ಮಹಾರಾಷ್ಟ್ರ ಸರಗಳ್ಳತನ ಗ್ಯಾಂಗ್‌ನನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಮಾರ್ಚ್ 3 ರಂದು, ಶಾಹಿದ್ ಮತ್ತು ಅವನ ಸಹಚರರು ಕಾರಿನಲ್ಲಿ ಒಂದು ನಿರ್ದಿಷ್ಟ ಸ್ಥಳಕ್ಕೆ ದಾರಿ ಕೇಳುತ್ತಿರುವಂತೆ ನಟಿಸಿ ವೃದ್ಧ ಮಹಿಳೆಯ ಬಳಿಗೆ ಹೋಗಿ, ಆಕೆಯ ಕತ್ತಿನ ಸರ ಕದ್ದು ಪರಾರಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.;
ಸರಗಳ್ಳತನದ ಗ್ಯಾಂಗ್‌ನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಒಂಟಿ ಮಹಿಳೆಯರನ್ನು ಗುರಿಯಾಗಿಸಿಟ್ಟುಕೊಂಡು ಬೆಂಗಳೂರು ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕುಖ್ಯಾತ ರೌಡಿಶೀಟರ್ ಸೇರಿ ನಾಲ್ವರು ಆರೋಪಿಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 3 ರಂದು ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿ ವೃದ್ಧ ಮಹಿಳೆಯೊಬ್ಬರ ಚಿನ್ನದ ಸರವನ್ನು ಈ ಗ್ಯಾಂಗ್ ದೋಚಿತ್ತು. . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜೆ.ಸಿ.ನಗರ ಇನ್ಸ್ಪೆಕ್ಟರ್ ಚೈತನ್ಯ ನೇತೃತ್ವದ ತಂಡವು ತನಿಖೆ ನಡೆಸಿ ನಾಗಪುರದ ಮೂಲದ ರೌಡಿಶೀಟರ್ ಶಾಹಿದ್, ಶಬೀರ್, ತನ್ವೀರ್, ಅಲಿನಕಿ ಎಂಬುವರನ್ನು ಬಂಧಿಸಿ ಅವರಿಂದ 6 ಲಕ್ಷ ಮೌಲ್ಯದ 87 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಹಿದ್ ಈ ಹಿಂದೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಜೈಲಿನಲ್ಲಿದ್ದು ಜನವರಿಯಲ್ಲಿ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾಗುತ್ತಲೇ ಶಾಹಿದ್ ಹೊಸ ಗ್ಯಾಂಗ್ ರಚಿಸಿ ಸೆಕೆಂಡ್ ಹ್ಯಾಂಡ್ ಮೋಟಾರ್ ಸೈಕಲ್‌ನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ. ಗಾಡಿಯ ನೋಂದಣಿ ಸಂಖ್ಯೆಯನ್ನು ಕೂಡ ತಿರುಚಿಸಿದ್ದ. ಮಾರ್ಚ್ 3 ರಂದು, ಶಾಹಿದ್ ಮತ್ತು ಅವನ ಸಹಚರರು ಕಾರಿನಲ್ಲಿ ಒಂದು ನಿರ್ದಿಷ್ಟ ಸ್ಥಳಕ್ಕೆ ದಾರಿ ಕೇಳುತ್ತಿರುವಂತೆ ನಟಿಸಿ ವೃದ್ಧ ಮಹಿಳೆಯ ಬಳಿಗೆ ಹೋಗಿ, ಆಕೆಯ ಕತ್ತಿನ ಸರ ಕದ್ದು ಸ್ಥಳದಿಂದ ಪರಾರಿಯಾಗಿದ್ದರು.
ಸರಗಳ್ಳರ ಚಲನವಲನ ಬಗ್ಗೆ ಪೊಲೀಸರು ಕಣ್ಣಿಟ್ಟಿದ್ದರು. ಈ ಗ್ಯಾಂಗ್ ಕೃತ್ಯವೆಸಗಲು ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಮೂಲಕ ಮೈಸೂರಿಗೆ ತೆರಳಿ ಸರಗಳ್ಳತನಕ್ಕೆ ಯತ್ನಕ್ಕೆ ಮುಂದಾಗಿದ್ದಾಗ ಆರೋಪಿಗಳನ್ನ ಸೆರೆಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.