ಹಾವು ಕಡಿತ ಪ್ರಕರಣ ಅಧಿಸೂಚಿತ ಪಟ್ಟಿಗೆ ಸೇರ್ಪಡೆ

ಕರ್ನಾಟಕ ಸರ್ಕಾರವು ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಲ್ಲಿನ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಹಾವು ಕಡಿತವನ್ನು ರಾಜ್ಯದಲ್ಲಿ ಅಧಿಸೂಚಿತ ಖಾಯಿಲೆ ಎಂದು ಘೋಷಿಸಿದೆ.;

Update: 2024-02-20 05:53 GMT
ಹಾವು ಕಡಿತದ ಎಲ್ಲಾ ಪ್ರಕರಣಗಳನ್ನು ದಾಖಲಿಸಲು ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯದ ಆರೋಗ್ಯ ಸೌಲಭ್ಯಗಳಿಗೆ ನಿರ್ದೇಶನ ನೀಡಿದೆ.
Click the Play button to listen to article

ಬೆಂಗಳೂರು: ಕರ್ನಾಟಕ ಸರ್ಕಾರವು ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಲ್ಲಿನ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಹಾವು ಕಡಿತವನ್ನು ರಾಜ್ಯದಲ್ಲಿ ಅಧಿಸೂಚಿತ ಖಾಯಿಲೆ ಎಂದು ಘೋಷಿಸಿದೆ.

ಫೆಬ್ರವರಿ 12 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಕರ್ನಾಟಕ ಆರೋಗ್ಯ ಇಲಾಖೆಯು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಹಾವು ಕಡಿತದ ಎಲ್ಲಾ ಪ್ರಕರಣಗಳನ್ನು ಒಳರೋಗಿಗಳು, ಹೊರರೋಗಿಗಳು ಮತ್ತು ಸಾವಿನ ಪ್ರಕರಣಗಳೇ ಆಗಿರಲಿ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಲ್ಲಿ ನೋಂದಾಯಿಸಬೇಕು ಎಂದು ನಿರ್ದೇಶಿಸಿದೆ.

ರಾಜ್ಯದಲ್ಲಿ ಯಾವುದೇ ಹಾವು ಕಡಿತದ ಪ್ರಕರಣವನ್ನು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಸಲ್ಲಿಸಿದರೆ, ರಾಜ್ಯ ಸರ್ಕಾರದ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಅಡಿಯಲ್ಲಿ ವರದಿ ಮಾಡಬೇಕು. ಕರ್ನಾಟಕದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಮತ್ತು ಮಾಹಿತಿಯ ಪ್ರಕಾರ, 2023 ರಲ್ಲಿ ರಾಜ್ಯದಲ್ಲಿ 5,316 ಹಾವು ಕಡಿತಗಳು ದಾಖಲಾಗಿವೆ.

ಈ ಕ್ರಮವನ್ನು ಸ್ವಾಗತಿಸಿದ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್‌ (ಎಚ್ಎಸ್ಐ) ಇಂಡಿಯಾ, ಹಾವು ಕಡಿತದ ಹೊರೆಯನ್ನು ಕಡಿಮೆ ಮಾಡಲು ಸರ್ಕಾರದ ಕಣ್ಗಾವಲು ಕ್ರಮಗಳನ್ನು ಶ್ಲಾಘಿಗಿಸಿದೆ. ಹಾಗೂ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಇದೆ.


Tags:    

Similar News