'ಮನ್ ಕಿ ಬಾತ್'ನಲ್ಲಿ ಕಲಬುರಗಿ ರೊಟ್ಟಿ ಪ್ರಸ್ತಾಪ ; ರಾಜ್ಯದ 'ಕಾಮ್ ಕಿ ಬಾತ್' ಯಶಸ್ಸು ಎಂದ ಸಚಿವ ಪ್ರಿಯಾಂಕ್ ಖರ್ಗೆ

ಬ್ರ್ಯಾಂಡಿಂಗ್ ಗಾಗಿ ರಾಜ್ಯ ಸರ್ಕಾರ ಸೀಡ್ ಫಂಡ್ ಒದಗಿಸಿದೆ. ಸ್ವಸಹಾಯ ಸಂಘಗಳು ಹಾಗೂ ಇತರ ಉತ್ಸಾಹಿ ಮಹಿಳೆಯರಿಗೆ ಸಬ್ಸಿಡಿಯಲ್ಲಿ ಸುಮಾರು 150 ರೊಟ್ಟಿ ಯಂತ್ರಗಳನ್ನು ಒದಗಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.;

Update: 2025-06-29 14:13 GMT

ಕಲಬುರಗಿ ರೊಟ್ಟಿಗಳಿಗೆ ಆನ್ ಲೈನ್ ಮಾರುಕಟ್ಟೆ ಸೃಷ್ಟಿಸಿ, ಬ್ರ್ಯಾಂಡ್ ರೂಪಿಸಿದ ಪರಿಣಾಮ “ಕಲಬುರಗಿ ರೊಟ್ಟಿ”ಗಳು ಇಂದು ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ಒದಗಿಸಿದೆ. ರೊಟ್ಟಿಗಳ ಘಮ ಪ್ರಧಾನಿಯವರಿಗೂ ತಲುಪಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

‘ಎಕ್ಸ್’ ನಲ್ಲಿ ಈ ಬಗ್ಗೆ ಬರೆದಿರುವ ಸಚಿವರು, ನಮ್ಮ ‘ಕಾಮ್ ಕಿ ಬಾತ್’ನ ಯಶಸ್ಸನ್ನು ಪ್ರಧಾನಿಯವರು ‘ಮನ್ ಕಿ ಬಾತ್’ ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳುವ ಮೂಲಕ ಕಲಬುರಗಿ ರೊಟ್ಟಿ ಯಶಸ್ಸಿನ ಕಥೆಯ ಹಿಂದೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ್ದಾರೆ.

ಬ್ರ್ಯಾಂಡಿಂಗ್ ಗಾಗಿ ರಾಜ್ಯ ಸರ್ಕಾರ ಸೀಡ್ ಫಂಡ್ ಒದಗಿಸಿದೆ. ಸ್ವಸಹಾಯ ಸಂಘಗಳು ಹಾಗೂ ಇತರ ಉತ್ಸಾಹಿ ಮಹಿಳೆಯರಿಗೆ ಸಬ್ಸಿಡಿಯಲ್ಲಿ ಸುಮಾರು 150 ರೊಟ್ಟಿ ಯಂತ್ರಗಳನ್ನು ಒದಗಿಸಲಾಗಿದೆ. ಸಿ.ಎಸ್.ಆರ್ ನಿಧಿಯ ಮೂಲಕ ₹6.5 ಲಕ್ಷ ಒದಗಿಸಲಾಗಿದೆ. ಪ್ಯಾಕಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ನಲ್ಲಿ ನೆರವು ನೀಡಲಾಗುತ್ತಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲೂ ಮಾರುಕಟ್ಟೆ ವಿಸ್ತರಿಸಲಾಗುತ್ತಿದೆ‌ ಎಂದು ಹೇಳಿದ್ದಾರೆ.

ಸ್ವಿಗ್ಗಿ, ಜೊಮೊಟೊ, ಆಮೇಜಾನ್ ಸೇರಿದಂತೆ ಹಲವು ಆನ್ ಲೈನ್ ಪ್ಲಾಟ್ ಫಾರಂಗಳಲ್ಲೂ ಕಲಬುರಗಿ ರೊಟ್ಟಿಗೆ ಮಾರುಕಟ್ಟೆ ಸೃಷ್ಟಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ “ಕಾಮ್ ಕಿ ಬಾತ್”. “ರಿಪಬ್ಲಿಕ್ ಆಫ್ ಕಲಬುರಗಿ“ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸ್ವತಃ ಪ್ರಧಾನಿಗಳೇ ”ಸಕ್ಸಸ್ ಸ್ಟೋರಿಸ್ ಆಫ್ ಕಲಬುರಗಿ” ಎಂಬ ಉತ್ತರ ನೀಡಿದ್ದಾರೆ ಎಂದು  ಹೇಳಿದ್ದಾರೆ

Tags:    

Similar News