಹಾಲಿನ ಖರೀದಿ ದರವನ್ನು ಇಳಿಕೆ ಮಾಡಿತ್ತು.

Tags:    

Similar News