ನಮ್ಮ ಮೆಟ್ರೊದಲ್ಲಿ ಜೀವಂತ ಯಕೃತ್​​ ಸಾಗಣೆ; ಮೊದಲ ಬಾರಿಗೆ ಮೆಟ್ರೋದಲ್ಲಿ ಅಂಗಾಂಗ ಸಾಗಣೆ

ವೈದ್ಯರು ಮತ್ತು ಭದ್ರತಾ ಸಿಬ್ಬಂದಿಯ ತಂಡವು ವಿಶೇಷ ಪೆಟ್ಟಿಗೆಯಲ್ಲಿ ಯಕೃತ್ತನ್ನು ಹೊತ್ತು ಮೆಟ್ರೋದಲ್ಲಿ ಪ್ರಯಾಣಿಸಿ, ನಿಗದಿತ ಸಮಯದೊಳಗೆ ಆಸ್ಪತ್ರೆಗೆ ತಲುಪಿಸುವ ಮೂಲಕ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿತು.;

Update: 2025-08-02 10:28 GMT

ನಮ್ಮ ಮೆಟ್ರೋದಲ್ಲಿ ಅಂಗಾಂಗ ಸಾಗಣೆ ಮಾಡಿದ ವೈದ್ಯರು

ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ, ಜೀವ ಉಳಿಸುವ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ 'ನಮ್ಮ ಮೆಟ್ರೋ'ವನ್ನು ಬಳಸಿಕೊಂಡು ಯಕೃತ್ತನ್ನು (ಲಿವರ್) ಯಶಸ್ವಿಯಾಗಿ ಸಾಗಿಸಲಾಗಿದೆ. ನಗರದ ಟ್ರಾಫಿಕ್ ದಟ್ಟಣೆಯನ್ನು ಮೀರಿ ವೈಟ್​​ಫೀಲ್ಡ್​​ನಿಂದ ರಾಜರಾಜೇಶ್ವರಿ ನಗರಕ್ಕೆ ಅಂಗಾಂಗವನ್ನು ಕ್ಷಿಪ್ರವಾಗಿ ತಲುಪಿಸುವ ಮೂಲಕ ಇದು ಐತಿಹಾಸಿಕ ಮೈಲುಗಲ್ಲು ಸೃಷ್ಟಿಸಲಾಗಿದೆ.


Full View


ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಯಲ್ಲಿ ಯಕೃತ್ ಲಭ್ಯವಿತ್ತು, ಆದರೆ ಅದನ್ನು ರಾಜರಾಜೇಶ್ವರಿ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ತುರ್ತಾಗಿ ಕಸಿ ಮಾಡಬೇಕಿತ್ತು. ರಸ್ತೆ ಸಾರಿಗೆಯಲ್ಲಿ ಟ್ರಾಫಿಕ್‌ನಿಂದಾಗಿ ಆಗಬಹುದಾದ ವಿಳಂಬದ ಅಪಾಯವನ್ನು ಅರಿತ ವೈದ್ಯರ ತಂಡವು, ಮೆಟ್ರೋ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ವೈದ್ಯರು ಮತ್ತು ಭದ್ರತಾ ಸಿಬ್ಬಂದಿಯ ತಂಡವು ವಿಶೇಷ ಪೆಟ್ಟಿಗೆಯಲ್ಲಿ ಯಕೃತ್ತನ್ನು ಹೊತ್ತು ಮೆಟ್ರೋದಲ್ಲಿ ಪ್ರಯಾಣಿಸಿ, ನಿಗದಿತ ಸಮಯದೊಳಗೆ ಆಸ್ಪತ್ರೆಗೆ ತಲುಪಿಸುವ ಮೂಲಕ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿತು.

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆ

ಈ ಯಶಸ್ವಿ ಕಾರ್ಯಾಚರಣೆಯು ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ. ರಸ್ತೆಗಳಲ್ಲಿ 'ಗ್ರೀನ್ ಕಾರಿಡಾರ್' ನಿರ್ಮಿಸುವುದು ಸವಾಲಿನ ಕೆಲಸವಾಗಿರುವಾಗ, ಮೆಟ್ರೋ ಮಾರ್ಗವು ವೇಗ ಮತ್ತು ಸುರಕ್ಷತೆಯ ಭರವಸೆ ಮೂಡಿಸಿದೆ. ವೈದೇಹಿ ಆಸ್ಪತ್ರೆ ಹಾಗೂ ಅನುಗ್ರಹಾ ಸ್ಪೆಷಾಲಿಟಿ ಕ್ಲಿನಿಕ್ನಂತಹ ಸಂಸ್ಥೆಗಳು ಯಕೃತ್ ಕಸಿ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಘಟನೆಯು ಬೆಂಗಳೂರಿನ ವೈದ್ಯಕೀಯ ಕ್ಷೇತ್ರದ ಮುನ್ನಡೆಗೆ ಮತ್ತಷ್ಟು ಬಲ ತುಂಬಿದೆ.

Tags:    

Similar News