ದೂರು ನೀಡಿದ್ದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರವು ಮೈಕ್ರೊ ಫೈನಾನ್ಸ್‌ಗಳ ಕಿರುಕುಳವನ್ನು ತಪ್ಪಿಸಲು ಸಾಲಗಾರರ ಹಿತರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲಿದೆ.;

Update: 2025-01-26 12:51 GMT
ಮುಖ್ಯಮಂತ್ರಿ ಸಿದ್ದರಾಮಯ್ಯ

ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳಿಂದ ಜನಸಾಮಾನ್ಯರ ಮೇಲಾಗುತ್ತಿರುವ ಕಿರುಕುಳ ಹೆಚ್ಚುತ್ತಿರುವ ಮಾಹಿತಿ ಬಂದಿದೆ. ದೌರ್ಜನ್ಯ ಮಾಡುವವರ ವಿರುದ್ಧ ದೂರು ನೀಡಿದ್ದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಿರುಕುಳದ ಬಗ್ಗೆ ದೂರು ನೀಡುವಂತೆ ಸಾರ್ವಜನಿಕರಿಗೆ ಕರೆ ಕೊಟ್ಟರು.

ಮೈಕ್ರೋಫೈನಾನ್ಸ್ ಸಂಸ್ಥೆ ಅಥವಾ ಲೇವಾದೇವಿಗಾರರ ನೀಡುವ ತೊಂದರೆಗಳ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ರಾಜ್ಯ ಸರ್ಕಾರವು ಕಿರುಕುಳ ತಪ್ಪಿಸಲು ಸಾಲಗಾರರ ಹಿತರಕ್ಷಣೆಗಾಗಿ ಸುಗ್ರೀವಾಜ್ಞೆಮೂಲಕ ಹೊಸ ಕಾನೂನು ಜಾರಿ ಮಾಡಲಿದೆ. ನಿಯಮ ಮೀರಿದ ವ್ಯವಹಾರ ಮತ್ತು ಬಲವಂತದ ಸಾಲ ವಸೂಲಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ನಿರ್ಣಯ ಮಾಡಿದೆ ಎಂದು ಹೇಳಿದರು.

ಮೈಕ್ರೊ ಫೈನಾನ್ಸ್‌ಗಳ ಮೂಲಕ ಮಹಿಳೆಯರು ಮತ್ತು ವೃದ್ಧರ ಮೇಲೂ ದಬ್ಬಾಳಿಕೆ ನಡೆಸಿದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Tags:    

Similar News