ಸೋನಲ್‌ ಮೊಂಥೆರೋ ನಟನೆಯ ʻರೋಲೆಕ್ಸ್ʼ ಚಿತ್ರೀಕರಣ ಬಹುತೇಕ ಮುಕ್ತಾಯ

ನಾಯಕ ಕೋಮಲ್ ಕುಮಾರ್ ಅವರು ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆ.;

Update: 2025-08-08 10:58 GMT

ನಾಯಕನಾಗಿ ಕೋಮಲ್ ಕುಮಾರ್ ಹಾಗೂ ಸೋನಾಲ್ ಮೊಂತೆರೊ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮಧು ಫಿಲಂ ಸರ್ಕ್ಯೂಟ್ಸ್ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ಅವರು ನಿರ್ಮಿಸುತ್ತಿರುವ ಕನ್ನಡದ ಹೊಸ ಚಿತ್ರ 'ರೋಲೆಕ್ಸ್' ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈ ಹಿಂದೆ 'ಬಿಲ್ ಗೇಟ್ಸ್' ಚಿತ್ರವನ್ನು ವಿ.ಸಿ. ಶ್ರೀನಿವಾಸ್ ಅವರು ನಿರ್ದೇಶಿಸುತ್ತಿದ್ದಾರೆ.

ನಾಯಕ ಕೋಮಲ್ ಕುಮಾರ್ ಅವರು ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆ. 

ಕೇವಲ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಆ ಎರಡು ಹಾಡುಗಳ ಶೂಟಿಂಗ್‌ ನಂತರ ಚಿತ್ರದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಚಿತ್ರದಲ್ಲಿ ಕೋಮಲ್ ಕುಮಾರ್ ಜೊತೆಗೆ ಸೋನಾಲ್ ಮೊಂತೆರೊ, ಅಚ್ಯುತಕುಮಾರ್, ನವೀನ್ ಪಡೀಲ್, ಅರುಣ ಬಾಲರಾಜ್ ಮತ್ತು ನಿರ್ಮಾಪಕ ಅಂಬಟಿ ಮಧು ಮೋಹನಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ ಮತ್ತು ಮುರಳಿಕೃಷ್ಣ ಅವರ ನಿರ್ಮಾಣ ನಿರ್ವಹಣೆ ಇದೆ. 

Tags:    

Similar News